ಪಂಜಾಬ್‌ ಕಿಂಗ್ಸ್‌ ವಿರುದ್ಧ ಸನ್‌ರೈಸರ್ಸ್‌ ಹೈದರಾಬಾದ್‌ಗೆ 2 ರನ್‌ ರೋಚಕ ಗೆಲುವು!

| Published : Apr 11 2024, 12:48 AM IST / Updated: Apr 11 2024, 04:10 AM IST

ಪಂಜಾಬ್‌ ಕಿಂಗ್ಸ್‌ ವಿರುದ್ಧ ಸನ್‌ರೈಸರ್ಸ್‌ ಹೈದರಾಬಾದ್‌ಗೆ 2 ರನ್‌ ರೋಚಕ ಗೆಲುವು!
Share this Article
  • FB
  • TW
  • Linkdin
  • Email

ಸಾರಾಂಶ

ಪಂಜಾಬ್‌ ಕಿಂಗ್ಸ್‌ ವಿರುದ್ಧ ರೋಚಕ ಗೆಲುವು ಸಾಧಿಸಿದ ಸನ್‌ರೈಸರ್ಸ್‌ ಹೈದರಾಬಾದ್‌. ಅಶುತೋಷ್‌ ಶರ್ಮಾ, ಶಶಾಂಕ್‌ ಸಿಂಗ್‌ ಹೋರಾಟ ವ್ಯರ್ಥ. ಸೋಲಿನ ದವಡೆಯಿಂದ ಪಾರಾದ ಸನ್‌ರೈಸರ್ಸ್‌ಗೆ ಸತತ 2ನೇ ಗೆಲುವು.

ಮುಲ್ಲಾನ್‌ಪುರ್‌: ಅಶುತೋಷ್‌ ಶರ್ಮಾ ಹಾಗೂ ಶಶಾಂಕ್‌ ಸಿಂಗ್‌ರ ಕೆಚ್ಚೆದೆಯ ಹೋರಾಟದ ಹೊರತಾಗಿಯೂ ಪಂಜಾಬ್‌ ಕಿಂಗ್ಸ್‌, ಮಂಗಳವಾರ ನಡೆದ ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧದ ಪಂದ್ಯದಲ್ಲಿ 2 ರನ್‌ಗಳ ವೀರೋಚಿತ ಸೋಲು ಅನುಭವಿಸಿತು.

ಗೆಲ್ಲಲು 183 ರನ್‌ ಗುರಿ ಬೆನ್ನತ್ತಿದ್ದ ಪಂಜಾಬ್‌, 16ನೇ ಓವರಲ್ಲಿ 114ಕ್ಕೆ 6 ವಿಕೆಟ್‌ ಕಳೆದುಕೊಂಡು ಸೋಲಿನತ್ತ ಮುಖ ಮಾಡಿತ್ತು. 27 ಎಸೆತದಲ್ಲಿ ಗೆಲ್ಲಲು 69 ರನ್‌ ಬೇಕಿದ್ದಾಗ ಜೊತೆಯಾದ ಶಶಾಂಕ್‌ ಹಾಗೂ ಅಶುತೋಷ್‌ ತಂಡವನ್ನು ಗೆಲುವಿನ ಸನಿಹಕ್ಕೆ ಕೊಂಡೊಯ್ದರು.

ಕೊನೆಯ ಓವರಲ್ಲಿ 29 ರನ್‌ ಬೇಕಿತ್ತು. ಉನಾದ್ಕತ್‌ ಎಸೆದ ಈ ಓವರಲ್ಲಿ ಶಶಾಂತ್‌ ಹಾಗೂ ಅಶುತೋಷ್‌ 26 ರನ್‌ ಗಳಿಸಿದರು. ಸನ್‌ರೈಸರ್ಸ್‌ ಸೋಲಿನ ದವಡೆಯಿಂದ ಪಾರಾಯಿತು. ಶಶಾಂತ್‌ 25 ಎಸೆತದಲ್ಲಿ 46 ರನ್‌ ಸಿಡಿಸಿದರೆ, ಅಶುತೋಷ್‌ 15 ಎಸೆತದಲ್ಲಿ 33 ರನ್‌ ಚಚ್ಚಿದರು.

ಇದಕ್ಕೂ ಮುನ್ನ 100 ರನ್‌ಗೆ 5 ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿದ್ದ ಸನ್‌ರೈಸರ್ಸ್‌ಗೆ, ನಿತೀಶ್‌ ರೆಡ್ಡಿ ಆಸರೆಯಾದರು. 37 ಎಸೆತದಲ್ಲಿ 4 ಬೌಂಡರಿ, 5 ಸಿಕ್ಸರ್‌ನೊಂದಿಗೆ 64 ರನ್‌ ಸಿಡಿಸಿದ ನಿತೀಶ್‌ ತಂಡ ದೊಡ್ಡ ಮೊತ್ತ ಕಲೆಹಾಕಲು ನೆರವಾದರು. ಅಬ್ದುಲ್‌ ಸಮದ್‌ 25, ಶಾಬಾಜ್‌ 14 ರನ್‌ ಕೊಡುಗೆ ನೀಡಿದರು. 1 ವಿಕೆಟ್‌ ಹಾಗೂ 1 ಕ್ಯಾಚ್‌ ಕೂಡ ಪಡೆದ ನಿತೀಶ್‌ ಪಂದ್ಯಶ್ರೇಷ್ಠರಾದರು. ಸ್ಕೋರ್‌: ಸನ್‌ರೈಸರ್ಸ್‌ 20 ಓವರಲ್ಲಿ 182/9 (ನಿತೀಶ್‌ 64, ಅಬ್ದುಲ್‌ 25, ಅರ್ಶ್‌ದೀಪ್‌ 4-29), ಪಂಜಾಬ್‌ 20 ಓವರಲ್ಲಿ 180/6 (ಶಶಾಂಕ್‌ 46*, ಅಶುತೋಷ್‌ 33*, ಭುವನೇಶ್ವರ್‌ 2-32)