ಟಿ20 ವಿಶ್ವಕಪ್‌ನಲ್ಲಿ ಕೊಹ್ಲಿ ಆರಂಭಿಕನಾಗಿ ಆಡಬೇಕು ಎಂದ ಭಾರತದ ಮಾಜಿ ಕ್ಯಾಪ್ಟನ್‌

| Published : May 10 2024, 11:46 PM IST

ಟಿ20 ವಿಶ್ವಕಪ್‌ನಲ್ಲಿ ಕೊಹ್ಲಿ ಆರಂಭಿಕನಾಗಿ ಆಡಬೇಕು ಎಂದ ಭಾರತದ ಮಾಜಿ ಕ್ಯಾಪ್ಟನ್‌
Share this Article
  • FB
  • TW
  • Linkdin
  • Email

ಸಾರಾಂಶ

ಟಿ20 ವಿಶ್ವಕಪ್‌ಗೆ ಆಯ್ಕೆಯಾಗಿರುವ ಭಾರತ ತಂಡ, 17 ವರ್ಷಗಳ ನಂತರ ಟ್ರೋಫಿ ಗೆಲ್ಲುವ ಸಾಮರ್ಥ್ಯ ಹೊಂದಿದೆ ಎಂದು ಗಂಗೂಲಿ ವಿಶ್ವಾಸ ವ್ಯಕ್ತಪಡಿಸಿದರು.

ಬೆಂಗಳೂರು: ವಿರಾಟ್‌ ಕೊಹ್ಲಿ ಟಿ20 ವಿಶ್ವಕಪ್‌ನಲ್ಲಿ ಆರಂಭಿಕನಾಗಿ ಆಡಬೇಕು ಎಂದು ಭಾರತದ ಮಾಜಿ ನಾಯಕ ಸೌರವ್‌ ಗಂಗೂಲಿ ಶುಕ್ರವಾರ ಹೇಳಿದರು. ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೊಹ್ಲಿ ಈ ಐಪಿಎಲ್‌ನಲ್ಲಿ 12 ಪಂದ್ಯಗಳಲ್ಲಿ 70.44ರ ಸರಾಸರಿ, 153.51 ಸ್ಟ್ರೈಕ್‌ರೇಟ್‌ನಲ್ಲಿ 634 ರನ್‌ ಗಳಿಸಿದ್ದಾರೆ. ಪಂಜಾಬ್‌ ವಿರುದ್ಧ ಕೊಹ್ಲಿ ಆಟ ಅಸಾಧಾರಣವಾಗಿತ್ತು. ಅವರನ್ನು ಟಿ20 ವಿಶ್ವಕಪ್‌ನಲ್ಲಿ ಆರಂಭಿಕರಾಗಿ ಆಡಿಸಬೇಕು ಎಂದಿದ್ದಾರೆ. ಅಲ್ಲದೆ, ಟಿ20 ವಿಶ್ವಕಪ್‌ಗೆ ಆಯ್ಕೆಯಾಗಿರುವ ಭಾರತ ತಂಡ, 17 ವರ್ಷಗಳ ನಂತರ ಟ್ರೋಫಿ ಗೆಲ್ಲುವ ಸಾಮರ್ಥ್ಯ ಹೊಂದಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಟಿ20 ವಿಶ್ವಕಪ್‌ಗೆ ಕೊಕ್‌: ಕ್ರಿಕೆಟ್‌ಗೆ ಮನ್ರೊ ಗುಡ್‌ಬೈ

ಕ್ರೈಸ್ಟ್‌ಚರ್ಚ್‌: ಮುಂದಿನ ತಿಂಗಳು ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್‌ಗೆ ಆಯ್ಕೆ ಮಾಡದ್ದಕ್ಕೆ ಬೇಸರಗೊಂಡು ನ್ಯೂಜಿಲೆಂಡ್‌ನ ಸ್ಫೋಟಕ ಬ್ಯಾಟರ್‌ ಕಾಲಿನ್‌ ಮನ್ರೊ ಅಂ.ರಾ. ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಮನ್ರೊ 1 ಟೆಸ್ಟ್‌, 57 ಏಕದಿನ ಹಾಗೂ 65 ಅಂ.ರಾ. ಟಿ20 ಪಂದ್ಯಗಳನ್ನು ಆಡಿದ್ದು, ಒಟ್ಟಾರೆ 3010 ರನ್‌ ಗಳಿಸಿದ್ದಾರೆ. ಮನ್ರೊ 2020ರಲ್ಲಿ ಭಾರತ ವಿರುದ್ಧ ಕೊನೆಯ ಅಂ.ರಾ. ಟಿ20 ಪಂದ್ಯವನ್ನಾಡಿದ್ದರು. 2016ರಲ್ಲಿ ಮನ್ರೊ ಲಂಕಾ ವಿರುದ್ಧ 14 ಎಸೆತದಲ್ಲಿ 50 ರನ್‌ ಸಿಡಿಸಿದ್ದರು. ಅದು ಈಗಲೂ ಕಿವೀಸ್‌ ಪರ ಟಿ20ಯಲ್ಲಿ ವೇಗದ ಅರ್ಧಶತಕದ ದಾಖಲೆ ಎನಿಸಿದೆ.