ನಾಳೆ ಸ್ಮೃತಿ ವಿವಾಹ: ಹಳದಿ ಶಾಸ್ತ್ರದಲ್ಲಿ ಮಿಂದೆದ್ದ ಜೋಡಿ

| N/A | Published : Nov 22 2025, 06:48 AM IST

Smriti Mandhana

ಸಾರಾಂಶ

ಹಲವು ಸಮಯಗಳಿಂದ ಪ್ರೀತಿಯಲ್ಲಿದ್ದ ತಾರಾ ಕ್ರಿಕೆಟ್‌ ಆಟಗಾರ್ತಿ ಸ್ಮೃತಿ ಮಂಧನಾ ಮತ್ತು ಸಂಗೀತ ಸಂಯೋಜಕ ಪಲಾಶ್‌ ಮುಚ್ಚಲ್‌ ಭಾನುವಾರ(ನ.23) ಮದುವೆಯಾಗಲಿದ್ದಾರೆ. ದಿನಗಳ ಹಿಂದಷ್ಟೇ ಈ ಜೋಡಿ ನಿಶ್ಚಿತಾರ್ಥ ಖಚಿತಪಡಿಸಿಕೊಂಡಿದ್ದು, ಇವರಿಗೆ ಪ್ರಧಾನಿ ನರೇಂದ್ರ ಮೋದಿ ಕೂಡಾ ಶುಭಕೋರಿದ್ದಾರೆ

ನವದೆಹಲಿ: ಹಲವು ಸಮಯಗಳಿಂದ ಪ್ರೀತಿಯಲ್ಲಿದ್ದ ತಾರಾ ಕ್ರಿಕೆಟ್‌ ಆಟಗಾರ್ತಿ ಸ್ಮೃತಿ ಮಂಧನಾ ಮತ್ತು ಸಂಗೀತ ಸಂಯೋಜಕ ಪಲಾಶ್‌ ಮುಚ್ಚಲ್‌ ಭಾನುವಾರ(ನ.23) ಮದುವೆಯಾಗಲಿದ್ದಾರೆ.  

ದಿನಗಳ ಹಿಂದಷ್ಟೇ ಈ ಜೋಡಿ ನಿಶ್ಚಿತಾರ್ಥ ಖಚಿತ

ದಿನಗಳ ಹಿಂದಷ್ಟೇ ಈ ಜೋಡಿ ನಿಶ್ಚಿತಾರ್ಥ ಖಚಿತಪಡಿಸಿಕೊಂಡಿದ್ದು, ಇವರಿಗೆ ಪ್ರಧಾನಿ ನರೇಂದ್ರ ಮೋದಿ ಕೂಡಾ ಶುಭಕೋರಿದ್ದಾರೆ. ‘ಜೀವನದ ಪ್ರತಿಕ್ಷಣದಲ್ಲಿ ಒಟ್ಟಾಗಿ, ಖುಷಿಯಾಗಿರಿ’ ಎಂದು ಹರಸಿದ್ದಾರೆ.

ಮದುವೆ ಕಾರ್ಯಕ್ರಮ ಆರಂಭ

ಈಗಾಗಲೇ ಜೋಡಿಯ ಮದುವೆ ಕಾರ್ಯಕ್ರಮ ಆರಂಭವಾಗಿದ್ದು, ಹಳದಿ ಸಂಭ್ರಮದಲ್ಲಿ ತೊಡಗಿಸಿಕೊಂಡಿದ್ದಾರೆ. ಭಾರತದ ಆಟಗಾರ್ತಿಯರಾದ ಜೆಮಿಮಾ, ಶಫಾಲಿ ವರ್ಮಾ, ಅರುಂಧತಿ ರೆಡ್ಡಿ, ಶ್ರೇಯಾಂಕ ಪಾಟೀಲ್, ರೇಣುಕಾ ಸಿಂಗ್, ರಾಧಾ ಯಾದವ್ ಮತ್ತು ರಿಚಾ ಘೋಷ್ ಕೂಡ ಹಳದಿ ಸಂಭ್ರಮದಲ್ಲಿ ಸ್ಮೃತಿಗೆ ಜೊತೆಯಾದರು.

Read more Articles on