ಇಂಗ್ಲೆಂಡ್‌ನ ಮಣಿಸಿ ದಕ್ಷಿಣ ಆಫ್ರಿಕಾ ಸೆಮಿಗೆ : ಅಫ್ಘಾನಿಸ್ತಾನದ ಕನಸು ನುಚ್ಚುನೂರು

| N/A | Published : Mar 02 2025, 01:18 AM IST / Updated: Mar 02 2025, 04:07 AM IST

ಸಾರಾಂಶ

ಇಂಗ್ಲೆಂಡ್‌ ಒಂದೂ ಗೆಲುವಿಲ್ಲದೆ ಅಭಿಯಾನ ಕೊನೆಗೊಳಿಸಿತು. ಅಲ್ಲದೆ, ಅಫ್ಘಾನಿಸ್ತಾನ(3 ಅಂಕ)ದ ಸೆಮೀಸ್‌ ಕನಸು ಕೂಡಾ ಭಗ್ನಗೊಂಡಿತು.

ಕರಾಚಿ: ಚೊಚ್ಚಲ ಆವೃತ್ತಿಯ ಚಾಂಪಿಯನ್‌ ದಕ್ಷಿಣ ಆಫ್ರಿಕಾ ತಂಡ ಈ ಬಾರಿ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಸೆಮಿಫೈನಲ್‌ ಪ್ರವೇಶಿಸಿದೆ. ಶನಿವಾರ ‘ಬಿ’ ಗುಂಪಿನ ನಿರ್ಣಾಯಕ ಫಂದ್ಯದಲ್ಲಿ ಇಂಗ್ಲೆಂಡ್‌ ವಿರುದ್ಧ 7 ವಿಕೆಟ್‌ ಜಯಗಳಿಸಿತು. ಇದರೊಂದಿಗೆ ಆಡಿರುವ 3 ಪಂದ್ಯಗಳಲ್ಲಿ 5 ಅಂಕ ಸಂಪಾದಿಸಿ ಅಗ್ರಸ್ಥಾನಿಯಾಯಿತು. ಇಂಗ್ಲೆಂಡ್‌ ಒಂದೂ ಗೆಲುವಿಲ್ಲದೆ ಅಭಿಯಾನ ಕೊನೆಗೊಳಿಸಿತು. 

ಅಲ್ಲದೆ, ಅಫ್ಘಾನಿಸ್ತಾನ(3 ಅಂಕ)ದ ಸೆಮೀಸ್‌ ಕನಸು ಕೂಡಾ ಭಗ್ನಗೊಂಡಿತು.ಮೊದಲು ಬ್ಯಾಟ್‌ ಮಾಡಿದ ಇಂಗ್ಲೆಂಡ್‌ 38.2 ಓವರ್‌ಗಳಲ್ಲಿ 179ಕ್ಕೆ ಆಲೌಟಾಯಿತು. ಜೋ ರೂಟ್(37) ತಂಡದ ಪರ ಗರಿಷ್ಠ ವೈಯಕ್ತಿಕ ಮೊತ್ತ ಗಳಿಸಿದರು.ದ.ಆಫ್ರಿಕಾವನ್ನು ನೆಟ್‌ ರನ್‌ರೇಟ್‌ನಲ್ಲಿ ಹಿಂದಿಕ್ಕಿ ಅಫ್ಘಾನಿಸ್ತಾನ ಸೆಮಿಫೈನಲ್‌ ಪ್ರವೇಶಿಸಬೇಕಿದ್ದರೆ, ಇಂಗ್ಲೆಂಡ್‌ ತಂಡ 200ಕ್ಕೂ ಹೆಚ್ಚು ರನ್‌ ಅಂತರದಲ್ಲಿ ಗೆಲ್ಲಬೇಕಿತ್ತು. 

ಆದರೆ ತಂಡದ ಮೊತ್ತವೇ 200 ದಾಟದ ಕಾರಣ ಚೇಸಿಂಗ್‌ಗೆ ಇಳಿಯುವ ಮೊದಲೇ ದ.ಆಫ್ರಿಕಾ ಸೆಮಿಫೈನಲ್‌ ಸ್ಥಾನ ಖಚಿತಪಡಿಸಿಕೊಂಡಿತ್ತು. ಸುಲಭ ಗುರಿ ಬೆನ್ನತ್ತಿದ ದ.ಆಫ್ರಿಕಾ ಕೇವಲ 29.1 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟದಲ್ಲಿ ಜಯಗಳಿಸಿತು. ವ್ಯಾನ್‌ ಡರ್‌ ಡಸ್ಸೆನ್‌ ಔಟಾಗದೆ 72, ಹೈನ್ರಿಚ್‌ ಕ್ಲಾಸೆನ್‌ 64 ರನ್‌ ಸಿಡಿಸಿದರು.

ಸ್ಕೋರ್‌: ಇಂಗ್ಲೆಂಡ್‌ 38.2 ಓವರಲ್ಲಿ 179/10 (ರೂಟ್‌ 37, ಆರ್ಚರ್‌ 25, ಮುಲ್ಡರ್ 3-25), ದ.ಆಫ್ರಿಕಾ 29.1 ಓವರಲ್ಲಿ 181/3 (ಡಸ್ಸೆನ್‌ 72, ಕ್ಲಾಸೆನ್‌ 64, ಆರ್ಚರ್‌ 2-55)