ಸಾರಾಂಶ
ಕೇಪ್‌ಟೌನ್ ಟೆಸ್ಟ್ ವೇಳೆ ಶ್ರೀರಾಮಭಕ್ತಿ ಪ್ರದರ್ಶಿಸಿದ ವಿರಾಟ್ ಕೊಹ್ಲಿ. ಕೊಹ್ಲಿಯ ‘ರಾಮಾವತಾರ’ ನೋಡಿ ಖುಷಿಪಟ್ಟ ಅಭಿಮಾನಿಗಳು. ಸಾಮಾಜಿಕ ತಾಣಗಳಲ್ಲಿ ವೈರಲ್ ಆದ ವಿಡಿಯೋ, ಫೋಟೋಸ್.
ಕೇಪ್‌ಟೌನ್: ದ.ಆಫ್ರಿಕಾ ವಿರುದ್ಧ 2ನೇ ಟೆಸ್ಟ್‌ನ ಮೊದಲ ದಿನದಾಟದ ವೇಳೆ ಭಾರತೀಯ ಕ್ರಿಕೆಟಿಗ ವಿರಾಟ್ ಕೊಹ್ಲಿ ಮೈದಾನದಲ್ಲಿ ಶ್ರೀರಾಮ ಭಕ್ತಿ ಪ್ರದರ್ಶಿಸಿದರು. ರಾಮ್ ಸಿಯಾ ರಾಮ್ ಎಂಬ ಹಾಡು ಹಾಕಿದಾಗ ಕೈಮುಗಿದ ಕೊಹ್ಲಿ, ಬಿಲ್ಲು ಬಾಣ ಹಿಡಿದ ರಾಮನಂತೆಯೂ ನಿಂತು ಗಮನ ಸೆಳೆದರು. ಆ ಸನ್ನಿವೇಶದ ಫೋಟೋ, ವಿಡಿಯೋಗಳು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿವೆ. ವಿರಾಟ್ ಕೊಹ್ಲಿಯ ರಾಮಭಕ್ತಿಗೆ ಅಭಿಮಾನಿಗಳಿಂದ ಭಾರಿ ಮೆಚ್ಚುಗೆ ಸಹ ವ್ಯಕ್ತವಾಗಿದೆ. ಟೆಸ್ಟ್ ರ್‍ಯಾಂಕಿಂಗ್: ಟಾಪ್ 10ಗೆ ಮರಳಿದ ಕೊಹ್ಲಿ
ದುಬೈ: ಭಾರತದ ತಾರಾ ಬ್ಯಾಟರ್ ವಿರಾಟ್ ಕೊಹ್ಲಿ ಐಸಿಸಿ ಟೆಸ್ಟ್ ಬ್ಯಾಟರ್‌ಗಳ ರ್‍ಯಾಂಕಿಂಗ್ ಪಟ್ಟಿಯಲ್ಲಿ 4 ಸ್ಥಾನ ಏರಿಕೆ ಕಂಡು 9ನೇ ಸ್ಥಾನ ಪಡೆದಿದ್ದಾರೆ. 2022ರಲ್ಲಿ ಅಗ್ರ-10ರಿಂದ ಹೊರಬಿದ್ದಿದ್ದ ವಿರಾಟ್, ದ.ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಕ್ರಮವಾಗಿ 38 ಹಾಗೂ 76 ರನ್ ಗಳಿಸಿದ ಪರಿಣಾಮ, ಮತ್ತೆ ಟಾಪ್ 10ಗೆ ಕಾಲಿಟ್ಟಿದ್ದಾರೆ. ರೋಹಿತ್ ಶರ್ಮಾ 14ನೇ ಸ್ಥಾನಕ್ಕೆ ಕುಸಿದರೆ, ಕೆ.ಎಲ್.ರಾಹುಲ್ 11 ಸ್ಥಾನ ಏರಿಕೆ ಕಂಡು 51ನೇ ಸ್ಥಾನ ಪಡೆದಿದ್ದಾರೆ. ಬೌಲರ್‌ಗಳ ಪಟ್ಟಿಯಲ್ಲಿ ಆರ್.ಅಶ್ವಿನ್ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ.