ಬೆಂಗಳೂರಿನಲ್ಲಿ 13ನೇ ಏಷ್ಯನ್‌ ನೆಟ್‌ಬಾಲ್‌ : ಶ್ರೀಲಂಕಾ ಮಣಿಸಿ ಸಿಂಗಾಪೂರ ಚಾಂಪಿಯನ್‌

| Published : Oct 28 2024, 01:08 AM IST / Updated: Oct 28 2024, 04:09 AM IST

ಸಾರಾಂಶ

3ನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಹಾಂಕಾಂಗ್‌ ವಿರುದ್ಧ ಮಲೇಷ್ಯಾ ಜಯಗಳಿಸಿತು. ಟೂರ್ನಿಯಲ್ಲಿ ಭಾರತ 9ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.

 ಬೆಂಗಳೂರು : 13ನೇ ಏಷ್ಯನ್‌ ನೆಟ್‌ಬಾಲ್‌ ಚಾಂಪಿಯನ್‌ಶಿಪ್‌ನಲ್ಲಿ ಸಿಂಗಾಪೂರ ಮಹಿಳಾ ತಂಡ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ನಗರದ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಫೈನಲ್‌ನಲ್ಲಿ ಶ್ರೀಲಂಕಾ ವಿರುದ್ಧ ಸಿಂಗಾಪೂರ 67-64 ಅಂಕಗಳಿಂದ ಜಯಗಳಿಸಿತು. 3ನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಹಾಂಕಾಂಗ್‌ ವಿರುದ್ಧ ಮಲೇಷ್ಯಾ ಜಯಗಳಿಸಿತು. 

ಟೂರ್ನಿಯಲ್ಲಿ ಭಾರತ 9ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಸಮಾರೋಪ ಸಮಾರಂಭದಲ್ಲಿ ಸಚಿವ ರಾಮಲಿಂಗಾ ರೆಡ್ಡಿ, ವಿಧಾನಪರಿಷತ್‌ ಸದಸ್ಯ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಾ.ಕೆ.ಗೋವಿಂದರಾಜು ಸೇರಿ ಪ್ರಮುಖರು ಉಪಸ್ಥಿತರಿದ್ದರು.

ಲಂಕಾ ವಿರುದ್ಧ ವೈಟ್‌ವಾಶ್‌ ತಪ್ಪಿಸಿದ ವೆಸ್ಟ್‌ಇಂಡೀಸ್‌

ಪಲ್ಲೆಕೆಲೆ: ಶ್ರೀಲಂಕಾ ವಿರುದ್ಧ ಏಕದಿನ ಸರಣಿಯಲ್ಲಿ ಪ್ರವಾಸಿ ವೆಸ್ಟ್‌ಇಂಡೀಸ್‌ ವೈಟ್‌ವಾಶ್‌ನಿಂದ ತಪ್ಪಿಸಿಕೊಂಡಿದೆ. ಶನಿವಾರ ನಡೆದ 3ನೇ ಏಕದಿನ ಪಂದ್ಯದಲ್ಲಿ ವಿಂಡೀಸ್‌ ಡಕ್ವರ್ತ್‌ ಲೂಯಿಸ್‌ ನಿಯಮದನ್ವಯ 8 ವಿಕೆಟ್‌ ಗೆಲುವು ಸಾಧಿಸಿತು. 

ಮೊದಲೆರಡು ಪಂದ್ಯಗಳಲ್ಲಿ ಗೆದ್ದಿದ್ದ ಲಂಕಾ 3 ಪಂದ್ಯಗಳ ಸರಣಿಯನ್ನು 2-1 ಅಂತರದಲ್ಲಿ ಕೈವಶಪಡಿಸಿಕೊಂಡಿತು. ಮಳೆ ಕಾರಣಕ್ಕೆ ಪಂದ್ಯವನ್ನು ತಲಾ ಓವರ್‌ಗೆ ಇಳಿಸಲಾಗಿತ್ತು. ಮೊದಲು ಬ್ಯಾಟ್‌ ಮಾಡಿ ಲಂಕಾ 3 ವಿಕೆಟ್‌ಗೆ 156 ರನ್‌ ಕಲೆಹಾಕಿತು. ಆದರೆ ಡಿಎಲ್‌ಎಸ್‌ ನಿಯಮದನ್ವಯ ವಿಂಡೀಸ್‌ಗೆ 195 ರನ್‌ ಗುರಿ ನಿಗದಿಪಡಿಸಲಾಯಿತು. ಎವಿನ್‌ ಲೆವಿಸ್‌(61 ಎಸೆತಗಳಲ್ಲಿ ಔಟಾಗದೆ 102) ಶತಕದ ನೆರವಿನಿಂದ ವಿಂಡಿಸ್‌ 22 ಓವರ್‌ಗಳಲ್ಲೇ ಜಯಭೇರಿ ಬಾರಿಸಿತು.