ಬೆಂಗಳೂರಿನ ಆಲೂರು ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಕಳೆದೊಂದು ವಾರದಿಂದ ನಡೆಯುತ್ತಿದ್ದ ಟೂರ್ನಿ. ಬೆಂಗಳೂರು, ಚೆನ್ನೈ, ಚಂಡೀಗಢ, ಮುಂಬೈ, ಗ್ವಾಲಿಯರ್‌ ಹಾಗೂ ಇಂದೋರ್‌ ಮೂಲದ ತಂಡಗಳು ಭಾಗಿ.

 ಬೆಂಗಳೂರು : 3ನೇ ಆವೃತ್ತಿಯ ಎಬಿಲಿಟಿ ಪ್ರೀಮಿಯರ್‌ ಲೀಗ್‌ (ಎಪಿಎಲ್‌) ವೀಲ್‌ಚೇರ್‌ ಟಿ20 ಕ್ರಿಕೆಟ್‌ ಟೂರ್ನಿಯಲ್ಲಿ ಚೆನ್ನೈ ಲೆಜೆಂಡ್ಸ್‌ ತಂಡವು ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಬೆಂಗಳೂರಿನ ಆಲೂರು ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಕಳೆದೊಂದು ವಾರದಿಂದ ನಡೆದ ಟೂರ್ನಿಯ ಫೈನಲ್‌ ಸೋಮವಾರ ನಡೆಯಿತು.

ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಬೆಂಗಳೂರು ಈಗಲ್ಸ್‌ ತಂಡದ ವಿರುದ್ಧ 53 ರನ್‌ಗಳಿಂದ ಗೆದ್ದ ಚೆನ್ನೈ, ಟ್ರೋಫಿಗೆ ಮುತ್ತಿಕ್ಕಿತು. ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಚೆನ್ನೈ 20 ಓವರಲ್ಲಿ 203 ರನ್‌ ಕಲೆಹಾಕಿತು. ಸುರೇಶ್‌ ಸೆಲ್ವಂ 43 ಎಸೆತದಲ್ಲಿ 111 ರನ್‌ ಚಚ್ಚಿದರು. ಬೆಂಗಳೂರು 18.2 ಓವರ್‌ಗಳಲ್ಲಿ 150 ರನ್‌ಗೆ ಆಲೌಟ್‌ ಆಯಿತು.

ಟೂರ್ನಿಯಲ್ಲಿ 6 ತಂಡ ಭಾಗಿ ಟೂರ್ನಿಯಲ್ಲಿ ಬೆಂಗಳೂರು, ಚೆನ್ನೈ, ಚಂಡೀಗಢ, ಮುಂಬೈ, ಗ್ವಾಲಿಯರ್‌ ಹಾಗೂ ಇಂದೋರ್‌ ಮೂಲದ ತಂಡಗಳು ಪಾಲ್ಗೊಂಡಿದ್ದವು. ಈ ಹಿಂದಿನ 2 ಆವೃತ್ತಿಗಳನ್ನು ಕರ್ನಾಟಕ ವೀಲ್‌ಚೇರ್‌ ಚಾಂಪಿಯನ್‌ಶಿಪ್‌ ಎಂದು ನಡೆಸಲಾಗಿತ್ತು. ಈ ವರ್ಷ ಎಬಿಲಿಟಿ ಪ್ರೀಮಿಯರ್‌ ಲೀಗ್‌ ಎಂಬ ಹೆಸರಿನಡಿ ದೇಶದ ವಿವಿಧ ನಗರಗಳಿಂದ ತಂಡಗಳನ್ನು ಆಹ್ವಾನಿಸಿ ಟೂರ್ನಿ ಆಯೋಜಿಸಲಾಗಿತ್ತು.