ಕಿರಿಯರ ಅಥ್ಲೆಟಿಕ್ಸ್‌: ರಾಜ್ಯದ ಉನ್ನತಿಗೆ ಬಂಗಾರ, ನಿಯೋಲ್‌ಗೆ ಬೆಳ್ಳಿ

| Published : Mar 10 2024, 01:31 AM IST

ಕಿರಿಯರ ಅಥ್ಲೆಟಿಕ್ಸ್‌: ರಾಜ್ಯದ ಉನ್ನತಿಗೆ ಬಂಗಾರ, ನಿಯೋಲ್‌ಗೆ ಬೆಳ್ಳಿ
Share this Article
  • FB
  • TW
  • Linkdin
  • Email

ಸಾರಾಂಶ

ಕರ್ನಾಟಕ ಕೂಟದಲ್ಲಿ ಈ ವರೆಗೆ 2 ಚಿನ್ನ ಸೇರಿ 3 ಪದಕಗಳನ್ನು ತನ್ನದಾಗಿಸಿಕೊಂಡಿದೆ. ಕೂಟದ ಮೊದಲ ದಿನವಾದ ಶುಕ್ರವಾರ ಮಹಿಳಾ ವಿಭಾಗದ ಲಾಂಗ್‌ಜಂಪ್‌ನಲ್ಲಿ ಪಾವನ ನಾಗರಾಜ್‌ ಚಿನ್ನ ಗೆದ್ದಿದ್ದರು.

ಲಖನೌ: ಇಲ್ಲಿ ನಡೆಯುತ್ತಿರುವ 22ನೇ ರಾಷ್ಟ್ರೀಯ ಅಂಡರ್‌-20 ಫೆಡರೇಷನ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕಕ್ಕೆ ಮತ್ತೆರಡು ಪದಕಗಳು ಲಭಿಸಿವೆ. ಮಹಿಳೆಯರ 100 ಮೀ. ಹರ್ಡಲ್ಸ್‌ನಲ್ಲಿ ಉನ್ನತಿ ಅಯ್ಯಪ್ಪ ಅವರು 14.05 ಸೆಕೆಂಡ್‌ಗಳಲ್ಲಿ ಕ್ರಮಿಸಿ ಚಿನ್ನದ ಪದಕ ಗೆದ್ದರು. ಒಡಿಶಾದ ಸಬಿತಾ ಟೊಪ್ಪೊ ಅವರು 14.24 ಸೆಕೆಂಡ್‌ಗಳಲ್ಲಿ ಕ್ರಮಿಸಿ ಬೆಳ್ಳಿಯನ್ನು ತಮ್ಮದಾಗಿಸಿಕೊಂಡರೆ, ಮಹಾರಾಷ್ಟ್ರದ ಅಲೀಜಾ ಅಫ್ತಾಬ್‌14.58 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡರು.ಇದೇ ವೇಳೆ 100 ಮೀ. ರೇಸ್‌ನಲ್ಲಿ ರಾಜ್ಯದ ನಿಯೋಲ್‌ ಅನ್ನಾ ಕೊರ್ನೆಲಿಯೊ 12.14 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು. ಈ ಸ್ಪರ್ಧೆಯಲ್ಲಿ ಗುಜರಾತ್‌ನ ಸಾಕ್ಷಿ ಚಂಪಾಲಾಲ್‌ 12.09 ಸೆಕೆಂಡ್‌ಗಳಲ್ಲಿ ಕ್ರಮಿಸಿ ಚಿನ್ನಕ್ಕೆ ಮುತ್ತಿಟ್ಟರು. ಮಹಾರಾಷ್ಟ್ರದ ರುಜುಲಾ ಅಮೋಲ್‌ ಭೊನ್ಸಾಲೆ 12.17 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಕಂಚು ಪಡೆದರು.ಕೂಟದಲ್ಲಿ ಕರ್ನಾಟಕ ಈ ವರೆಗೆ 2 ಚಿನ್ನ ಸೇರಿ 3 ಪದಕಗಳನ್ನು ತನ್ನದಾಗಿಸಿಕೊಂಡಿದೆ. ಕೂಟದ ಮೊದಲ ದಿನವಾದ ಶುಕ್ರವಾರ ಮಹಿಳಾ ವಿಭಾಗದ ಲಾಂಗ್‌ಜಂಪ್‌ನಲ್ಲಿ ಪಾವನ ನಾಗರಾಜ್‌ 6.01 ಮೀ. ದೂರಕ್ಕೆ ಜಿಗಿದು ಚಿನ್ನ ಗೆದ್ದಿದ್ದರು. ಭಾನುವಾರ ಕೂಟ ಕೊನೆಗೊಳ್ಳಲಿದೆ.