ಕರ್ನಾಟಕಕ್ಕೆ ಸಬ್‌ ಜೂನಿಯರ್‌ ರಾಷ್ಟ್ರೀಯ ಫುಟ್ಬಾಲ್‌ ಕಿರೀಟ : 5-1 ಗೋಲುಗಳಲ್ಲಿ ಭರ್ಜರಿ ಗೆಲುವು

| Published : Sep 23 2024, 01:23 AM IST / Updated: Sep 23 2024, 04:41 AM IST

ಸಾರಾಂಶ

ಸಬ್‌ ಜೂನಿಯರ್‌ ರಾಷ್ಟ್ರೀಯ ಫುಟ್ಬಾಲ್‌ ಟೂರ್ನಿಯಲ್ಲಿ ಕರ್ನಾಟಕ ತಂಡವು ಮಣಿಪುರವನ್ನು 5-1 ಗೋಲುಗಳಿಂದ ಸೋಲಿಸಿ ಪ್ರಶಸ್ತಿ ಜಯಿಸಿತು. ಟೂರ್ನಿಯುದ್ದಕ್ಕೂ ಅಜೇಯವಾಗಿದ್ದ ಕರ್ನಾಟಕ ತಂಡ ಫೈನಲ್‌ ಪಂದ್ಯದಲ್ಲೂ ಪ್ರಾಬಲ್ಯ ಮೆರೆಯಿತು.

 ಬೆಂಗಳೂರು : ಸಬ್‌ ಜೂನಿಯರ್‌ ರಾಷ್ಟ್ರೀಯ ಫುಟ್ಬಾಲ್‌ ಟೂರ್ನಿಯಲ್ಲಿ ಕರ್ನಾಟಕ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಬೆಂಗಳೂರಿನಲ್ಲಿರುವ ಕರ್ನಾಟಕ ರಾಜ್ಯ ಫುಟ್ಬಾಲ್‌ ಸಂಸ್ಥೆ(ಕೆಎಸ್‌ಎಫ್‌ಎ) ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಮಣಿಪುರ ವಿರುದ್ಧ ಫೈನಲ್‌ ಪಂದ್ಯದಲ್ಲಿ ರಾಜ್ಯ ತಂಡ 5-1 ಗೋಲುಗಳಲ್ಲಿ ಭರ್ಜರಿ ಗೆಲುವು ಸಾಧಿಸಿತು. 

ಟೂರ್ನಿಯುದ್ದಕ್ಕೂ ಅಜೇಯವಾಗಿದ್ದ ಆತಿಥೇಯ ತಂಡ ಫೈನಲ್‌ನಲ್ಲೂ ಪ್ರಾಬಲ್ಯ ಸಾಧಿಸಿತು. ಸಿಎಚ್‌ ಸಾಕಿಬ್‌ ಹ್ಯಾಟ್ರಿಕ್‌ ಗೋಲು ಬಾರಿಸಿದರೆ, ರಿಶಾನ್‌ ಚೌಧರಿ ಹಾಗೂ ಅರವಿಂದ್ರಿಯನ್‌ ತಲಾ 1 ಗೋಲು ದಾಖಲಿಸಿದರು. ಕೆಎಸ್‌ಎಫ್‌ಎ ಅಧ್ಯಕ್ಷ, ಶಾಸಕ ಎನ್‌.ಎ.ಹ್ಯಾರಿಸ್‌ ಸೇರಿದಂತೆ ಪ್ರಮುಖರು ವಿಜೇತ ತಂಡಗಳಿಗೆ ಟ್ರೋಫಿ ವಿತರಿಸಿದರು.

ಪುಟ್ಟಯ್ಯ ಸ್ಮರಣಾರ್ಥ ಕಪ್ ಫುಟ್ಬಾಲ್‌ ಇಂದು ಆರಂಭ

ಬೆಂಗಳೂರು: ಬೆಂಗಳೂರು ನಗರ ಫುಟ್ಬಾಲ್‌ ಸಂಸ್ಥೆ ಆಯೋಜಿಸುವ ಸಿ.ಪುಟಯ್ಯ ಸ್ಮರಣಾರ್ಥ ಫುಟ್ಬಾಲ್‌ ಟೂರ್ನಿ ಸೋಮವಾರ ಆರಂಭಗೊಳ್ಳಲಿದೆ. ನಗರದ ಕರ್ನಾಟಕ ರಾಜ್ಯ ಫುಟ್ಬಾಲ್‌ ಸಂಸ್ಥೆಯ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯಲಿವೆ. 

ಟೂರ್ನಿಯಲ್ಲಿ ಬೆಂಗಳೂರು ಎಫ್‌ಸಿ, ಕೊಡಗು ಎಫ್‌ಸಿ, ಎಫ್‌ಸಿ ರಿಯಲ್‌ ಬೆಂಗಳೂರು, ಪರಿಕ್ರಮ ಎಫ್‌ಸಿ, ಕಿಕ್‌ಸ್ಟಾರ್ಟ್‌ ಎಫ್‌ಸಿ, ಎಫ್‌ಸಿ ಬೆಂಗಳೂರು ಯುನೈಟೆಡ್‌ ಸೇರಿದಂತೆ ಒಟ್ಟು 13 ತಂಗಳು ಪಾಲ್ಗೊಳ್ಳಲಿವೆ. ಟೂರ್ನಿ ಅ.6ರಂದು ಕೊನೆಗೊಳ್ಳಲಿದೆ.