ಟಿ20 ವಿಶ್ವಕಪ್‌: ಹೇಗಿದೆ ಭಾರತ, ಆಸೀಸ್‌ ತಂಡಗಳ ಸೆಮೀಸ್‌ ರೇಸ್‌?

| Published : Jun 24 2024, 01:39 AM IST / Updated: Jun 24 2024, 03:21 AM IST

ಟಿ20 ವಿಶ್ವಕಪ್‌: ಹೇಗಿದೆ ಭಾರತ, ಆಸೀಸ್‌ ತಂಡಗಳ ಸೆಮೀಸ್‌ ರೇಸ್‌?
Share this Article
  • FB
  • TW
  • Linkdin
  • Email

ಸಾರಾಂಶ

ಸೂಪರ್‌-8 ಹಂತದ ಗುಂಪು-1ರಲ್ಲಿ ಸೆಮಿಫೈನಲ್‌ಗೇರಲು ಭಾರತ, ಆಸ್ಟ್ರೇಲಿಯಾ, ಅಫ್ಘಾನಿಸ್ತಾನ, ಬಾಂಗ್ಲಾದೇಶ ಈ ಎಲ್ಲಾ 4 ತಂಡಗಳಿಗೂ ಅವಕಾಶವಿದೆ.

ಸೇಂಟ್‌ ಲೂಸಿಯಾ: ಈ ಬಾರಿ ಟಿ20 ವಿಶ್ವಕಪ್‌ನ ಸೂಪರ್‌-8 ಹಂತದ ಗುಂಪು-1ರಲ್ಲಿ ಸೆಮಿಫೈನಲ್‌ಗೇರಲು ಭಾರತ, ಆಸ್ಟ್ರೇಲಿಯಾ, ಅಫ್ಘಾನಿಸ್ತಾನ, ಬಾಂಗ್ಲಾದೇಶ ಈ ಎಲ್ಲಾ 4 ತಂಡಗಳಿಗೂ ಅವಕಾಶವಿದೆ. 

ಕೊನೆ ಪಂದ್ಯದಲ್ಲಿ ಭಾರತ ವಿರುದ್ಧ ಆಸ್ಟ್ರೇಲಿಯಾ ಸೆಣಸಲಿದ್ದರೆ, ಅಫ್ಘಾನಿಸ್ತಾನಕ್ಕೆ ಬಾಂಗ್ಲಾ ಸವಾಲು ಎದುರಾಗಲಿದೆ. ತಂಡಗಳ ನಡುವಿನ ಸೆಮೀಸ್‌ ರೇಸ್‌ ಹೇಗಿದೆ ಎಂಬುದರ ವಿವರಣೆ ಇಲ್ಲಿದೆ.

1. ಭಾರತ ಮತ್ತು ಬಾಂಗ್ಲಾ ಗೆದ್ದರೆ

ಆಗ ಭಾರತದ ಅಂಕ 6 ಆಗಲಿದ್ದು, ಅಗ್ರಸ್ಥಾನಿಯಾಗಿ ಸೆಮೀಸ್‌ಗೇರಲಿದೆ. ಆಸೀಸ್‌, ಬಾಂಗ್ಲಾ, ಆಫ್ಘನ್‌ನ ಅಂಕಗಳು ತಲಾ 2 ಆಗಲಿವೆ. ಆಸೀಸ್‌ನ ನೆಟ್‌ ರನ್‌ರೇಟ್‌ ಉತ್ತಮವಾಗಿರುವ ಕಾರಣ ಸೆಮೀಸ್‌ಗೇರುವ ಸಾಧ್ಯತೆ ಹೆಚ್ಚು. ಆಸೀಸ್‌ 31ಕ್ಕಿಂತ ಹೆಚ್ಚು ರನ್‌ ಅಂತರದಲ್ಲಿ ಸೋತರೆ ಮಾತ್ರ ನೆಟ್‌ ರನ್‌ರೇಟ್‌ನಲ್ಲಿ ಆಫ್ಘನ್‌ಗಿಂತ ಹಿಂದಕ್ಕೆ ಬೀಳಲಿದೆ. ಈ 2 ತಂಡಗಳನ್ನೂ ನೆಟ್‌ ರನ್‌ರೇಟ್‌ನಲ್ಲಿ ಬಾಂಗ್ಲಾ ಹಿಂದಿಕ್ಕಬೇಕಿದ್ದರೆ, ಆಫ್ಘನ್‌ ವಿರುದ್ಧ ಬಾಂಗ್ಲಾ 31 ರನ್‌ನಿಂದ ಸೋಲಬೇಕು. ಭಾರತ ವಿರುದ್ಧ ಆಸೀಸ್‌ 55 ರನ್‌ನಲ್ಲಿ ಸೋಲಬೇಕು.

2. ಭಾರತ ಮತ್ತು ಆಫ್ಘನ್‌ ಗೆದ್ದರೆ

ಆಗ ಭಾರತ 6 ಅಂಕದೊಂದಿಗೆ ಅಗ್ರಸ್ಥಾನ ಪಡೆಯಲಿದ್ದು, ಆಫ್ಘನ್‌ 4 ಅಂಕದೊಂದಿಗೆ ಗುಂಪಿನಲ್ಲಿ 2ನೇ ಸ್ಥಾನಿಯಾಗಿ ಸೆಮಿಫೈನಲ್‌ ಪ್ರವೇಶಿಸಲಿದೆ.

3. ಆಸೀಸ್‌ ಮತ್ತು ಆಫ್ಘನ್‌ ಗೆದ್ದರೆ

ಆಗ ಭಾರತ, ಆಸೀಸ್‌ ಹಾಗೂ ಆಫ್ಘನ್‌ಗೆ ತಲಾ 4 ಆಗುತ್ತದೆ. ನೆಟ್‌ ರನ್‌ರೇಟ್‌ನಲ್ಲಿ ಮುಂದಿರುವ 2 ತಂಡಗಳು ಸೆಮೀಸ್‌ಗೇರಲಿವೆ. ಭಾರತವನ್ನು ಹಿಂದಿಕ್ಕಬೇಕಿದ್ದರೆ ಆಸೀಸ್‌ ಹಾಗೂ ಆಫ್ಘನ್‌ಗೆ ದೊಡ್ಡ ಅಂತರದ ಗೆಲುವು ಅಗತ್ಯವಿದೆ. ಭಾರತ ವಿರುದ್ಧ ಆಸೀಸ್‌ 41 ರನ್‌ ಅಂತರದಲ್ಲಿ ಗೆದ್ದರೆ ನೆಟ್‌ ರನ್‌ರೇಟ್‌ನಲ್ಲಿ ಭಾರತವನ್ನು ಹಿಂದಿಕ್ಕಲಿದೆ. ಅತ್ತ ಆಫ್ಘನ್‌ ತಂಡ ಬಾಂಗ್ಲಾವನ್ನು 83 ರನ್‌ನಿಂದ ಸೋಲಿಸಿದರೆ ಭಾರತ 3ನೇ ಸ್ಥಾನಕ್ಕೆ ಕುಸಿಯಲಿದೆ.

4. ಆಸೀಸ್‌ ಮತ್ತು ಬಾಂಗ್ಲಾ ಗೆದ್ದರೆ

ಆಗ ಭಾರತ ಹಾಗೂ ಆಸ್ಟ್ರೇಲಿಯಾ ತಲಾ 4 ಅಂಕದೊಂದಿಗೆ ಗುಂಪಿನಲ್ಲಿ ಅಗ್ರ-2 ಸ್ಥಾನ ಪಡೆದು ಸೆಮಿಫೈನಲ್‌ಗೇರಲಿವೆ. ತಲಾ 2 ಅಂಕದೊಂದಿಗೆ ಬಾಂಗ್ಲಾ ಮತ್ತು ಆಫ್ಘನ್‌ ಹೊರಬೀಳಲಿವೆ.