ತಂದೆಗೆ ಅನಾರೋಗ್ಯ ಹಿನ್ನೆಲೆ ಭಾನುವಾರ ನಡೆಯಬೇಕಿದ್ದ ಟೀಂ ಇಂಡಿಯಾದ ತಾರಾ ಆಟಗಾರ್ತಿ ಸ್ಮೃತಿ ಮಂಧನಾ ಮುಂದೂಡಿಕೆ ಬೆನ್ನಲ್ಲೇ ಅವರ ಭಾವಿ ಪತಿ ಪಾಲಶ್‌ ಮುಚ್ಚಲ್‌ ಅವರಿಗೂ ಅನಾರೋಗ್ಯ ಕಾಣಿಸಿಕೊಂಡಿದೆ.

ಮುಂಬೈ: ತಂದೆಗೆ ಅನಾರೋಗ್ಯ ಹಿನ್ನೆಲೆ ಭಾನುವಾರ ನಡೆಯಬೇಕಿದ್ದ ಟೀಂ ಇಂಡಿಯಾದ ತಾರಾ ಆಟಗಾರ್ತಿ ಸ್ಮೃತಿ ಮಂಧನಾ ಮುಂದೂಡಿಕೆ ಬೆನ್ನಲ್ಲೇ ಅವರ ಭಾವಿ ಪತಿ ಪಾಲಶ್‌ ಮುಚ್ಚಲ್‌ ಅವರಿಗೂ ಅನಾರೋಗ್ಯ ಕಾಣಿಸಿಕೊಂಡಿದೆ.

ಪಾಲಶ್‌ ವೈರಲ್‌ ಸೋಂಕು ಮತ್ತು ಅಸಿಡಿಟಿ

ಪಾಲಶ್‌ ವೈರಲ್‌ ಸೋಂಕು ಮತ್ತು ಅಸಿಡಿಟಿ ಕಾರಣದಿಂದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಸಮಸ್ಯೆ ಹೆಚ್ಚು ಗಂಭೀರವಾಗಿರದ ಕಾರಣ ಚಿಕಿತ್ಸೆ ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿದ್ದಾರೆ.ಈ ನಡುವೆ ಮಂಧನಾ ಮದುವೆಗೆ ಸಂಬಂಧಿಸಿದ ಎಲ್ಲಾ ಕಾರ್ಯಕ್ರಮಗಳ ಫೋಟೋ, ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಿಂದ ಡಿಲೀಟ್‌ ಮಾಡಿದ್ದಾರೆ. 

ಅಳಿಸಿ ಹಾಕಿದ್ದು, ಚರ್ಚೆಗೆ ಗ್ರಾಸ

ಒಂದು ವಾರಗಳ ಕಾಲ ನಡೆದ ಮದುವೆ ಸಂಭ್ರಮದ ಹಲವು ವಿಡಿಯೋಗಳನ್ನು ಸ್ಮೃತಿ ಹಂಚಿಕೊಂಡಿದ್ದರು. ಆದರೆ ಈಗ ಅದೆಲ್ಲವನ್ನೂ ಅಳಿಸಿ ಹಾಕಿದ್ದು, ಚರ್ಚೆಗೆ ಗ್ರಾಸವಾಗಿದೆ.ಇವರ ಜತೆಗೆ ಈ ಸಂಭ್ರಮದಲ್ಲಿ ಭಾಗಿಯಾಗಿದ್ದ ಟೀಂ ಇಂಡಿಯಾದ ಇತರ ಆಟಗಾರ್ತಿಯರಾದ ಜೆಮಿಮಾ ರೋಡ್ರಿಗ್ಸ್‌, ಶ್ರೇಯಾಂಕಾ ಪಾಟೀಲ್‌ ಸೇರಿ ಹಲವು ಸ್ನೇಹಿತೆಯರು ಸ್ಮೃತಿ ನಿಶ್ಚಿತಾರ್ಥದ ವಿಷಯ ಬಹಿರಂಗಪಡಿಸಲು ಮಾಡಿದ್ದ ವಿಡಿಯೋವನ್ನು ತಮ್ಮ ಖಾತೆಗಳಿಂದ ಡಿಲೀಟ್‌ ಮಾಡಿದ್ದಾರೆ.