ವಿಂಬಲ್ಡನ್‌ ಗ್ರ್ಯಾನ್‌ ಸ್ಲಾಂ ಪ್ರಧಾನ ಸುತ್ತಿಗೆ ಸುಮಿತ್‌ ನಗಾಲ್‌ ಎಂಟ್ರಿ

| Published : May 23 2024, 01:09 AM IST / Updated: May 23 2024, 04:15 AM IST

ವಿಂಬಲ್ಡನ್‌ ಗ್ರ್ಯಾನ್‌ ಸ್ಲಾಂ ಪ್ರಧಾನ ಸುತ್ತಿಗೆ ಸುಮಿತ್‌ ನಗಾಲ್‌ ಎಂಟ್ರಿ
Share this Article
  • FB
  • TW
  • Linkdin
  • Email

ಸಾರಾಂಶ

ಭಾರತದ ಸುಮಿತ್‌ ನಗಾಲ್‌ಗೆ ಸಿಕ್ಕಿದೆ ವಿಂಬಲ್ಡನ್‌ ಗ್ರ್ಯಾನ್‌ ಸ್ಲಾಂ ಟೆನಿಸ್‌ ಟೂರ್ನಿಯ ಪ್ರಧಾನ ಸುತ್ತಿಗೆ ನೇರ ಪ್ರವೇಶ. 5 ವರ್ಷಗಳಲ್ಲಿ ಗ್ರ್ಯಾನ್‌ ಸ್ಲಾಂ ಪ್ರಧಾನ ಸುತ್ತಿಗೇರಿದ ಮೊದಲ ಭಾರತೀಯ ಎನ್ನುವ ಹಿರಿಮೆ.

ಲಂಡನ್‌: ಭಾರತದ ಅಗ್ರ ಟೆನಿಸಿಗ ಸುಮಿತ್‌ ನಗಾಲ್‌ ಈ ಬಾರಿ ವಿಂಬಲ್ಡನ್‌ ಗ್ರ್ಯಾನ್‌ಸ್ಲಾಂ ಟೆನಿಸ್ ಟೂರ್ನಿಯಲ್ಲಿ ಪ್ರಧಾನ ಸುತ್ತಿಗೆ ನೇರ ಪ್ರವೇಶ ಪಡೆದಿದ್ದಾರೆ.

ಅವರು ಕಳೆದ 5 ವರ್ಷಗಳಲ್ಲಿ ವಿಂಬಲ್ಡನ್‌ ಪ್ರಧಾನ ಸುತ್ತಿಗೆ ಪ್ರವೇಶಿಸಿದ ಮೊದಲ ಭಾರತೀಯ. ಈ ಮೊದಲು 2019ರಲ್ಲಿ ಪ್ರಜ್ಞೇಶ್‌ ಗುಣೇಶ್ವರನ್‌ ವಿಂಬಲ್ಡನ್‌ ಪ್ರಧಾನ ಸುತ್ತಿನಲ್ಲಿ ಆಡಿದ್ದರು. ಆದರೆ ಮೊದಲ ಸುತ್ತಿನಲ್ಲೇ ಕೆನಡಾದ ಮಿಲೋಸ್‌ ರೋನಿಕ್‌ ವಿರುದ್ಧ ಸೋತು ಹೊರಬಿದ್ದಿದ್ದರು.

ಭಾರತದ ನಂ.1 ಆಟಗಾರನಾಗಿರುವ ನಗಾಲ್‌ ಇತ್ತೀಚೆಗಷ್ಟೇ ವಿಶ್ವ ರ್‍ಯಾಂಕಿಂಗ್‌ನಲ್ಲಿ ಅಗ್ರ-100ರಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದು, ಸದ್ಯ 97ನೇ ಸ್ಥಾನದಲ್ಲಿದ್ದಾರೆ.

ಅವರು 2018ರಲ್ಲಿ ವಿಂಬಲ್ಡನ್‌ ಟೂರ್ನಿಯ ಅರ್ಹತಾ ಸುತ್ತಿನಲ್ಲಿ ಆಡಿದ್ದರು. 2020ರಲ್ಲಿ ಯುಎಸ್‌ ಓಪನ್‌, 2024ರಲ್ಲಿ ಆಸ್ಟ್ರೇಲಿಯನ್‌ ಓಪನ್‌ 2ನೇ ಸುತ್ತು ಪ್ರವೇಶಿಸಿದ್ದರು.