ಡೋಪಿಂಗ್‌ನಲ್ಲಿ ಸಿಕ್ಕಿ ಬಿದ್ದು ಬ್ಯಾನ್‌ ಆಗಿದ್ದ ಸಿಮೋನಾ ಈಗ ಟೆನಿಸಲ್ಲಿ ಸ್ಪರ್ಧಿಸಲು ಅರ್ಹ

| Published : Mar 07 2024, 01:56 AM IST

ಡೋಪಿಂಗ್‌ನಲ್ಲಿ ಸಿಕ್ಕಿ ಬಿದ್ದು ಬ್ಯಾನ್‌ ಆಗಿದ್ದ ಸಿಮೋನಾ ಈಗ ಟೆನಿಸಲ್ಲಿ ಸ್ಪರ್ಧಿಸಲು ಅರ್ಹ
Share this Article
  • FB
  • TW
  • Linkdin
  • Email

ಸಾರಾಂಶ

2 ಬಾರಿ ಗ್ರ್ಯಾನ್‌ಸ್ಲಾಂ ಗೆದ್ದಿರುವ ಹಾಲೆಪ್‌ ಅವರು 2022ರ ಅಕ್ಟೋಬರ್‌ನಲ್ಲಿ ಹಾಲೆಪ್‌ ಮೇಲೆ 4 ವರ್ಷಗಳ ನಿಷೇಧ ಹೇರಿಲಾಗಿತ್ತು. ಆದರೆ ನಿಷೇಧ ಅವರಿ ಇಳಿಸಲು ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯಕ್ಕೆ ಹಾಲೆಪ್ ಮನವಿ ಮಾಡಿದ್ದರು.

ಬೂಖರೆಸ್ಟ್‌(ರೊಮೇನಿಯಾ): ಡೋಪಿಂಗ್‌ ಪ್ರಕರಣದಲ್ಲಿ ನಿಷೇಧಕ್ಕೆ ಒಳಗಾಗಿದ್ದ ರೊಮೇನಿಯಾದ ಟೆನಿಸ್‌ ತಾರೆ, 2 ಗ್ರ್ಯಾನ್‌ ಸ್ಲಾಂ ವಿಜೇತೆ ಸಿಮೋನಾ ಹಾಲೆಪ್‌ ಮತ್ತೆ ಅಂತಾರಾಷ್ಟ್ರೀಯ ಟೆನಿಸ್‌ನಲ್ಲಿ ಸ್ಪರ್ಧಿಸಲು ಮುಕ್ತರಾಗಿದ್ದಾರೆ. 2022ರ ಅಕ್ಟೋಬರ್‌ನಲ್ಲಿ ಹಾಲೆಪ್‌ ಮೇಲೆ 4 ವರ್ಷಗಳ ನಿಷೇಧ ಹೇರಿಲಾಗಿತ್ತು. ಆದರೆ ನಿಷೇಧ ಅವರಿ ಇಳಿಸಲು ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯಕ್ಕೆ ಹಾಲೆಪ್ ಮನವಿ ಮಾಡಿದ್ದರು. ಅವರ ಕೋರಿಕೆ ಮನ್ನಣೆ ನೀಡಿದ ನ್ಯಾಯಾಲಯ ನಿಷೇಧ ಅವಧಿಯನ್ನು 9 ತಿಂಗಳಿಗೆ ಇಳಿಕೆ ಮಾಡಿದೆ. 2023ರ ಜುಲೈ ವೇಳೆಗಾಗಲೇ 9 ತಿಂಗಳ ನಿಷೇಧ ಅವಧಿ ಮುಕ್ತಾಯಗೊಂಡಿದ್ದರಿಂದ ಸದ್ಯ ಹಾಲೆಪ್‌ ಸ್ಪರ್ಧಿಸಲು ಮುಕ್ತರಾಗಿದ್ದಾರೆ.

ರಾಜ್ಯಕ್ಕೆ ಫೈನಲ್‌ನಲ್ಲಿ ಯುಪಿ ಎದುರಾಳಿ

ಕಾನ್ಪುರ: ಸಿ.ಕೆ.ನಾಯ್ಡು ಅಂಡರ್‌-23 ಪ್ರಥಮ ದರ್ಜೆ ಕ್ರಿಕೆಟ್‌ ಟೂರ್ನಿಯ ಫೈನಲ್‌ನಲ್ಲಿ ಕರ್ನಾಟಕಕ್ಕೆ ಉತ್ತರ ಪ್ರದೇಶದ ಸವಾಲು ಎದುರಾಗಲಿದೆ. ಸೆಮಿಫೈನಲ್‌ನಲ್ಲಿ ಉತ್ತರ ಪ್ರದೇಶ ಮೊದಲ ಇನ್ನಿಂಗ್ಸ್‌ ಮುನ್ನಡೆ ಆಧಾರದಲ್ಲಿ ಮುಂಬೈ ವಿರುದ್ಧ ಮೇಲುಗೈ ಸಾಧಿಸಿ ಫೈನಲ್‌ ಪ್ರವೇಶಿಸಿತು. ಪಂದ್ಯದ ಮೊದಲೆರಡು ದಿನ ಮಳೆಗೆ ಬಲಿಯಾದ ಬಳಿಕ ಉ.ಪ್ರದೇಶ ಮೊದಲ ಇನ್ನಿಂಗ್ಸಲ್ಲಿ 381 ರನ್‌ ಕಲೆಹಾಕಿತು.ಇದಕ್ಕುತ್ತರಾಗಿ ಮುಂಬೈ ಮೊದಲ ಇನ್ನಿಂಗ್ಸಲ್ಲಿ 203 ರನ್‌ಗೆ ಆಲೌಟ್‌ ಆಯಿತು. ಮಾ.10ರಿಂದ ಫೈನಲ್‌ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ.