ಬೆಂಗಳೂರು ಫ್ಯಾನ್ಸ್‌ ಬಗ್ಗೆ ಸ್ಮೃತಿ ಮಂಧನಾ ಮೆಚ್ಚುಗೆ

| Published : Mar 06 2024, 02:17 AM IST

ಬೆಂಗಳೂರು ಫ್ಯಾನ್ಸ್‌ ಬಗ್ಗೆ ಸ್ಮೃತಿ ಮಂಧನಾ ಮೆಚ್ಚುಗೆ
Share this Article
  • FB
  • TW
  • Linkdin
  • Email

ಸಾರಾಂಶ

ಆರ್‌ಸಿಬಿ ಅಭಿಮಾನಿಗಳ ಬಗ್ಗೆ ತಂಡದ ನಾಯಕಿ ಸ್ಮೃತಿ ಮಂಧನಾ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು: ಆರ್‌ಸಿಬಿ ಅಭಿಮಾನಿಗಳ ಬಗ್ಗೆ ತಂಡದ ನಾಯಕಿ ಸ್ಮೃತಿ ಮಂಧನಾ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಹಿಳಾ ಪ್ರೀಮಿಯರ್‌ ಲೀಗ್‌ (ಡಬ್ಲ್ಯುಪಿಎಲ್‌) 2ನೇ ಆವೃತ್ತಿಗೆ ಬೆಂಗಳೂರಲ್ಲಿ ಸಿಕ್ಕ ಪ್ರತಿಕ್ರಿಯೆ ಮಹಿಳಾ ಕ್ರಿಕೆಟ್‌ಗೆ ದೊರೆತ ಅತಿದೊಡ್ಡ ಯಶಸ್ಸು ಎಂದು ಬಣ್ಣಿಸಿರುವ ಸ್ಮೃತಿ, ಇದೇ ರೀತಿ ಎಲ್ಲೆಡೆ ಪ್ರೋತ್ಸಾಹ ಸಿಗಲಿ ಎಂದು ಆಶಿಸುವುದಾಗಿ ಹೇಳಿದ್ದಾರೆ. ಬೆಂಗಳೂರಲ್ಲಿ ಆರ್‌ಸಿಬಿ ಆಡಿದ ಪ್ರತಿ ಪಂದ್ಯಕ್ಕೂ ಕನಿಷ್ಠ 25ರಿಂದ 30 ಸಾವಿರ ಅಭಿಮಾನಿಗಳು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನೆರೆದಿದ್ದರು. ಆರ್‌ಸಿಬಿ ಒಟ್ಟು 5 ಪಂದ್ಯಗಳನ್ನಾಡಿತು. ಸಿ.ಕೆ.ನಾಯ್ಡು ಟ್ರೋಫಿ: ಫೈನಲ್‌ಗೆ ಕರ್ನಾಟಕ

ನಾಗ್ಪುರ: ಸಿ.ಕೆ.ನಾಯ್ಡು ಅಂಡರ್‌-23 ಪ್ರಥಮ ದೆರ್ಜ ಕ್ರಿಕೆಟ್‌ ಟೂರ್ನಿಯ ಫೈನಲ್‌ಗೆ ಕರ್ನಾಟಕ ತಂಡ ಪ್ರವೇಶಿಸಿದೆ. ಸೆಮಿಫೈನಲ್‌ನಲ್ಲಿ ವಿದರ್ಭ ವಿರುದ್ಧ ರಾಜ್ಯ ತಂಡ 278 ರನ್‌ ಕಲೆಹಾಕಿತು. ಮೊದಲ ಇನ್ನಿಂಗ್ಸಲ್ಲಿ 466 ರನ್‌ಗಳ ಬೃಹತ್‌ ಮೊತ್ತ ಕಲೆಹಾಕಿದ್ದ ಕರ್ನಾಟಕ, ವಿದರ್ಭವನ್ನು ಕೇವಲ 73 ರನ್‌ಗೆ ಆಲೌಟ್‌ ಮಾಡಿತ್ತು. ಫಾಲೋ ಆನ್‌ ಹೇರದೆ 2ನೇ ಇನ್ನಿಂಗ್ಸ್‌ನಲ್ಲಿ ಬ್ಯಾಟ್‌ ಮಾಡಿದ್ದ ಕರ್ನಾಟಕ, 141 ರನ್‌ಗೆ ಸರ್ವಪತನಗೊಂಡರೂ, ವಿದರ್ಭಕ್ಕೆ ಗೆಲ್ಲಲು 534 ರನ್‌ಗಳ ದೊಡ್ಡ ಗುರಿ ನೀಡಿತ್ತು. ವಿದರ್ಭ 2ನೇ ಇನ್ನಿಂಗ್ಸಲ್ಲಿ 256 ರನ್‌ಗೆ ಆಲೌಟ್‌ ಆಯಿತು. ಫೈನಲ್‌ನಲ್ಲಿ ಕರ್ನಾಟಕಕ್ಕೆ ಉತ್ತರ ಪ್ರದೇಶ ಅಥವಾ ಮುಂಬೈ ಎದುರಾಗಲಿದೆ.