ಸಂಗೀತ ಸಂಯೋಜಕ ಪಲಾಶ್‌ ಮುಚ್ಚಲ್‌ ಜೊತೆಗೆ ನಿಗದಿಯಾಗಿದ್ದ ವಿವಾಹ ರದ್ದುಗೊಳಿಸಿದ ಬಳಿಕ ಭಾರತದ ತಾರಾ ಕ್ರಿಕೆಟರ್‌ ಸ್ಮೃತಿ ಮಂಧನಾ ಮತ್ತೆ ಕ್ರಿಕೆಟ್‌ ಅಂಗಳಕ್ಕೆ ಮರಳಿದ್ದಾರೆ. ಸ್ಮೃತಿ ನೆಟ್ಸ್‌ನಲ್ಲಿ ಅಭ್ಯಾಸ ನಡೆಸುತ್ತಿರುವ ಫೋಟೋವನ್ನು  ಸಹೋದರ ಶ್ರವನ್ ಮಂಧನಾ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಮುಂಬೈ: ಸಂಗೀತ ಸಂಯೋಜಕ ಪಲಾಶ್‌ ಮುಚ್ಚಲ್‌ ಜೊತೆಗೆ ನಿಗದಿಯಾಗಿದ್ದ ವಿವಾಹ ರದ್ದುಗೊಳಿಸಿದ ಬಳಿಕ ಭಾರತದ ತಾರಾ ಕ್ರಿಕೆಟರ್‌ ಸ್ಮೃತಿ ಮಂಧನಾ ಮತ್ತೆ ಕ್ರಿಕೆಟ್‌ ಅಂಗಳಕ್ಕೆ ಮರಳಿದ್ದಾರೆ. ಸ್ಮೃತಿ ನೆಟ್ಸ್‌ನಲ್ಲಿ ಅಭ್ಯಾಸ ನಡೆಸುತ್ತಿರುವ ಫೋಟೋವನ್ನು ಅವರ ಸಹೋದರ ಶ್ರವನ್ ಮಂಧನಾ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. 

ಭಾರತ ತಂಡ ಡಿ.21ರಿಂದ ಶ್ರೀಲಂಕಾ ವಿರುದ್ಧ 3 ಪಂದ್ಯ

ಭಾರತ ತಂಡ ಡಿ.21ರಿಂದ ಶ್ರೀಲಂಕಾ ವಿರುದ್ಧ 3 ಪಂದ್ಯಗಳ ಟಿ20 ಸರಣಿ ಆಡಲಿದ್ದು, ಇದಕ್ಕಾಗಿ ಸ್ಮೃತಿ ನೆಟ್ಸ್‌ನಲ್ಲಿ ಅಭ್ಯಾಸ ಆರಂಭಿಸಿದ್ದಾರೆ.

ಸ್ಮೃತಿ ಮದುವೆ ನ.23ರಂದು ನಿಗದಿಯಾಗಿತ್ತು

ಸ್ಮೃತಿ ಮದುವೆ ನ.23ರಂದು ನಿಗದಿಯಾಗಿತ್ತು. ಆದರೆ ಮದುವೆ ದಿನವೇ ಸ್ಮೃತಿ ಅವರ ತಂದೆ ಶ್ರೀನಿವಾಸ್‌ ಮಂಧನಾ ಅವರಿಗೆ ಎದೆನೋವು ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾದ ಕಾರಣ, ವಿವಾಹ ಮುಂದೂಡಿಕೆಯಾಗಿತ್ತು. ಆದರೆ ವಿವಾಹ ರದ್ದುಗೊಂಡಿದ್ದಾಗಿ ಸ್ಮೃತಿ ಭಾನುವಾರ ಅಧಿಕೃತವಾಗಿ ಮಾಹಿತಿ ನೀಡಿದ್ದರು.