ವೈಭವ್‌ ಸೂರ್ಯವಂಶಿಯ ಸಿಕ್ಸರ್‌ ಮಳೆಗೆ ಸಾಕ್ಷಿಯಾದ ಈ ಬಾರಿ ಐಪಿಎಲ್‌ನ ಎಲಿಮಿನೇಟರ್‌ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್‌ ವಿರುದ್ಧ ಸನ್‌ರೈಸರ್ಸ್‌ ಹೈದರಾಬಾದ್‌ 0 ರನ್‌ಗಳಿಂದ ಸೋಲನುಭವಿಸಿದ್ದು, ಟೂರ್ನಿಯಿಂದಲೇ ಹೊರಬಿದ್ದಿದೆ.

ಮುಲ್ಲಾನ್‌ಪುರ: ವೈಭವ್‌ ಸೂರ್ಯವಂಶಿಯ ಸಿಕ್ಸರ್‌ ಮಳೆಗೆ ಸಾಕ್ಷಿಯಾದ ಈ ಬಾರಿ ಐಪಿಎಲ್‌ನ ಎಲಿಮಿನೇಟರ್‌ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್‌ ವಿರುದ್ಧ ಸನ್‌ರೈಸರ್ಸ್‌ ಹೈದರಾಬಾದ್‌ 0 ರನ್‌ಗಳಿಂದ ಸೋಲನುಭವಿಸಿದ್ದು, ಟೂರ್ನಿಯಿಂದಲೇ ಹೊರಬಿದ್ದಿದೆ. ಅಂಕಪಟ್ಟಿಯಲ್ಲಿ 4ನೇ ಸ್ಥಾನಿಯಾಗಿ ಪ್ಲೇ-ಆಫ್‌ ತಲುಪಿದ್ದ ರಾಜಸ್ಥಾನ ಕ್ವಾಲಿಫೈಯರ್‌-2 ಪ್ರವೇಶಿಸಿತು.

ಮಂಗಳವಾರ ಆರ್‌ಸಿಬಿ-ಗುಜರಾತ್‌ ನಡುವಿನ ಕ್ವಾಲಿಫೈಯರ್‌-1 ಪಂದ್ಯದಂತೆ, ಬುಧವಾರದ ಪಂದ್ಯವೂ ಏಕಮುಖವಾಗಿ ಸಾಗಿತು. ರಾಜಸ್ಥಾನ ಬ್ಯಾಟಿಂಗ್‌, ಬೌಲಿಂಗ್‌ ಎರಡರಲ್ಲೂ ಅಬ್ಬರಿಸಿದರೆ ಸನ್‌ರೈಸರ್ಸ್‌ ಎರಡರಲ್ಲೂ ಸಪ್ಪೆಯಾಗಿ ಆಘಾತಕಾರಿ ಸೋಲನುಭವಿಸಿತು.ಮೊದಲು ಬ್ಯಾಟ್‌ ಮಾಡಿದ ರಾಜಸ್ಥಾನ ಕಲೆಹಾಕಿದ್ದು ಬರೋಬ್ಬರಿ 243 ರನ್‌. ಕಳೆದುಕೊಂಡಿದ್ದು 8 ವಿಕೆಟ್‌. ತಮ್ಮ ಮೇಲೆಯೇ ಕೇಂದ್ರೀಕೃತವಾಗಿದ್ದ ಪಂದ್ಯದಲ್ಲಿ ವೈಭವ್‌ ಅಕ್ಷರಶಃ ಆರ್ಭಟಿಸಿದರು. ಒಬ್ಬ ಬೌಲರನ್ನೂ ಬಿಡದೆ ದಂಡಿಸಿದರು. 

ಅವರು ಬ್ಯಾಟ್‌ನಿಂದ ಸಿಡಿದದ್ದು 29 ಎಸೆತಕ್ಕೆ 97 ರನ್‌. ಐಪಿಎಲ್‌ನ ಅತಿ ವೇಗದ ಶತಕದ ದಾಖಲೆ ಮುರಿಯವ ಅವಕಾಶದಿಂದ ವಂಚಿತರಾದರೂ, ತಂಡವನ್ನು ಗೆಲ್ಲಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಅವರ ಇನ್ನಿಂಗ್ಸ್‌ನಲ್ಲಿ 5 ಬೌಂಡರಿ, 12 ಸಿಕ್ಸರ್‌ಗಳಿದ್ದವು. ಧ್ರುವ್‌ ಜುರೆಲ್‌ 21 ಎಸೆತಕ್ಕೆ 50, ನಾಯಕ ರಿಯಾನ್‌ ಪರಾಗ್‌ 12 ಎಸೆತಕ್ಕೆ 26, ಜೈಸ್ವಾಲ್‌ 29 ಎಸೆತಕ್ಕೆ 29 ರನ್‌ ಸಿಡಿಸಿದರು. ಮೊದಲ 8 ಓವರ್‌ನಲ್ಲೇ 125 ರನ್‌ ಗಳಿಸಿದ್ದ ತಂಡ, ಕೊನೆ 12 ಓವರ್‌ನಲ್ಲಿ 118 ರನ್‌ ಕಲೆಹಾಕಿತು.

ಆಕ್ರಮಣಕಾರಿ ಆಟಗಾರರ ಪಡೆಯನ್ನೇ ಹೊಂದಿದ್ದ ಸನ್‌ರೈಸರ್ಸ್‌, ಈ ಮೊತ್ತವನ್ನು ಬೆನ್ನತ್ತಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಒತ್ತಡಕ್ಕೊಳಗಾದ ಬ್ಯಾಟರ್ಸ್‌ ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್‌ ಸೇರಿದರು. ಅಭಿಷೇಕ್‌ ಸೊನ್ನೆ ಸುತ್ತಿದರು. ಇಶಾನ್‌ ಕಿಶನ್ ಅಬ್ಬರ 33 ರನ್‌(11 ಎಸೆತ)ಗೆ ಕೊನೆಗೊಂಡಿತು. ಟ್ರ್ಯಾವಿಸ್‌ ಹೆಡ್‌(17) ಹೆನ್ರಿಚ್‌ ಕ್ಲಾಸೆನ್(18) ವಿಫಲರಾಗುವುದರೊಂದಿಗೆ ತಂಡದ ಸೋಲು ಖಚಿತವಾಯಿತು. ಪವರ್‌-ಪ್ಲೇನಲ್ಲೇ ಸೋಲಿನತ್ತ ಮುಖ ಮಾಡಿದ್ದ ತಂಡ 0 ಓವರ್‌ಗಳಲ್ಲಿ 00 ರನ್‌ ಗಳಿಸಿ ಸೋಲೊಪ್ಪಿಕೊಂಡಿತು. ಮತ್ತೆ ಮಾರಕ ದಾಳಿ ಸಂಘಟಿಸಿದ ಜೋಫ್ರಾ ಆರ್ಚರ್ 3 ವಿಕೆಟ್‌ ಪಡೆದರು.

ಸ್ಕೋರ್‌: ರಾಜಸ್ಥಾನ 20 ಓವರಲ್ಲಿ 243/8 (ವೈಭವ್‌ 97, ಜುರೆಲ್‌ 50, ರಿಯಾನ್‌ 26, ಪ್ರಫುಲ್‌ 3-54), ಸನ್‌ರೈಸರ್ಸ್‌ 00 ಓವರಲ್ಲಿ 000 (ನಿತೀಶ್‌ 38, ಇಶಾನ್‌ 33, ಆರ್ಚರ್ ---)

