ಐಪಿಎಲ್‌ಗೆ ಕಾಲಿಟ್ಟ ಮತ್ತೋರ್ವ ಕನ್ನಡಿಗ ವಿದ್ವತ್‌: ಪಾದಾರ್ಪಣೆಯಲ್ಲೇ ಮಿಂಚು

| Published : May 10 2024, 01:37 AM IST / Updated: May 10 2024, 04:13 AM IST

ಐಪಿಎಲ್‌ಗೆ ಕಾಲಿಟ್ಟ ಮತ್ತೋರ್ವ ಕನ್ನಡಿಗ ವಿದ್ವತ್‌: ಪಾದಾರ್ಪಣೆಯಲ್ಲೇ ಮಿಂಚು
Share this Article
  • FB
  • TW
  • Linkdin
  • Email

ಸಾರಾಂಶ

ಕಾವೇರಪ್ಪ ಅವರು ಫಾಫ್‌ ಡು ಪ್ಲೆಸಿ ಹಾಗೂ ವಿಲ್‌ ಜ್ಯಾಕ್ಸ್‌ರನ್ನು ಪೆವಿಲಿಯನ್‌ಗೆ ಅಟ್ಟಿ ಗಮನ ಸೆಳೆದರು. ಚೊಚ್ಚಲ ಪಂದ್ಯದಲ್ಲೇ 25 ವರ್ಷದ ಕಾವೇರಪ್ಪ 4 ಓವರಲ್ಲಿ 36 ರನ್‌ಗೆ 2 ವಿಕೆಟ್‌ ಕಿತ್ತರು.

ಧರ್ಮಶಾಲಾ: ಕರ್ನಾಟಕದ ವೇಗದ ಬೌಲರ್‌ ವಿದ್ವತ್‌ ಕಾವೇರಪ್ಪ ಪಂಜಾಬ್‌ ಕಿಂಗ್ಸ್‌ ಪರ ಐಪಿಎಲ್‌ಗೆ ಪಾದಾರ್ಪಣೆ ಮಾಡಿದರು. ಅವರು ಗುರುವಾರ ಆರ್‌ಸಿಬಿ ವಿರುದ್ಧ ಪಂದ್ಯದ ಮೂಲಕ ಟೂರ್ನಿಗೆ ಕಾಲಿಟ್ಟರು. 

ಚೊಚ್ಚಲ ಪಂದ್ಯದಲ್ಲೇ 25 ವರ್ಷದ ಕಾವೇರಪ್ಪ 4 ಓವರಲ್ಲಿ 36 ರನ್‌ಗೆ 2 ವಿಕೆಟ್‌ ಕಿತ್ತರು. ಅವರು ಫಾಫ್‌ ಡು ಪ್ಲೆಸಿ ಹಾಗೂ ವಿಲ್‌ ಜ್ಯಾಕ್ಸ್‌ರನ್ನು ಪೆವಿಲಿಯನ್‌ಗೆ ಅಟ್ಟಿ ಗಮನ ಸೆಳೆದರು. ಅವರಿಗೆ ಮತ್ತಷ್ಟು ವಿಕೆಟ್‌ ಸಿಗುವ ಸಾಧ್ಯತೆಯಿತ್ತು. ಆದರೆ ತಂಡದ ಆಟಗಾರರು ಅವರ ಬೌಲಿಂಗ್‌ ವೇಳೆ 3 ಕ್ಯಾಚ್‌ ಕೈಚೆಲ್ಲಿದರು. ವಿರಾಟ್‌ ಕೊಹ್ಲಿಯ ಕ್ಯಾಚನ್ನು ರೀಲಿ ರೋಸೌ ಹಾಗೂ ಅಶುತೋಶ್‌ ಶರ್ಮಾ ಬಿಟ್ಟರು. ಬಳಿಕ ರಜತ್‌ ಪಾಟೀದಾರ್‌ ನೀಡಿದ್ದ ಕ್ಯಾಚ್‌ಅನ್ನು ಹರ್ಷಲ್‌ ಪಟೇಲ್‌ ಕೈಚೆಲ್ಲಿದರು.ವಿದ್ವತ್‌ ದೇಸಿ ಕ್ರಿಕೆಟ್‌ನಲ್ಲಿ ಕರ್ನಾಟಕ ಪರ 20 ಪ್ರಥಮ ದರ್ಜೆ, 18 ಲಿಸ್ಟ್‌ ‘ಎ’ ಹಾಗೂ 13 ಟಿ20 ಪಂದ್ಯಗಳನ್ನಾಡಿದ್ದಾರೆ.

ಮೇ 21ರಂದೇ ಬೂಮ್ರಾ, ರೋಹಿತ್‌ ಅಮೆರಿಕಕ್ಕೆ?

ನವದೆಹಲಿ: ಈ ಬಾರಿ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ ಪ್ಲೇ-ಆಫ್ ಪ್ರವೇಶಿಸದ ಹಿನ್ನೆಲೆಯಲ್ಲಿ ತಂಡದಲ್ಲಿರುವ ಭಾರತೀಯ ಆಟಗಾರರು ಮೇ 21ರಂದೇ ಟಿ20 ವಿಶ್ವಕಪ್‌ಗಾಗಿ ಅಮೆರಿಕಕ್ಕೆ ತೆರಳಲಿದ್ದಾರೆ ಎಂದು ವರದಿಯಾಗಿದೆ. ರೋಹಿತ್‌ ಶರ್ಮಾ, ಬೂಮ್ರಾ, ಸೂರ್ಯಕುಮಾರ್‌, ಹಾರ್ದಿಕ್‌ ಪಾಂಡ್ಯ ಮೊದಲ ಬ್ಯಾಚ್‌ನಲ್ಲಿ ಅಮೆರಿಕಕ್ಕೆ ತೆರಳಲಿದ್ದಾರೆ. ಪ್ಲೇ-ಆಫ್‌ಗೇರದ ಇತರ ತಂಡಗಳ ಆಟಗಾರರೂ ಇವರ ಜೊತೆ ಪ್ರಯಾಣಿಸುವ ನಿರೀಕ್ಷೆಯಿದೆ. ಪ್ಲೇ-ಆಫ್‌ಗೇರಿದ ತಂಡಗಳಲ್ಲಿರುವ ಆಟಗಾರರು ಐಪಿಎಲ್‌ ಬಳಿಕ ಅಮೆರಿಕ ವಿಮಾನವೇರಲಿದ್ದಾರೆ. ಜೂ.1ಕ್ಕೆ ವಿಶ್ವಕಪ್‌ ಆರಂಭಗೊಳ್ಳಲಿದೆ.