ಸಾರಾಂಶ
2006ರಲ್ಲಿ ಅಂಪೈರಿಂಗ್ ವೃತ್ತಿಬದುಕು ಆರಂಭಿಸಿದ ಎರಾಸ್ಮಸ್ 2016, 2017, 2021ರಲ್ಲಿ ಐಸಿಸಿ ವರ್ಷದ ಶ್ರೇಷ್ಠ ಅಂಪೈರ್ ಗೌರವಕ್ಕೆ ಪಾತ್ರರಾಗಿದ್ದಾರೆ. 4 ಏಕದಿನ, 7 ಟಿ20 ವಿಶ್ವಕಪ್‌ಗಳಲ್ಲಿ ಅವರು ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದಾರೆ.
ದುಬೈ: ದಕ್ಷಿಣ ಆಫ್ರಿಕಾದ ಮರಾಯಸ್ ಎರಾಸ್ಮಸ್ (60) ಅಂತಾರಾಷ್ಟ್ರೀಯ ಅಂಪೈರಿಂಗ್‌ಗೆ ನಿವೃತ್ತಿ ಘೋಷಿಸಿದ್ದಾರೆ.ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ ನಡುವಿನ 2ನೇ ಟೆಸ್ಟ್ ಅವರು ಕಾರ್ಯನಿರ್ವಹಿಸಲಿರುವ ಕೊನೆ ಪಂದ್ಯವಾಗಲಿದೆ. 2006ರಲ್ಲಿ ಅಂಪೈರಿಂಗ್ ವೃತ್ತಿಬದುಕು ಆರಂಭಿಸಿದ ಎರಾಸ್ಮಸ್ 2016, 2017, 2021ರಲ್ಲಿ ಐಸಿಸಿ ವರ್ಷದ ಶ್ರೇಷ್ಠ ಅಂಪೈರ್ ಗೌರವಕ್ಕೆ ಪಾತ್ರರಾಗಿದ್ದಾರೆ. 4 ಏಕದಿನ ವಿಶ್ವಕಪ್ (2011, 2015, 2019, 2023), 7 ಟಿ20 ವಿಶ್ವಕಪ್ (2009, 2010, 2012, 2014, 2016, 2021, 2022) ಹಾಗೂ ಎರಡು ಚಾಂಪಿಯನ್ಸ್ ಟ್ರೋಫಿ (2013, 2017)ಗಳಲ್ಲಿ ಅವರು ಕಾರ್ಯನಿರ್ವಹಿಸಿದ್ದಾರೆ. ಕಿವೀಸ್ ಹಾಗೂ ಆಸೀಸ್ ನಡುವಿನ ಪಂದ್ಯ ಅವರು ಕಾರ್ಯನಿರ್ವಹಿಸಲಿರುವ 82ನೇ ಟೆಸ್ಟ್ ಎನಿಸಲಿದೆ.ಆಸೀಸ್ vs ನ್ಯೂಜಿಲೆಂಡ್ 2ನೇ ಟೆಸ್ಟ್ ಇಂದಿನಿಂದ
ಕ್ರೈಸ್ಟ್‌ಚರ್ಚ್: ಶುಕ್ರವಾರದಿಂದ ಆರಂಭಗೊಳ್ಳಲಿರುವ ಆಸ್ಟ್ರೇಲಿಯಾ ವಿರುದ್ಧದ 2ನೇ ಟೆಸ್ಟ್‌ನಲ್ಲಿ ಗೆದ್ದು ಸರಣಿ ಸೋಲಿನಿಂದ ಪಾರಾಗಲು ನ್ಯೂಜಿಲೆಂಡ್ ತಂಡ ಎದುರು ನೋಡುತ್ತಿದೆ. ಮೊದಲ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ಸುಲಭ ಗೆಲುವು ದಾಖಲಿಸಿತ್ತು. ಈ ಪಂದ್ಯ ನ್ಯೂಜಿಲೆಂಡ್‌ನ ಇಬ್ಬರು ದಿಗ್ಗಜ ಕ್ರಿಕೆಟಿಗರ ಪಾಲಿಗೆ ಮಹತ್ವದೆನಿಸಿದೆ. ಮಾಜಿ ನಾಯಕ ಕೇನ್ ವಿಲಿಯಮ್ಸನ್ ಹಾಗೂ ಹಾಲಿ ನಾಯಕ ಟಿಮ್ ಸೌಥಿ ಇಬ್ಬರೂ ತಮ್ಮ 100ನೇ ಟೆಸ್ಟ್ ಪಂದ್ಯಗಳನ್ನಾಡಲಿದ್ದಾರೆ.