ಸಾರಾಂಶ
ಅಗ್ರ-2 ಶ್ರೇಯಾಂಕಿತರು ಸೋಲಿನಿಂದ ಪಾರಾದರೂ, 4ನೇ ಶ್ರೇಯಾಂಕಿತ ಅಲೆಕ್ಸಾಂಡರ್ ಬಿಂಡಗೆ ಭಾರತದ ರಾಘವ್ ಜೈಸಿಂಘಾನಿ ಆಘಾತ ನೀಡಿದರು.
ಬೆಂಗಳೂರು : ಅಗ್ರ-2 ಶ್ರೇಯಾಂಕಿತರು ಸೋಲಿನಿಂದ ಪಾರಾದರೂ, 4ನೇ ಶ್ರೇಯಾಂಕಿತ ಅಲೆಕ್ಸಾಂಡರ್ ಬಿಂಡಗೆ ಭಾರತದ ರಾಘವ್ ಜೈಸಿಂಘಾನಿ ಆಘಾತ ನೀಡಿದರು. ಇಲ್ಲಿ ನಡೆಯುತ್ತಿರುವ ಎಸ್.ಎಂ.ಕೃಷ್ಣ ಸ್ಮರಣಾರ್ಥ ಅಂ.ರಾ. ಓಪನ್ ಟೆನಿಸ್ ಟೂರ್ನಿಯಲ್ಲಿ ಕರ್ನಾಟಕದ ಪ್ರಜ್ವಲ್ ದೇವ್ ಸೇರಿ ಒಟ್ಟು 7 ಭಾರತೀಯರು 2ನೇ ಸುತ್ತಿಗೆ ಪ್ರವೇಶಿಸಿದ್ದಾರೆ.
ಇಟಲಿಯ ಬಿಂಡ ವಿರುದ್ಧ ರಾಘವ್ 2-6, 6-3, 6-4 ಸೆಟ್‌ಗಳಲ್ಲಿ ಜಯಿಸಿದರು.
ಉಳಿದಂತೆ ಅಭಿನವ್ ಸಂಜೀವ್, ಮನೀಶ್ ಸುರೇಶ್‌ಕುಮಾರ್, ಕರಣ್ ಸಿಂಗ್, ಇಶಾಕ್ ಇಕ್ಬಾಲ್, ಆರ್ಯನ್ ಶಾ ಸಹ 2ನೇ ಸುತ್ತಿಗೆ ಪ್ರವೇಶ ಪಡೆದರು.
ಅಗ್ರ ಶ್ರೇಯಾಂಕಿತರಾದ ಆಲಿವರ್ ಕ್ರಾಫೋರ್ಡ್ ಹಾಗೂ ಗ್ರಿಗೊರಿ ಲೊಮಾಕಿನ್ ಸೋತು ಹೊರಬಿದ್ದರು. ಡಬಲ್ಸ್‌ನಲ್ಲಿ ಸೂರಜ್ ಪ್ರಬೋಧ್ ಹಾಗೂ ಮನೀಶ್ ಗಣೇಶ್ ಜೋಡಿ ಅಲೆಕ್ಸಾಂಡರ್ ಬಿಂಡ ಹಾಗೂ ನಿಕಿಟ ಇಯಾನಿನ್ ವಿರುದ್ಧ ಸೋಲುಂಡಿತು.