ಸಾರಾಂಶ
ಬೆಂಗಳೂರು ಬುಲ್ಸ್‌ಗೆ ಕೊನೆ ಪಂದ್ಯದಲ್ಲೂ ಸೋಲೇ ಗತಿ. 22 ಪಂದ್ಯಗಳಲ್ಲಿ ಒಟ್ಟು 19 ಸೋಲು ಕಂಡು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲೇ ಉಳಿದ ಬುಲ್ಸ್.
ಪುಣೆ: 11ನೇ ಆವೃತ್ತಿಯ ಪ್ರೊ ಕಬಡ್ಡಿ ಟೂರ್ನಿಯ ಲೀಗ್ ಹಂತ ಮುಕ್ತಾಯಗೊಂಡಿದೆ. ಬೆಂಗಳೂರು ಬುಲ್ಸ್ ಸೋಲಿನೊಂದಿಗೆ ತನ್ನ ಅಭಿಯಾನವನ್ನು ಕೊನೆಗೊಳಿಸಿದೆ. ಮಂಗಳವಾರ ನಡೆದ 22ನೇ ಹಾಗೂ ಕೊನೆಯ ಪಂದ್ಯದಲ್ಲಿ ಬುಲ್ಸ್ 30-44 ಅಂಕಗಳಲ್ಲಿ ಯು.ಪಿ.ಯೋಧಾಸ್‌ಗೆ ಶರಣಾಯಿತು. 19 ಸೋಲು, 2 ಜಯ, 1 ಟೈನೊಂದಿಗೆ ಬುಲ್ಸ್ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆಯಿತು.
ಈ ಜಯದೊಂದಿಗೆ ಯೋಧಾಸ್ 3ನೇ ಸ್ಥಾನಕ್ಕೇರಿತು. ಮತ್ತೊಂದು ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ವಿರುದ್ಧ 36-27ರಲ್ಲಿ ಗೆದ್ದ ಯು ಮುಂಬಾ 6ನೇ ಸ್ಥಾನಿಯಾಗಿ ಪ್ಲೇ-ಆಫ್ ಪ್ರವೇಶಿಸಿತು. ಗುರುವಾರದಿಂದ ಪ್ಲೇ-ಆಫ್ ಪಂದ್ಯಗಳು ಆರಂಭಗೊಳ್ಳಲಿವೆ.