ಮಾತೃ ಕಪ್‌ ಬಾಸ್ಕೆಟ್‌ಬಾಲ್‌ನಲ್ಲಿ ಸೌತ್‌ ವೆಸ್ಟರ್ನ್‌ ರೈಲ್ವೇಸ್‌ ಚಾಂಪಿಯನ್‌

| Published : Mar 09 2024, 01:32 AM IST

ಮಾತೃ ಕಪ್‌ ಬಾಸ್ಕೆಟ್‌ಬಾಲ್‌ನಲ್ಲಿ ಸೌತ್‌ ವೆಸ್ಟರ್ನ್‌ ರೈಲ್ವೇಸ್‌ ಚಾಂಪಿಯನ್‌
Share this Article
  • FB
  • TW
  • Linkdin
  • Email

ಸಾರಾಂಶ

ಟೂರ್ನಿಯಲ್ಲಿ ಗೆದ್ದ ತಂಡಗಳಿಗೆ ಕೆಎಸ್‌ಬಿಬಿಎ ಅಧ್ಯಕ್ಷ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಾ.ಕೆ. ಗೋವಿಂದರಾಜು, ನಟ ಪ್ರೇಮ್‌ ಟ್ರೋಫಿ, ನಗದು ಹಸ್ತಾಂತರಿಸಿದರು. ಚಾಂಪಿಯನ್‌ ಸೌತ್‌ ವೆಸ್ಟರ್ನ್‌ ರೈಲ್ವೇಸ್‌ ತಂಡ ₹60000 ನಗದು ಬಹುಮಾನ ಪಡೆಯಿತು.

ಬೆಂಗಳೂರು: ಕರ್ನಾಟಕ ರಾಜ್ಯ ಬಾಸ್ಕೆಟ್‌ಬಾಲ್‌ ಸಂಸ್ಥೆ(ಕೆಎಸ್‌ಬಿಬಿಎ) ಮಹಿಳೆಯರಿಗಾಗಿ ಆಯೋಜಿಸಿದ 7ನೇ ಮಾತೃ ಕಪ್‌ ಬಾಸ್ಕೆಟ್‌ಬಾಲ್‌ ಟೂರ್ನಿಯಲ್ಲಿ ಸೌತ್‌ ವೆಸ್ಟರ್ನ್‌ ರೈಲ್ವೇಸ್‌ ತಂಡ ಚಾಂಪಿಯನ್‌ ಆಗಿ ಹೊರಹೊಮ್ಮಿದೆ.

ಶುಕ್ರವಾರ ನಡೆದ ಫೈನಲ್‌ ಪಂದ್ಯದಲ್ಲಿ ರೈಲ್ವೇಸ್‌ ತಂಡ ಮೌಂಟ್ಸ್‌ ಕ್ಲಬ್‌ ವಿರುದ್ಧ 78-39 ಅಂಕಗಳಿಂದ ಜಯಗಳಿಸಿತು. ರೈಲ್ವೇಸ್‌ನ ಶ್ರುತಿ 28 ಅಂಕ ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರೆ, ಸತ್ಯಾ 17 ಅಂಕ ಗಳಿಸಿದರು. ಮೌಂಟ್ಸ್ ಕ್ಲಬ್‌ನ ನಿಹಾರಿಕಾ 15, ಜಾನ್ವಿ 8 ಅಂಕ ಗಳಿಸಿದರು.3 ಮತ್ತು 4ನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಬೆಂಗಳೂರು ವ್ಯಾನ್‌ಗಾರ್ಡ್ಸ್‌ ವಿರುದ್ಧ ಬೀಗಲ್ಸ್‌ ಬಿಸಿ ಜಯಭೇರಿ ಬಾರಿಸಿತು. ಬೀಗಲ್ಸ್‌ ತಂಡ ಮೇಖಲಾ 22, ಚಂದನಾ 19 ಅಂಕ ಗಳಿಸಿ ಗೆಲುವಿನ ರೂವಾರಿಗಳು ಎನಿಸಿಕೊಂಡರು. ವ್ಯಾನ್‌ಗಾರ್ಡ್ಸ್‌ ತಂಡದ ತಿಶಾ 19, ಪ್ರಿಯಾಂಕಾ 11 ಅಂಕ ಸಂಪಾದಿಸಿದರು.ವಿಜೇತ ತಂಡಗಳಿಗೆ ಕೆಎಸ್‌ಬಿಬಿಎ ಅಧ್ಯಕ್ಷ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಾ.ಕೆ. ಗೋವಿಂದರಾಜು, ನಟ ಪ್ರೇಮ್‌ ಟ್ರೋಫಿ, ನಗದು ಹಸ್ತಾಂತರಿಸಿದರು. ಚಾಂಪಿಯನ್‌ ಸೌತ್‌ ವೆಸ್ಟರ್ನ್‌ ರೈಲ್ವೇಸ್‌ ತಂಡ ₹60000 ನಗದು ಬಹುಮಾನ ಪಡೆದರೆ, 2ನೇ ಸ್ಥಾನಿಯಾದ ಮೌಂಟ್ಸ್‌ ಕ್ಲಬ್‌ ₹40,000, 3ನೇ ಸ್ಥಾನ ಪಡೆದ ಬೀಗಲ್ಸ್‌ ಬಿಸಿ ₹20000, 4ನೇ ಸ್ಥಾನಿ ಬೆಂಗಳೂರು ವ್ಯಾನ್‌ಗಾರ್ಡ್ಸ್‌ ₹10000 ನಗದು ಬಹುಮಾನ ಪಡೆಯಿತು.ಟ್ರೋಫಿ ವಿತರಣೆ ಸಮಾರಂಭದಲ್ಲಿ ಪ್ರೇಮ್‌ ಅವರ ಪತ್ನಿ ಜ್ಯೋತಿ ಪ್ರೇಮ್‌, ಪುತ್ರಿ ಅಮೃತಾ ಪ್ರೇಮ್‌ ಉಪಸ್ಥಿತರಿದ್ದರು.