ಡಬ್ಲ್ಯುಪಿಎಲ್‌ನಿಂದ ರಾಜ್ಯದ ವೃಂದಾ ದಿನೇಶ್‌ ಔಟ್‌

| Published : Mar 02 2024, 01:51 AM IST

ಡಬ್ಲ್ಯುಪಿಎಲ್‌ನಿಂದ ರಾಜ್ಯದ ವೃಂದಾ ದಿನೇಶ್‌ ಔಟ್‌
Share this Article
  • FB
  • TW
  • Linkdin
  • Email

ಸಾರಾಂಶ

ಆಟಗಾರ್ತಿಯರ ಹರಾಜಿನಲ್ಲಿ 1.3 ಕೋಟಿ ರು.ಗೆ ಯು.ಪಿ.ವಾರಿಯರ್ಸ್‌ ತಂಡಕ್ಕೆ ಮಾರಾಟವಾಗಿದ್ದ ಕರ್ನಾಟಕದ ವೃಂದಾ ದಿನೇಶ್‌ ಪ್ರಸಕ್ತ ಆವೃತ್ತಿಯ ಡಬ್ಲ್ಯುಪಿಎಲ್‌ನಿಂದ ಹೊರಬಿದ್ದಿದ್ದಾರೆ.

ಬೆಂಗಳೂರು: ಆಟಗಾರ್ತಿಯರ ಹರಾಜಿನಲ್ಲಿ 1.3 ಕೋಟಿ ರು.ಗೆ ಯು.ಪಿ.ವಾರಿಯರ್ಸ್‌ ತಂಡಕ್ಕೆ ಮಾರಾಟವಾಗಿದ್ದ ಕರ್ನಾಟಕದ ವೃಂದಾ ದಿನೇಶ್‌, ಭುಜದ ಗಾಯದ ಕಾರಣ 2ನೇ ಆವೃತ್ತಿ ಮಹಿಳಾ ಪ್ರೀಮಿಯರ್‌ ಲೀಗ್‌ನಿಂದ ಹೊರಬಿದ್ದಿದ್ದಾರೆ. ಬುಧವಾರ ಮುಂಬೈ ವಿರುದ್ಧದ ಪಂದ್ಯದಲ್ಲಿ ಫೀಲ್ಡ್‌ ಮಾಡುವಾಗ ವೃಂದಾ ಗಾಯಗೊಂಡಿದ್ದರು. ಐಪಿಎಲ್‌: ಲಖನೌಗೆ ಲ್ಯಾನ್ಸ್‌ ಕ್ಲೂಸ್ನರ್‌ ಕೋಚ್‌

ಲಖನೌ: ಮುಂಬರುವ ಐಪಿಎಲ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡದ ಮಾಜಿ ಆಲ್ರೌಂಡರ್‌ ಲ್ಯಾನ್ಸ್‌ ಕ್ಲೂಸ್ನರ್‌, ಲಖನೌ ಸೂಪರ್‌ ಜೈಂಟ್ಸ್‌ ತಂಡದ ಸಹಾಯಕ ಕೋಚ್‌ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಪ್ರಧಾನ ಕೋಚ್‌ ಜಸ್ಟಿನ್‌ ಲ್ಯಾಂಗರ್‌ ಜೊತೆ ಕ್ಲೂಸ್ನರ್‌ ಕಾರ್ಯನಿರ್ವಹಿಸಲಿದ್ದಾರೆ. ದ.ಆಫ್ರಿಕಾ ಟಿ20 ಲೀಗ್‌ನಲ್ಲಿ ಲಖನೌ ಫ್ರಾಂಚೈಸಿಯ ಡರ್ಬನ್‌ ಸೂಪರ್‌ ಜೈಂಟ್ಸ್‌ ತಂಡಕ್ಕೆ ಕ್ಲೂಸ್ನರ್‌ ಪ್ರಧಾನ ಕೋಚ್‌ ಆಗಿದ್ದಾರೆ.