ಸಾರಾಂಶ
ನವದೆಹಲಿ: ಕಿಂಗ್ ಖ್ಯಾತಿಯ ವಿರಾಟ್ ಕೊಹ್ಲಿ ಮತ್ತೆ ಆರ್‌ಸಿಬಿ ನಾಯಕನಾಗಿ ನೇಮಕಗೊಳ್ಳುವ ಸಾಧ್ಯತೆಯಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಕೊಹ್ಲಿ 2013ರಿಂದ 2021ರ ವರೆಗೂ ಆರ್‌ಸಿಬಿ ನಾಯಕತ್ವ ವಹಿಸಿದ್ದರು. ಈ ಅವಧಿಯಲ್ಲಿ ಆರ್‌ಸಿಬಿ ನಾಲ್ಕು ಬಾರಿ ಪ್ಲೇ-ಆಫ್ ಪ್ರವೇಶಿಸಿದ್ದರೆ, 2016ರಲ್ಲಿ ರನ್ನರ್-ಅಪ್ ಆಗಿತ್ತು. ಆದರೆ 2021ರಲ್ಲಿ ಕೊಹ್ಲಿ ನಾಯಕ ಸ್ಥಾನ ತೊರೆದಿದ್ದರು. ಬಳಿಕ ದ.ಆಫ್ರಿಕಾದ ಫಾಫ್ ಡು ಪ್ಲೆಸಿ ತಂಡದ ನಾಯಕರಾಗಿದ್ದಾರೆ. ಆದರೆ ಈ ಬಾರಿ ಹರಾಜಿಗೂ ಮುನ್ನ ಡು ಪ್ಲೆಸಿಯನ್ನು ಆರ್‌ಸಿಬಿ ಫ್ರಾಂಚೈಸಿ ಕೈಬಿಡಲಿದ್ದು, ಮತ್ತೆ ಕೊಹ್ಲಿಯನ್ನು ನಾಯಕರನ್ನಾಗಿ ನೇಮಿಸಲಿದೆ ಎಂದು ಹೇಳಲಾಗುತ್ತಿದೆ.
ಶ್ರೇಯಸ್, ಸ್ಟಾರ್ಕ್, ರಸೆಲ್ ರೀಟೈನ್ ಇಲ್ಲ?ಮಹತ್ವದ ಬೆಳವಣಿಗೆಯೊಂದರಲ್ಲಿ ಹಾಲಿ ಚಾಂಪಿಯನ್ ಕೋಲ್ಕತಾ ತಂಡ ಈ ಬಾರಿ ತನ್ನ ಪ್ರಮುಖ ಆಟಗಾರರನ್ನೇ ಕೈಬಿಡಲಿದೆ ಎಂದು ಹೇಳಲಾಗುತ್ತಿದೆ. ನಾಯಕ ಶ್ರೇಯಸ್ ಅಯ್ಯರ್, ಐಪಿಎಲ್ ಹರಾಜಿನ ದುಬಾರಿ ಆಟಗಾರ ಮಿಚೆಲ್ ಸ್ಟಾರ್ಕ್, ತಾರಾ ಆಲ್ರೌಂಡರ್ ಆ್ಯಂಡ್ರೆ ರಸೆಲ್‌ರನ್ನು ತಂಡ ಕೈ ಬಿಡಲಿದೆ ಎಂದು ವರದಿಯಾಗಿದೆ. ಸುನಿಲ್ ನರೈನ್, ರಿಂಕು ಸಿಂಗ್, ವರುಣ್ ಚಕ್ರವರ್ತಿ, ಹರ್ಷಿತ್ ರಾಣಾ ಅವರನ್ನು ರೀಟೈನ್ ಮಾಡಿಕೊಳ್ಳಲಿದೆ ಎಂದು ತಿಳಿದುಬಂದಿದೆ.06: ಪ್ರತಿ ಫ್ರಾಂಚೈಸಿ ರೀಟೈನ್ ಮಾಡಬಹುದಾದ ಆಟಗಾರರ ಸಂಖ್ಯೆ18: ಮೊದಲ ರೀಟೈನ್ ಆಟಗಾರನಿಗೆ ಸಿಗುವ ಮೊತ್ತ ₹18 ಕೋಟಿ.75: ಫ್ರಾಂಚೈಸಿಗಳು ರೀಟೆನ್ಶನ್‌ಗೆ ಬಳಸಬಹುದಾದ ಮೊತ್ತ ₹75 ಕೋಟಿ.05: ಗರಿಷ್ಠ 5 ಅಂತಾರಾಷ್ಟ್ರೀಯ ಆಟಗಾರರ ರೀಟೈನ್‌ಗೆ ತಂಡಗಳಿಗೆ ಅವಕಾಶ.02: ಪ್ರತಿ ತಂಡ ಇಬ್ಬರು ಅನ್‌ಕ್ಯಾಪ್ಡ್ ಆಟಗಾರರನ್ನು ತಂಡದಲ್ಲೇ ಉಳಿಸಿಕೊಳ್ಳಬಹುದು.