ಆಲ್‌ ಇಂಗ್ಲೆಂಡ್‌ : ಮೊದಲ ಸುತ್ತಲ್ಲೇ ಸಿಂಧು ಔಟ್‌ - ಕೊರಿಯಾ ಎದುರಾಳಿ ವಿರುದ್ಧ ಸೋಲು

| N/A | Published : Mar 13 2025, 12:45 AM IST / Updated: Mar 13 2025, 04:22 AM IST

ಸಾರಾಂಶ

ಮತ್ತೊಮ್ಮೆ ಮೊದಲ ಸುತ್ತಿನಲ್ಲೇ ಹೊರಬಿದ್ದ ಸಿಂಧು. ಕೊರಿಯಾ ಎದುರಾಳಿ ವಿರುದ್ಧ ಸೋಲು. ಮಿಶ್ರ ಡಬಲ್ಸ್‌ನಲ್ಲಿ ಭಾರತೀಯ ಜೋಡಿ 2ನೇ ಸುತ್ತಿಗೆ.

ಬರ್ಮಿಂಗ್‌ಹ್ಯಾಮ್‌: ಭಾರತದ ತಾರಾ ಶಟ್ಲರ್‌ ಪಿ.ವಿ.ಸಿಂಧು ಇಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಆಲ್‌-ಇಂಗ್ಲೆಂಡ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌ನ ಮಹಿಳಾ ಸಿಂಗಲ್ಸ್‌ ಮೊದಲ ಸುತ್ತಿನಲ್ಲೇ ಹೊರಬಿದ್ದಿದ್ದಾರೆ.

2 ಬಾರಿ ಒಲಿಂಪಿಕ್‌ ಪದಕ ವಿಜೇತೆ ಸಿಂಧು, ಬುಧವಾರ ಮೊದಲ ಸುತ್ತಿನಲ್ಲಿ ಕೊರಿಯಾದ ಕಿಮ್‌ ಗಾ ಇಯುನ್‌ ವಿರುದ್ಧ 21-19, 13-21, 13-21 ಗೇಮ್‌ಗಳಲ್ಲಿ ಸೋಲುಂಡರು.

ಈ ವರ್ಷ ಇಂಡೋನೇಷ್ಯಾ ಮಾಸ್ಟರ್ಸ್‌ನಲ್ಲೂ ಸಿಂಧು ಮೊದಲ ಸುತ್ತಿನಲ್ಲೇ ಸೋತಿದ್ದರು. ಇನ್ನು, ಯುವ ಆಟಗಾರ್ತಿ ಮಾಳ್ವಿಕಾ ಬನ್ಸೋದ್‌ ಮೊದಲ ಸುತ್ತಿನಲ್ಲಿ ವಿಶ್ವ ನಂ.12, ಸಿಂಗಾಪುರದ ಯೊ ಜಿಯಾ ಮಿನ್‌ 21-13, 10-21, 21-17ರಲ್ಲಿ ಜಯಿಸಿ 2ನೇ ಸುತ್ತಿಗೇರಿದರು. ಮಿಶ್ರ ಡಬಲ್ಸ್‌ನಲ್ಲಿ ರೋಹನ್‌ ಕಪೂರ್‌ ಹಾಗೂ ಋತ್ವಿಕಾ ಜೋಡಿ ಸಹ 2ನೇ ಸುತ್ತಿಗೇರಿದೆ.