ಸಾರಾಂಶ
ನವದೆಹಲಿ: ಭಾರತದ ಪರ ಅತಿಹೆಚ್ಚು ಪಂದ್ಯಗಳನ್ನಾಡಿರುವ ಮಹಿಳಾ ಹಾಕಿ ಆಟಗಾರ್ತಿ ಎನ್ನುವ ದಾಖಲೆ ಹೊಂದಿರುವ ವಂದನಾ ಕಟಾರಿಯಾ, ಅಂತಾರಾಷ್ಟ್ರೀಯ ಹಾಕಿಗೆ ಮಂಗಳವಾರ ವಿದಾಯ ಘೋಷಿಸಿದ್ದಾರೆ.
15 ವರ್ಷಗಳ ಕಾಲ, ಒಟ್ಟು 320 ಅಂ.ರಾ. ಪಂದ್ಯಗಳನ್ನಾಡಿರುವ ವಂದನಾ, 158 ಗೋಲು ದಾಖಲಿಸಿದ್ದಾರೆ. 2020ರ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಐತಿಹಾಸಿಕ 4ನೇ ಸ್ಥಾನ ಪಡೆದ ಭಾರತ ತಂಡದ ಸದಸ್ಯೆಯಾಗಿದ್ದರು. ಪ್ರತಿಷ್ಠಿತ ಪದ್ಮಶ್ರೀ ಹಾಗೂ ಅರ್ಜುನ ಪ್ರಶಸ್ತಿ ವಿಜೇತ ವಂದನಾ, 2016 ಹಾಗೂ 2023ರಲ್ಲಿ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಗೂ 2022ರ ಎಫ್‌ಐಎಚ್ ಮಹಿಳಾ ನೇಷನ್ಸ್ ಕಪ್‌ನಲ್ಲಿ ಚಿನ್ನದ ಪದಕ ಗೆದ್ದ ಭಾರತ ತಂಡದಲ್ಲಿದ್ದರು.
ವಿಶ್ವ ಬಾಕ್ಸಿಂಗ್ ಕಪ್: ಭಾರತದ ಲಕ್ಷ್ಯಗೆ ಸೋಲು
ನವದೆಹಲಿ: ಬ್ರೆಜಿಲ್‌ನ ಫೋಜ್ ಡೊ ಇಗುವಾಕುದಲ್ಲಿ ನಡೆಯುತ್ತಿರುವ ಚೊಚ್ಚಲ ವಿಶ್ವ ಬಾಕ್ಸಿಂಗ್ ಕಪ್‌ನಲ್ಲಿ ಭಾರತದ ಲಕ್ಷ್ಯ ಚಹರ್ ಮೊದಲ ಸುತ್ತಿನಲ್ಲಿಯೇ ಸೋಲು ಕಾಣುವ ಮೂಲಕ ತಮ್ಮ ಅಭಿಯಾನ ಅಂತ್ಯಗೊಳಿಸಿದರು. ಪ್ರಿ- ಕ್ವಾರ್ಟರ್ ಫೈನಲ್‌ನಲ್ಲಿ ಚಹರ್, 2023ರ ವಿಶ್ವ ಚಾಂಪಿಯನ್‌ಶಿಪ್ ಬೆಳ್ಳಿ ಪದಕ ವಿಜೇತ ಬ್ರೆಜಿಲ್‌ನ ವಾಂಡರ್ಲಿ ಪೆರೇರಾ ವಿರುದ್ಧ 0-5 ಅಂತರದಿಂದ ಹೀನಾಯ ಸೋಲು ಕಂಡರು. ಸೋಮವಾರದಿಂದ ಆರಂಭವಾಗಿರುವ ಪಂದ್ಯಾವಳಿಯ ಮೂರನೇ ದಿನವಾದ ಬುಧವಾರ ಭಾರತದಿಂದ ಜಾದುಮಣಿ ಸಿಂಗ್, ನಿಖಿಲ್ ದುಬೆ, ಜುಗ್ನೂ ಕಣಕ್ಕಿಳಿಯಲಿದ್ದಾರೆ.