ಸಾರಾಂಶ
ಈ ಬಾರಿ ಮಹಿಳಾ ವಿಶ್ವಕಪ್‌ನಲ್ಲಿ ಸತತ 2 ಸೋಲು ಕಂಡಿದ್ದ ನ್ಯೂಜಿಲೆಂಡ್ ತಂಡ ಮೊದಲ ಗೆಲುವು ದಾಖಲಿಸಿದೆ. ಶುಕ್ರವಾರ ಬಾಂಗ್ಲಾದೇಶ ವಿರುದ್ಧ ಪಂದ್ಯದಲ್ಲಿ ಕಿವೀಸ್ 100 ರನ್ ಜಯಗಳಿಸಿತು. ಬಾಂಗ್ಲಾ 3 ಪಂದ್ಯಗಳಲ್ಲಿ 2ನೇ ಸೋಲು ಕಂಡಿತು.
ಗುವಾಹಟಿ: ಈ ಬಾರಿ ಮಹಿಳಾ ವಿಶ್ವಕಪ್‌ನಲ್ಲಿ ಸತತ 2 ಸೋಲು ಕಂಡಿದ್ದ ನ್ಯೂಜಿಲೆಂಡ್ ತಂಡ ಮೊದಲ ಗೆಲುವು ದಾಖಲಿಸಿದೆ. ಶುಕ್ರವಾರ ಬಾಂಗ್ಲಾದೇಶ ವಿರುದ್ಧ ಪಂದ್ಯದಲ್ಲಿ ಕಿವೀಸ್ 100 ರನ್ ಜಯಗಳಿಸಿತು. ಬಾಂಗ್ಲಾ 3 ಪಂದ್ಯಗಳಲ್ಲಿ 2ನೇ ಸೋಲು ಕಂಡಿತು.
ಮೊದಲು ಬ್ಯಾಟ್ ಮಾಡಿದ ಕಿವೀಸ್ 9 ವಿಕೆಟ್‌ಗೆ 227 ರನ್ ಕಲೆಹಾಕಿತು. ನಾಯಕಿ ಸೋಫಿ ಡಿವೈನ್ 63, ಬ್ರೂಕ್ ಹಾಲಿಡೇ 69 ರನ್ ಸಿಡಿಸಿದರು. ಬಾಂಗ್ಲಾ ಪರ ರಬೆಯಾ ಖಾನ್ 3 ವಿಕೆಟ್ ಪಡೆದರು. ಸ್ಪರ್ಧಾತ್ಮಕ ಗುರಿ ಪಡೆದ ಬಾಂಗ್ಲಾ ತೀವ್ರ ಬ್ಯಾಟಿಂಗ್ ವೈಫಲ್ಯಕ್ಕೆ ತುತ್ತಾಗಿ, 39.5 ಓವರ್‌ಗಳಲ್ಲಿ 127 ರನ್‌ಗೆ ಆಲೌಟಾಯಿತು. ಫಹಿಮಾ ಖಾತೂನ್ 34, ರಬೆಯಾ 25 ರನ್ ಗಳಿಸಿದರು. ಕಿವೀಸ್ ಪರ ಜೆಸ್ ಕೇರ್, ಲೀ ತಹುಹು ತಲಾ 3 ವಿಕೆಟ್ ಕಿತ್ತರು.
ಇಂದು ಇಂಗ್ಲೆಂಡ್ vs ಶ್ರೀಲಂಕಾ
ಕೊಲಂಬೊ: ಶನಿವಾರದ ಪಂದ್ಯದಲ್ಲಿ ಮಾಜಿ ಚಾಂಪಿಯನ್ ಇಂಗ್ಲೆಂಡ್‌ಗೆ ಶ್ರೀಲಂಕಾ ಸವಾಲು ಎದುರಾಗಲಿದೆ. ಇಂಗ್ಲೆಂಡ್ ಸತತ 2ರಲ್ಲಿ ಗೆದ್ದಿದ್ದು, ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದೆ. ಆರಂಭಿಕ ಎರಡೂ ಪಂದ್ಯ ಸೋತಿರುವ ಲಂಕಾ, ಗೆಲುವಿನ ಖಾತೆ ತೆರೆಯುವ ವಿಶ್ವಾಸದಲ್ಲಿದೆ.