ತಿರುವನಂತಪುರಂನಲ್ಲಿ ಅ.13ಕ್ಕೆ ಮ್ಯಾರಥಾನ್: 6000+ ಮಂದಿ ಭಾಗಿ

| Published : May 09 2024, 12:45 AM IST / Updated: May 09 2024, 04:36 AM IST

ಸಾರಾಂಶ

ಓಟದಲ್ಲಿ 6000ಕ್ಕೂ ಅಧಿಕ ಸ್ಪರ್ಧಿಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಯುಎಸ್‌ಟಿ ಸಂಸ್ಥೆಯ 500ಕ್ಕೂ ಹೆಚ್ಚಿನ ಉದ್ಯೋಗಿಗಳೂ ಓಟದಲ್ಲಿ ಪಾಲ್ಗೊಳ್ಳಲಿದ್ದಾರೆ.

ತಿರುವನಂತಪುರಂ(ಕೇರಳ): ಕೇರಳದ ಅತಿ ದೊಡ್ಡ ಮ್ಯಾರಥಾನ್‌ ಎನಿಸಿಕೊಂಡಿರುವ ಯುಎಸ್‌ಟಿ ತಿರುವನಂತಪುರಂ ಮ್ಯಾರಥಾನ್‌ ಅಕ್ಟೋಬರ್‌ 13ರಂದು ನಡೆಯಲಿದೆ. ಎನ್‌ಇಬಿ ಸ್ಪೋರ್ಟ್‌ ಸಹಯೋಗದೊಂದಿಗೆ ಈ ಮ್ಯಾರಥಾನ್‌ ನಡೆಯಲಿದ್ದು, ಓಟದಲ್ಲಿ 6000ಕ್ಕೂ ಅಧಿಕ ಸ್ಪರ್ಧಿಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ. 

ಯುಎಸ್‌ಟಿ ಸಂಸ್ಥೆಯ 500ಕ್ಕೂ ಹೆಚ್ಚಿನ ಉದ್ಯೋಗಿಗಳೂ ಓಟದಲ್ಲಿ ಪಾಲ್ಗೊಳ್ಳಲಿದ್ದಾರೆ.ಯುಎಸ್‌ಟಿ ತಿರುವನಂತಪುರಂ ಕ್ಯಾಂಪಸ್‌ನಲ್ಲಿ ಮ್ಯಾರಥಾನ್‌ ಆರಂಭಗೊಳ್ಳಲಿದ್ದು, ಅಲ್ಲೇ ಕೊನೆಗೊಳ್ಳಲಿದೆ. ಫುಲ್‌ ಮ್ಯಾರಥಾನ್‌, ಹಾಫ್‌ ಮ್ಯಾರಥಾನ್‌, 10 ಕಿ.ಮೀ. ಹಾಗೂ 5 ಕಿ.ಮೀ. ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ ಎಂದು ಆಯೋಜಕರು ತಿಳಿಸಿದ್ದಾರೆ. ಈ ಪೈಕಿ ಫುಲ್‌ ಮ್ಯಾರಥಾನ್‌, ಹಾಫ್‌ ಮ್ಯಾರಥಾನ್‌, 10 ಕಿ.ಮೀ. ವಿಭಾಗಗಳ ಸ್ಪರ್ಧೆಗೆ ಆಕರ್ಷಕ ನಗದು ಬಹುಮಾನ ನೀಡಲಾಗುವುದು ಎಂದು ಆಯೋಜಕರು ಮಾಹಿತಿ ನೀಡಿದ್ದಾರೆ.

ಒಲಿಂಪಿಕ್ಸ್‌ ಜ್ಯೋತಿ ಫ್ರಾನ್ಸ್‌ಗೆ ಆಗಮನ 

ಪ್ಯಾರಿಸ್‌: 2024ರ ಪ್ಯಾರಿಸ್‌ ಒಲಿಂಪಿಕ್ಸ್‌ ಜ್ಯೋತಿ ಬುಧವಾರ ಫ್ರಾನ್ಸ್‌ನ ಬಂದರು ನಗರ ಮಾರ್ಸೆಗೆ ಆಗಮಿಸಿದೆ. ಇತ್ತೀಚೆಗಷ್ಟೇ ಗ್ರೀಸ್‌ನಲ್ಲಿ ಸಂಪ್ರದಾಯದಂತೆ ಒಲಿಂಪಿಕ್ಸ್ ಜ್ಯೋತಿ ಬೆಳಗಿಸಲಾಗಿತ್ತು. ಅಲ್ಲಿಂದ 19ನೇ ಶತಮಾನದ ಹಡಗು ‘ಬೆಲೆಮ್‌’ ಮೂಲಕ ಜ್ಯೋತಿಯನ್ನು ಫ್ರಾನ್ಸ್‌ಗೆ ತರಲಾಗಿದೆ. 

ಜ್ಯೋತಿ ಹಸ್ತಾಂತರ ಪ್ರಕ್ರಿಯೆ ವೇಳೆ ಲಕ್ಷಾಂತರ ಮಂದಿ ಸೇರಿದ್ದರು. ಇನ್ನು ಫ್ರಾನ್ಸ್ ಹಾಗೂ ಫ್ರೆಂಚ್‌ ನೇರ ಆಡಳಿತದ ದೇಶಗಳ ವಿವಿಧ ನಗರಗಳಲ್ಲಿ ಸುಮಾರು 12000 ಕಿ.ಮೀ. ದೂ ಒಲಿಂಪಿಕ್ಸ್‌ ಜ್ಯೋತಿ ಯಾತ್ರೆ ಸಂಚರಿಸಲಿದೆ. ಬಳಿಕ ಜು.26ರಂದು ಜ್ಯೋತಿ ಪ್ಯಾರಿಸ್‌ಗೆ ಆಗಮಿಸಲಿದೆ. ಕ್ರೀಡಾಕೂಟ ಜು.26ರಿಂದ ಆ.11ರ ವರೆಗೆ ನಡೆಯಲಿದೆ.