ಸಾರಾಂಶ
ಮಂಗಳವಾರ ಆರಂಭಗೊಂಡ ಎಸ್.ಎಂ.ಕೃಷ್ಣ ಸ್ಮರಣಾರ್ಥ ಅಂ.ರಾ. ಓಪನ್ ಟೆನಿಸ್ ಟೂರ್ನಿಯ ಪ್ರಧಾನ ಸುತ್ತಿನಲ್ಲಿ ಭಾರತದ ಸಿದ್ಧಾರ್ಥ್ ರಾವತ್, ಚಿರಾಗ್ ದುಹಾನ್ ಶುಭಾರಂಭ ಮಾಡಿದ್ದಾರೆ.
ಬೆಂಗಳೂರು: ಇಲ್ಲಿ ಮಂಗಳವಾರ ಆರಂಭಗೊಂಡ ಎಸ್.ಎಂ.ಕೃಷ್ಣ ಸ್ಮರಣಾರ್ಥ ಅಂ.ರಾ. ಓಪನ್ ಟೆನಿಸ್ ಟೂರ್ನಿಯ ಪ್ರಧಾನ ಸುತ್ತಿನಲ್ಲಿ ಭಾರತದ ಸಿದ್ಧಾರ್ಥ್ ರಾವತ್, ಚಿರಾಗ್ ದುಹಾನ್ ಶುಭಾರಂಭ ಮಾಡಿದ್ದಾರೆ. ಮೊದಲ ಸುತ್ತಿನ ಪಂದ್ಯದಲ್ಲಿ ಸಿದ್ಧಾರ್ಥ್, ಭಾರತದವರೇ ಆದ ದಿಗ್ವಿಜಯ್ ಪ್ರತಾಪ್ ಸಿಂಗ್ ವಿರುದ್ಧ 6-4, 6-4 ನೇರ ಸೆಟ್‌ಗಳಲ್ಲಿ ಸುಲಭವಾಗಿ ಸೋಲಿಸಿ 2ನೇ ಸುತ್ತಿಗೆ ಪ್ರವೇಶಿಸಿದರು.
ಚಿರಾಗ್ ಮೊದಲ ಸುತ್ತಿನ ಪಂದ್ಯದಲ್ಲಿ ಚೆಕ್ ಗಣರಾಜ್ಯದ ಡೊಮಿನಿಕ್ ಪಲಾನ್ ವಿರುದ್ಧ 7-6(7), 6-4 ಸೆಟ್‌ಗಳಲ್ಲಿ ಗೆದ್ದರು. ಅಮೆರಿಕದ ನಿಕ್ ಚಾಪೆಲ್, ರಷ್ಯಾದ ನಿಕಿಟಾ ಇನಿನ್, ಜಪಾನ್‌ನ ರ್‍ಯುಕಿ ಮಟ್ಸುಡಾ ಸಹ 2ನೇ ಸುತ್ತಿಗೆ ಮುನ್ನಡೆದರು.
ಪುರುಷರ ಡಬಲ್ಸ್‌ನಲ್ಲಿ ವಿಷ್ಣು ವರ್ಧನ್-ಸಾಯಿ ಕಾರ್ತಿಕ್, ಪ್ರಜ್ವಲ್ ದೇವ್-ನಿತಿನ್ ಕುಮಾರ್ ಮೊದಲ ಸುತ್ತಿನಲ್ಲಿ ಜಯಿಸಿ 2ನೇ ಸುತ್ತಿಗೆ ಪ್ರೆವೇಶ ಪಡೆದರು.