ಸಾರಾಂಶ
ಬೆಂಗಳೂರು : ಇಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಸರ್ವಿಸಸ್ ಪ್ರಾಬಲ್ಯ ಮುಂದುವರಿಸಿದೆ. ಕೂಟದ 2ನೇ ದಿನವಾದ ಶನಿವಾರ 6 ಚಿನ್ನದ ಪದಕ ತನ್ನದಾಗಿಸಿಕೊಂಡಿತು. ಪುರುಷರ ಗ್ರೀಕೊ ರೋಮನ್ ವಿಭಾಗದಲ್ಲಿ ಲಲಿತ್(55 ಕೆ.ಜಿ.), ಪ್ರವೇಶ್(60 ಕೆ.ಜಿ.), ವಿನಾಯಕ್ ಎಸ್.(67 ಕೆ.ಜಿ.), ಅಂಕಿತ್ ಗುಲಿಯಾ(72 ಕೆ.ಜಿ.), ಕರಣ್ (77 ಕೆ.ಜಿ.) ಹಾಗೂ ಸೋನು(97 ಕೆ.ಜಿ.) ಚಿನ್ನದ ಪದಕ ತಮ್ಮದಾಗಿಸಿಕೊಂಡರು. ಉಳಿದಂತೆ 63 ಕೆ.ಜಿ. ವಿಭಾಗದಲ್ಲಿ ಡೆಲ್ಲಿಯ ಉಮೇಶ್, 82 ಕೆ.ಜಿ. ವಿಭಾಗದಲ್ಲಿ ಹರ್ಯಾಣದ ಅಮನ್, 87 ಕೆ.ಜಿ.ಯಲ್ಲಿ ಹರ್ಯಾಣದ ಸುನಿಲ್, 130 ಕೆ.ಜಿ.ಯಲ್ಲಿ ಉತ್ತರ ಪ್ರದೇಶದ ಉತ್ತಮ್ ರಾಣಾ ಬಂಗಾರದ ಸಾಧನೆ ಮಾಡಿದರು.
ಮಹಿಳೆಯರ ಫ್ರೀಸ್ಟೈಲ್‌ನ 50 ಕೆ.ಜಿ. ವಿಭಾಗದಲ್ಲಿ ಮಧ್ಯಪ್ರದೇಶದ ಶಿವಾನಿ, 72 ಕೆ.ಜಿ. ವಿಭಾಗದಲ್ಲಿ ಹರ್ಯಾಣದ ಪ್ರಿಯಾಂಕ ಚಿನ್ನ ಗೆದ್ದರು.
ರಾಜ್ಯಕ್ಕೆ 4 ಕಂಚು ಮಿಸ್!
ಕರ್ನಾಟಕದ ಕುಸ್ತಿಪಟುಗಳು ಶನಿವಾರ 4 ಕಂಚಿನ ಪದಕ ಪಂದ್ಯಗಳಲ್ಲಿ ಸೋಲನುಭವಿಸಿದರು. ಗ್ರೀಕೊ ರೋಮನ್‌ನಲ್ಲಿ ಶಿವಪ್ಪ(55 ಕೆ.ಜಿ.), ಕಾಮೇಶ್(130 ಕೆ.ಜಿ.), ಕಿರಣ್(97 ಕೆ.ಜಿ.), ಮಹಿಳೆಯರ 50 ಕೆ.ಜಿ. ವಿಭಾಗದಲ್ಲಿ ಶ್ವೇತಾ ಸಂಜು ಕಂಚಿನ ಪದಕ ತಪ್ಪಿಸಿಕೊಂಡರು.