ಸಣ್ಣ ವಯಸ್ಸಲ್ಲೇ ಎಂಥಾ ಶ್ರೇಷ್ಠ ಸಾಧನೆ: ವೈಭವ್‌ ಬಗ್ಗೆ ಮೋದಿ

| N/A | Published : May 05 2025, 11:37 AM IST

Vaibhav Suryavanshi (Photo: @ipl/X)

ಸಾರಾಂಶ

 ಶತಕ ಸಿಡಿಸಿ ದೇಶದ ಗಮನ ಸೆಳೆದಿರುವ 14 ವರ್ಷದ ಬಾಲಕ ವೈಭವ್‌ ಸೂರ್ಯವಂಶಿಯನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.

 ಪಟನಾ: ಐಪಿಎಲ್‌ನಲ್ಲಿ ಗುಜರಾತ್‌ ವಿರುದ್ಧ ಪಂದ್ಯದಲ್ಲಿ ಶತಕ ಸಿಡಿಸಿ ದೇಶದ ಗಮನ ಸೆಳೆದಿರುವ 14 ವರ್ಷದ ಬಾಲಕ, ರಾಜಸ್ಥಾನ ರಾಯಲ್ಸ್ ತಂಡದ ಆಟಗಾರ ವೈಭವ್‌ ಸೂರ್ಯವಂಶಿಯನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.

ಬಿಹಾರದಲ್ಲಿ ನಡೆದ ಖೇಲೋ ಇಂಡಿಯಾ ಉದ್ಘಾಟನೆಯ ಸಂದರ್ಭದಲ್ಲಿ ವೈಭವ್ ಹೆಸರು ಉಲ್ಲೇಖಿಸಿದ ಪ್ರಧಾನಿ ‘ಐಪಿಎಲ್‌ನಲ್ಲಿ ಬಿಹಾರದ ಹುಡುಗ ವೈಭವ್‌ ಸೂರ್ಯವಂಶಿ ಅವರ ಅದ್ಭುತ ಪ್ರದರ್ಶನವನ್ನು ನಾನು ನೋಡಿದ್ದೇನೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಎಷ್ಟು ದೊಡ್ಡ ಸಾಧನೆ ಮಾಡಿದ್ದಾರೆ. ವೈಭವ್ ಅವರ ಪ್ರದರ್ಶನದ ಹಿಂದೆ ಸಾಕಷ್ಟು ಪರಿಶ್ರಮವಿದೆ’ ಎಂದಿದ್ದಾರೆ.