ಸಾರಾಂಶ
ಮೆಲ್ಬರ್ನ್: ಟಿ20 ವಿಶ್ವಕಪ್‌ಗೆ ಆಸ್ಟ್ರೇಲಿಯಾ ತಂಡವನ್ನು 2007ರಲ್ಲಿ ವಿಂಡೀಸ್‌ನಲ್ಲಿ ನಡೆದಿದ್ದ ಏಕದಿನ ವಿಶ್ವಕಪ್ ವಿಜೇತ ತಂಡದ ಸದಸ್ಯರು, 2022ರಲ್ಲಿ ಕಾರು ಅಪಘಾತದಲ್ಲಿ ನಿಧನರಾದ ಖ್ಯಾತ ಆಲ್ರೌಂಡರ್ ಆ್ಯಂಡ್ರೂ ಸೈಮಂಡ್ಸ್‌ರ ಮಕ್ಕಳಿಂದ ಪ್ರಕಟಗೊಳಿಸಲಾಯಿತು.
ಪಾಂಟಿಂಗ್, ಹೇಡನ್, ಮೆಗ್ರಾಥ್, ಮೈಕ್ ಹಸ್ಸಿ, ಗಿಲ್‌ಕ್ರಿಸ್ಟ್, ಮೈಕಲ್ ಕ್ಲಾರ್ಕ್, ಸ್ಟುವರ್ಟ್ ಕ್ಲಾರ್ಕ್‌ರ ಜೊತೆ ಸೈಮಂಡ್ಸ್‌ರ ಮಗ, ಮಗಳು ಆಟಗಾರರ ಹೆಸರನ್ನು ಘೋಷಿಸಿದರು. 2022ರ ವಿಶ್ವಕಪ್ ತಂಡದಲ್ಲಿದ್ದ 12 ಆಟಗಾರರು ಸ್ಥಾನ ಉಳಿಸಿಕೊಂಡಿದ್ದಾರೆ.
ಐಪಿಎಲ್‌ನಲ್ಲಿ ಅಬ್ಬರಿಸುತ್ತಿರುವ ಜೇಕ್ ಫ್ರೇಸರ್‌ಗೆ ಸ್ಥಾನ ಸಿಕ್ಕಿಲ್ಲ.
ತಂಡ: ಟ್ರ್ಯಾವಿಸ್ ಹೆಡ್, ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್ (ನಾಯಕ), ಜೋಶ್ ಇಂಗ್ಲಿಸ್, ಮ್ಯಾಥ್ಯೂ ವೇಡ್, ಟಿಮ್ ಡೇವಿಡ್, ಮಾರ್ಕಸ್ ಸ್ಟೋಯ್ನಿಸ್, ಕ್ಯಾಮರೂನ್ ಗ್ರೀನ್, ಗ್ಲೆನ್ ಮ್ಯಾಕ್ಸ್‌ವೆಲ್, ಆ್ಯಸ್ಟನ್ ಏಗಾರ್, ಆ್ಯಡಂ ಝ್ಯಾಂಪ, ಪ್ಯಾಟ್ ಕಮಿನ್ಸ್, ಜೋಶ್ ಹೇಜಲ್‌ವುಡ್, ಮಿಚೆಲ್ ಸ್ಟಾರ್ಕ್, ನೇಥನ್ ಎಲ್ಲೀಸ್.
ಐಪಿಎಲ್‌ನಲ್ಲಿ ಆಡುತ್ತಿರುವ 8 ಆಫ್ಘಾನ್ ಆಟಗಾರರು ಟಿ20 ವಿಶ್ವಕಪ್‌ಗೆ ಆಯ್ಕೆ
ಕಾಬೂಲ್: ಸದ್ಯ ಚಾಲ್ತಿಯಲ್ಲಿರುವ ಐಪಿಎಲ್ 17ನೇ ಆವೃತ್ತಿಯಲ್ಲಿ ಆಡುತ್ತಿರುವ 8 ಅಫ್ಘಾನಿಸ್ತಾನಿ ಆಟಗಾರರು ಮುಂಬರುವ ಟಿ20 ವಿಶ್ವಕಪ್‌ಗೆ ಆಯ್ಕೆಯಾಗಿದ್ದಾರೆ. 15 ಸದಸ್ಯರ ತಂಡವನ್ನು ತಾರಾ ಆಲ್ರೌಂಡರ್ ರಶೀದ್ ಖಾನ್ ಮುನ್ನಡೆಸಲಿದ್ದಾರೆ.
ತಂಡ: ರಶೀದ್ ಖಾನ್ (ನಾಯಕ), ರಹಮಾನುಲ್ಲಾ ಗುರ್ಬಾಜ್, ಇಬ್ರಾಹಿಂ ಜದ್ರಾನ್, ಅಜ್ಮತುಲ್ಲಾ ಒಮರ್‌ಝಾಯ್, ನಜೀಬುಲ್ಲಾ ಜದ್ರಾನ್, ಮೊಹಮದ್ ಇಶಾಕ್, ಮೊಹಮದ್ ನಬಿ, ಗುಲ್ಬದಿನ್ ನೈಬ್, ಕರೀಂ ಜನತ್, ನಾಂಗ್ಯಾಲ್ ಖರೋತಿ , ಮುಜೀಬ್ ಉರ್ ರಹಮಾನ್, ನೂರ್ ಅಹ್ಮದ್, ನವೀನ್ ಉಲ್-ಹಕ್, ಫಜಲ್‌ಹಕ್ ಫಾರೂಕಿ, ಅಹ್ಮದ್ ಮಲಿಕ್.