ಸಾರಾಂಶ
ನೈರೋಬಿ: ಗಾಂಬಿಯಾ ವಿರುದ್ಧ ಐಸಿಸಿ ಟಿ20 ವಿಶ್ವಕಪ್‌ನ ಆಫ್ರಿಕಾ ಖಂಡದ ಅರ್ಹತಾ ಸುತ್ತಿನ ಪಂದ್ಯದಲ್ಲಿ ಜಿಂಬಾಬ್ವೆ ವಿಶ್ವದಾಖಲೆಯ 344 ರನ್ ಕಲೆಹಾಕಿದೆ. ಇದು ಅಂತಾರಾಷ್ಟ್ರೀಯ ಟಿ20ಯಲ್ಲೇ ಗರಿಷ್ಠ ರನ್. ಕಳೆದ ವರ್ಷ ಏಷ್ಯನ್ ಗೇಮ್ಸ್‌ನಲ್ಲಿ ಮಂಗೋಲಿಯಾ ವಿರುದ್ಧ ನೇಪಾಳ 314 ರನ್ ಗಳಿಸಿದ್ದು ಈವರೆಗಿನ ದಾಖಲೆ.
ಬುಧವಾರದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಜಿಂಬಾಬ್ವೆ 20 ಓವರಲ್ಲಿ 4 ವಿಕೆಟ್‌ಗೆ 344 ರನ್ ಗಳಿಸಿತು. ನಾಯಕ ಸಿಕಂದರ್ ರಜಾ 43 ಎಸೆತಗಳಲ್ಲಿ 7 ಬೌಂಡರಿ, 15 ಸಿಕ್ಸರ್‌ನೊಂದಿಗೆ ಔಟಾಗದೆ 133 ರನ್ ಸಿಡಿಸಿದರು. ಜಿಂಬಾಬ್ವೆ ಇನ್ನಿಂಗ್ಸ್‌ನಲ್ಲಿ 27 ಸಿಕ್ಸರ್, 30 ಬೌಂಡರಿ ದಾಖಲಾಯಿತು. ಗಾಂಬಿಯಾದ ಮೂಸಾ 93 ರನ್ ಬಿಟ್ಟುಕೊಟ್ಟರು. ಇದು ಟಿ20ಯಲ್ಲಿ ಗರಿಷ್ಠ.ಬೃಹತ್ ಗುರಿ ಬೆನ್ನತ್ತಿದ ಗಾಂಬಿಯಾ 14.4 ಓವರ್‌ಗಳಲ್ಲಿ ಕೇವಲ 54ಕ್ಕೆ ಆಲೌಟಾಯಿತು. ಜಿಂಬಾಬ್ವೆ 290 ರನ್ ಗೆಲುವು ಸಾಧಿಸಿತು. ಇದು ಅಂ.ರಾ. ಟಿ20ಯಲ್ಲಿ ತಂಡವೊಂದರ ಗರಿಷ್ಠ ರನ್ ಅಂತರದ ಗೆಲುವು.
93 ರನ್: ಗಾಂಬಿಯಾದ ಮೂಸಾ 93 ರನ್ ಬಿಟ್ಟುಕೊಟ್ಟರು. 2019ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಶ್ರೀಲಂಕಾದ ರಜಿತಾ 75 ರನ್ ನೀಡಿದ್ದು ಈ ವರೆಗಿನ ದಾಖಲೆ.
290 ರನ್: ಜಿಂಬಾಬ್ವೆ 290 ರನ್ ಅಂತರದಲ್ಲಿ ಗೆದ್ದಿದ್ದು ದಾಖಲೆ. 2023ರಲ್ಲಿ ಮಂಗೋಲಿಯಾ ವಿರುದ್ಧ ನೇಪಾಳ 273 ರನ್‌ಗಳಿಂದ ಜಯಗಳಿಸಿತ್ತು.
33 ಎಸೆತ: ಸಿಕಂದರ್ 33 ಎಸೆತದಲ್ಲಿ ಶತಕ ಬಾರಿಸಿದರು. ಇದು ಅಂ.ರಾ. ಟಿ2ಯಲ್ಲಿ ಜಂಟಿ 2ನೇ ವೇಗದ ಶತಕ. ಎಸ್ಟೋನಿಯಾದ ಸಾಹಿಲ್ 27 ಎಸೆತದಲ್ಲಿ ಶತಕ ಗಳಿಸಿದ್ದಾರೆ.ಅಂ.ರಾ. ಟಿ20 ಗರಿಷ್ಠ ರನ್‌ತಂಡರನ್‌ಎದುರಾಳಿವರ್ಷಜಿಂಬಾಬ್ವೆ344/4ಗಾಂಬಿಯಾ2024ನೇಪಾಳ314/3ಮಂಗೋಲಿಯಾ2023ಭಾರತ297/6ಬಾಂಗ್ಲಾದೇಶ2024ಜಿಂಬಾಬ್ವೆ286/4ಸೈಚೆಲ್ಲೆಸ್2024ಆಫ್ಘನ್278/3ಐರ್ಲೆಂಡ್2019