ಸೂರ್ಯಗೆ ಸಿಗುತ್ತಾ ವರ್ಷದ ಟಿ20 ಕ್ರಿಕೆಟರ್‌ ಪ್ರಶಸ್ತಿ?

| Published : Jan 04 2024, 01:45 AM IST

ಸೂರ್ಯಗೆ ಸಿಗುತ್ತಾ ವರ್ಷದ ಟಿ20 ಕ್ರಿಕೆಟರ್‌ ಪ್ರಶಸ್ತಿ?
Share this Article
  • FB
  • TW
  • Linkdin
  • Email

ಸಾರಾಂಶ

ಐಸಿಸಿ ವರ್ಷದ ಟಿ20 ಕ್ರಿಕೆಟಿಗ ರೇಸ್‌ನಲ್ಲಿ ಸೂರ್ಯಕುಮಾರ್‌ ಯಾದವ್‌. ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿಯಿಂದ ನಾಮಿನೇಷನ್‌ ಪಟ್ಟಿ ಪ್ರಕಟ. ಸೂರ್ಯ ಜೊತೆ ರೇಸ್‌ನಲ್ಲಿ ಸಿಕಂದರ್‌ ರಾಜಾ, ಅಲ್ಪೇಶ್‌ ರಾಮ್ಜಾನಿ, ಮಾರ್ಕ್‌ ಚಾಪ್ಮನ್‌.

ದುಬೈ: ಟಿ20 ಕ್ರಿಕೆಟ್‌ನ ಸೂಪರ್‌ ಸ್ಟಾರ್‌, ಬೌಲರ್‌ಗಳನ್ನು ಮನ ಬಂದಂತೆ ಚೆಂಡಾಡೋ 360 ಡಿಗ್ರಿ ಬ್ಯಾಟರ್‌ ಭಾರತದ ಸೂರ್ಯಕುಮಾರ್‌ ಯಾದವ್‌, 2023ರ ಐಸಿಸಿ ವರ್ಷದ ಟಿ20 ಕ್ರಿಕೆಟಿಗ ಪ್ರಶಸ್ತಿ ರೇಸ್‌ಗೆ ಕಾಲಿಟ್ಟಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ(ಐಸಿಸಿ) ಬುಧವಾರ, ಈ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡಿರುವ ಆಟಗಾರರ ಪಟ್ಟಿಯನ್ನು ಪ್ರಕಟಿಸಿದ್ದು, ತನ್ನ ವೆಬ್‌ಸೈಟ್‌ https://www.icc-cricket.com/awards/icc-awards-2023 ನಲ್ಲಿ ಅಭಿಮಾನಿಗಳು ವೋಟಿಂಗ್‌ ಮಾಡಲು ಅವಕಾಶ ಕಲ್ಪಿಸಿದೆ.2022ರಲ್ಲಿ ಈ ಗೌರವಕ್ಕೆ ಪಾತ್ರರಾಗಿದ್ದ ಸೂರ್ಯ , 2023ರಲ್ಲೂ ಟಿ20 ಮಾದರಿಯಲ್ಲಿ ಅಬ್ಬರದ ಬ್ಯಾಟಿಂಗ್‌ ಪ್ರದರ್ಶನ ತೋರಿದರು. 17 ಇನ್ನಿಂಗ್ಸ್‌ಗಳಲ್ಲಿ 48.86ರ ಸರಾಸರಿ, 155.95ರ ಸ್ಟ್ರೈಕ್‌ರೇಟ್‌ನಲ್ಲಿ 733 ರನ್‌ ಚಚ್ಚಿದ ಸೂರ್ಯ, ಕೆಲ ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸುವ ಅವಕಾಶವನ್ನೂ ಪಡೆದರು. ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ವರ್ಷದ ಕೊನೆಯ ಟಿ20 ಪಂದ್ಯದಲ್ಲಿ, ದ.ಆಫ್ರಿಕಾ ವಿರುದ್ಧ ಕೇವಲ 56 ಎಸೆತಗಳಲ್ಲಿ ಶತಕ ಸಿಡಿಸಿದರು.ಈ ರೇಸ್‌ನಲ್ಲಿರುವ ಉಳಿದ ಮೂವರೆಂದರೆ ಅದು ಜಿಂಬಾಬ್ವೆಯ ಸಿಕಂದರ್‌ ರಾಜಾ (11 ಇನ್ನಿಂಗ್ಸ್‌, 515 ರನ್‌), ಉಗಾಂಡದ ಅಲ್ಪೇಶ್‌ ರಾಮ್ಜಾನಿ (55 ವಿಕೆಟ್‌) ಹಾಗೂ ನ್ಯೂಜಿಲೆಂಡ್‌ನ ಮಾರ್ಕ್‌ ಚಾಪ್ಮನ್‌ (17 ಇನ್ನಿಂಗ್ಸಲ್ಲಿ 556 ರನ್‌).