ಪಂದ್ಯಶ್ರೇಷ್ಠ: ವೈಭವ್‌ ಸೂರ್ಯವಂಶಿ

ರಾಯಲ್ಸ್‌ vs ಗುಜರಾತ್‌ ನಾಳೆ ಕ್ವಾಲಿಫೈಯರ್‌-2

ಈ ಪಂದ್ಯದಲ್ಲಿ ಗೆದ್ದ ಹೊರತಾಗಿಯೂ ರಾಜಸ್ಥಾನ ಫೈನಲ್‌ಗೇರಿಲ್ಲ. ತಂಡ ಶುಕ್ರವಾರ ಕ್ವಾಲಿಫೈಯರ್‌-2 ಪಂದ್ಯದಲ್ಲಿ ಗುಜರಾತ್‌ ಟೈಟಾನ್ಸ್‌ ವಿರುದ್ಧ ಆಡಲಿದೆ. ಇದರಲ್ಲಿ ಗೆದ್ದ ತಂಡ ಫೈನಲ್‌ಗೇರಲಿದೆ. ಗುಜರಾತ್‌ ತಂಡ ಮಂಗಳವಾರ ಕ್ವಾಲಿಫೈಯರ್‌-1ರಲ್ಲಿ ಆರ್‌ಸಿಬಿ ವಿರುದ್ಧ ಸೋತಿತ್ತು.

ಈ ಬಾರಿ ಸೂರ್‍ಯವಂಶಿ 61 ಸಿಕ್ಸರ್‌: ಐಪಿಎಲ್‌ ಆವೃತ್ತಿಯೊಂದರ ಗರಿಷ್ಠ 

ಮುಲ್ಲಾನ್‌ಪುರ: ಈ ಬಾರಿ ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್‌ ಬ್ಯಾಟರ್‌ ವೈಭವ್‌ ಸೂರ್ಯವಂಶಿ 0 ಸಿಕ್ಸರ್‌ ಬಾರಿಸಿದ್ದು, ಐಪಿಎಲ್‌ ಆವೃತ್ತಿಯೊಂದರಲ್ಲಿ ಗರಿಷ್ಠ ಸಿಕ್ಸರ್‌ ಸಿಡಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಬುಧವಾರ ಸನ್‌ರೈಸರ್ಸ್‌ ಹೈದರಾಬಾದ್ ವಿರುದ್ಧ ಎಲಿಮಿನೇಟರ್‌ ಪಂದ್ಯದಲ್ಲಿ ವೈಭವ್‌ 00 ಸಿಕ್ಸರ್‌ ಸಿಡಿಸಿ, ಕ್ರಿಸ್‌ ಗೇಲ್‌ ದಾಖಲೆ ಮುರಿದರು. ಆವೃತ್ತಿಯೊಂದರಲ್ಲಿ ಗರಿಷ್ಠ ಸಿಕ್ಸರ್‌ ದಾಖಲೆ ಬರೋಬ್ಬರಿ 14 ವರ್ಷಗಳ ಕಾಲ ಗೇಲ್‌ ಹೆಸರಲ್ಲಿತ್ತು. ಅವರು 2012ರ ಐಪಿಎಲ್‌ನಲ್ಲಿ 59 ಸಿಕ್ಸರ್‌ ಸಿಡಿಸಿದ್ದರು. ಅವರನ್ನು ವೈಭವ್‌ ಹಿಂದಿಕ್ಕಿದ್ದಾರೆ. ಆ್ಯಂಡ್ರೆ ರಸೆಲ್‌ 2019ರಲ್ಲಿ 52, ಕ್ರಿಸ್‌ ಗೇಲ್‌ 2013ರಲ್ಲಿ 51 ಸಿಕ್ಸರ್‌ ಬಾರಿಸಿದ್ದರು.

ಅರ್ಧಶತಕದ ದಾಖಲೆ:

ವೈಭವ್‌ ಕೇವಲ 16 ಎಸೆತಕ್ಕೆ ಅರ್ಧಶತಕ ಬಾರಿಸಿದರು. ಐಪಿಎಲ್‌ನಲ್ಲಿ ಅವರು 5 ಬಾರಿ 20ಕ್ಕಿಂತ ಕಡಿಮೆ ಎಸೆತಗಳಲ್ಲಿ 50 ರನ್ ಪೂರೈಸಿದ್ದಾರೆ. ಇದು 2ನೇ ಗರಿಷ್ಠ. ಅಭಿಷೇಕ್‌ 6, ನಿಕೋಲಸ್‌ ಪೂರನ್‌ 5 ಬಾರಿ ಈ ಸಾಧನೆ ಮಾಡಿದ್ದಾರೆ.