ಇಂಗ್ಲೆಂಡ್‌ ವಿರುದ್ಧ ಪಾಕಿಸ್ತಾನಕ್ಕೆ 152 ರನ್‌ ಗೆಲುವು. 2021ರ ಫೆಬ್ರವರಿ ಬಳಿಕ ತವರಿನಲ್ಲಿ ಪಾಕ್‌ಗೆ ಮೊದಲ ಜಯ

| Published : Oct 19 2024, 01:37 AM IST / Updated: Oct 19 2024, 04:44 AM IST

ಸಾರಾಂಶ

 ಇಂಗ್ಲೆಂಡ್‌ ವಿರುದ್ಧ ಪಾಕಿಸ್ತಾನಕ್ಕೆ 152 ರನ್‌ ಗೆಲುವು. 2021ರ ಫೆಬ್ರವರಿ ಬಳಿಕ ತವರಿನಲ್ಲಿ ಪಾಕ್‌ಗೆ ಮೊದಲ ಜಯ. 3 ಪಂದ್ಯಗಳ ಸರಣಿ 1-1ರಲ್ಲಿ ಸಮ.

ಮುಲ್ತಾನ್‌: ನೂಮನ್‌ ಅಲಿ ಹಾಗೂ ಸಾಜಿದ್‌ ಖಾನ್‌ ಸೇರಿ 20 ವಿಕೆಟ್‌ಗಳನ್ನು ಕಬಳಿಸಿದ ಪರಿಣಾಮ, ಇಂಗ್ಲೆಂಡ್‌ ವಿರುದ್ಧದ 2ನೇ ಟೆಸ್ಟ್‌ನಲ್ಲಿ ಪಾಕಿಸ್ತಾನ 152 ರನ್‌ಗಳ ಗೆಲುವು ದಾಖಲಿಸಿದೆ. 2021ರ ಫೆಬ್ರವರಿ ಬಳಿಕ ಪಾಕಿಸ್ತಾನಕ್ಕೆ ತವರಿನಲ್ಲಿ ಇದು ಮೊದಲ ಜಯ. 

ಮೊದಲ ಇನ್ನಿಂಗ್ಸಲ್ಲಿ 366 ರನ್‌ ಕಲೆಹಾಕಿದ್ದ ಪಾಕಿಸ್ತಾನ, ಇಂಗ್ಲೆಂಡನ್ನು 291 ರನ್‌ಗೆ ಕಟ್ಟಿಹಾಕಿತ್ತು. ಬಳಿಕ 2ನೇ ಇನ್ನಿಂಗ್ಸಲ್ಲಿ 221 ರನ್‌ ಗಳಿಸಿದ ಪಾಕ್‌, ಇಂಗ್ಲೆಂಡ್‌ಗೆ ಗೆಲ್ಲಲು 297 ರನ್‌ ಗುರಿ ನಿಗದಿಪಡಿಸಿತ್ತು. ಇಂಗ್ಲೆಂಡ್‌ 2ನೇ ಇನ್ನಿಂಗ್ಸಲ್ಲಿ 144 ರನ್‌ಗೆ ಆಲೌಟ್‌ ಆಯಿತು.

 2ನೇ ಇನ್ನಿಂಗ್ಸಲ್ಲಿ 8 ಸೇರಿ ಪಂದ್ಯದಲ್ಲಿ ಅಲಿ ಒಟ್ಟು 11 ವಿಕೆಟ್‌ ಕಿತ್ತರೆ, ಮೊದಲ ಇನ್ನಿಂಗ್ಸಲ್ಲಿ 7 ಸೇರಿ ಸಾಜಿದ್‌ ಒಟ್ಟು 9 ವಿಕೆಟ್‌ ಕಬಳಿಸಿದರು. 3 ಪಂದ್ಯಗಳ ಸರಣಿ 1-1ರಲ್ಲಿ ಸಮಗೊಂಡಿದ್ದು, 3ನೇ ಹಾಗೂ ಅಂತಿಮ ಟೆಸ್ಟ್‌ ಅ.24ರಿಂದ ಆರಂಭಗೊಳ್ಳಲಿದೆ.