ಸಾರಾಂಶ
ದುಬೈ: ನ್ಯೂಜಿಲೆಂಡ್ ವಿರುದ್ಧ ಸರಣಿ ಆರಂಭಕ್ಕೂ ಮುನ್ನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ರೇಸ್‌ನಲ್ಲಿ ಭಾರತ ಮುಂಚೂಣಿಯಲ್ಲಿತ್ತು. ಮತ್ತೊಂದೆಡೆ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಸತತ 2ನೇ ಬಾರಿಯೂ ಫೈನಲ್‌ಗೇರಲಿದೆ ಎಂದೇ ವಿಶ್ಲೇಷಿಸಲಾಗುತ್ತಿತ್ತು.
ಆದರೆ ಕಿವೀಸ್ ವಿರುದ್ಧ ಮೊದಲೆರಡು ಪಂದ್ಯಗಳಲ್ಲಿ ಭಾರತ ಅನುಭವಿಸಿದ ಸೋಲು, ಸದ್ಯ 2023-25ರ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ರೇಸ್‌ಗೆ ರೋಚಕ ಟ್ವಿಸ್ಟ್ ನೀಡಿದೆ. ಕೆಲವೇ ದಿನಗಳ ಅಂತರದಲ್ಲಿ ಫೈನಲ್ ರೇಸ್‌ನ ಪೈಪೋಟಿ ಹೆಚ್ಚಾಗಿದೆ.ಈ ಆವೃತ್ತಿಯ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಇನ್ನು ಕೇವಲ 20 ಪಂದ್ಯಗಳು ಬಾಕಿ ಇವೆ. ಕಳೆದ ಬಾರಿ ಫೈನಲಿಸ್ಟ್ ತಂಡಗಳಾದ ಭಾರತ, ಆಸ್ಟ್ರೇಲಿಯಾ, 2019-21ರ ಚಾಂಪಿಯನ್ ನ್ಯೂಜಿಲೆಂಡ್ ಜೊತೆಗೆ ಶ್ರೀಲಂಕಾ ಹಾಗೂ ದಕ್ಷಿಣ ಆಫ್ರಿಕಾ ಕೂಡಾ ಈ ಬಾರಿ ರೇಸ್‌ನಲ್ಲಿವೆ.
ಇಂಗ್ಲೆಂಡ್, ಪಾಕಿಸ್ತಾನ, ಬಾಂಗ್ಲಾದೇಶ, ವೆಸ್ಟ್‌ಇಂಡೀಸ್ ಈಗಾಗಲೇ ರೇಸ್‌ನಿಂದ ಹೊರಬಿದ್ದಿವೆ.ಸದ್ಯ 5 ತಂಡಗಳಷ್ಟೇ ರೇಸ್‌ನಲ್ಲಿದ್ದರೂ ಯಾವ ತಂಡಕ್ಕೂ ಫೈನಲ್ ಹಾದಿ ಅಷ್ಟು ಸುಲಭವಿಲ್ಲ. ಭಾರತ 2 ಪಂದ್ಯಗಳ ಸೋಲಿನ ಬಳಿಕ ಸದ್ಯ ಶೇ.62.82ಕ್ಕೆ ಕುಸಿದಿದೆ. ಇದರ ಹೊರತಾಗಿಯೂ ಅಗ್ರಸ್ಥಾನದಲ್ಲೇ ಮುಂದುವರಿದಿದೆ. 2ನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾ(ಶೇ.62.50)ಕ್ಕಿಂತ ಕೇವಲ 0.32 ಅಂತರದಲ್ಲಿ ಭಾರತ ಮುಂದಿದೆ.
ಭಾರತ ಈ ವರೆಗೂ 13 ಪಂದ್ಯಗಳನ್ನಾಡಿದ್ದು, 8 ಗೆಲುವು, 4 ಸೋಲು ಹಾಗೂ 1 ಡ್ರಾ ಸಾಧಿಸಿದೆ. ತಂಡಕ್ಕೆ ಇನ್ನು ಒಟ್ಟು 6 ಟೆಸ್ಟ್(ನ್ಯೂಜಿಲೆಂಡ್ ವಿರುದ್ಧ 1, ಆಸ್ಟ್ರೇಲಿಯಾ ವಿರುದ್ಧ 5) ಪಂದ್ಯಗಳು ಬಾಕಿಯಿದ್ದು, ಫೈನಲ್‌ಗೇರಬೇಕಿದ್ದರೆ ಕನಿಷ್ಠ 4ರಲ್ಲಿ ಗೆಲುವು ಸಾಧಿಸಬೇಕಿದೆ. ಕಿವೀಸ್ ವಿರುದ್ಧ ಒಂದು ಪಂದ್ಯ ಗೆದ್ದು, ಆಸೀಸ್ ಸರಣಿಯಲ್ಲಿ 3-2ರಲ್ಲಿ ಜಯಿಸಿದರೆ ಭಾರತದ ಗೆಲುವಿನ ಪ್ರತಿಶತ ಶೇ.64.04 ಆಗಲಿದ್ದು, ಅಗ್ರ-2ರಲ್ಲಿ ಸ್ಥಾನ ಗಿಟ್ಟಿಸಿ ಫೈನಲ್‌ಗೇರಲಿದೆ.
ಒಂದು ವೇಳೆ ಕಿವೀಸ್ ವಿರುದ್ಧ ಸೋತರೆ, ಆಗ ಆಸೀಸ್ ವಿರುದ್ಧ 4 ಪಂದ್ಯಗಳಲ್ಲಿ ಗೆದ್ದು, ಮತ್ತೊಂದು ಪಂದ್ಯ ಡ್ರಾ ಸಾಧಿಸಬೇಕಾದ ಒತ್ತಡಕ್ಕೆ ಭಾರತ ಸಿಲುಕಲಿದೆ.ಇನ್ನು, ನ್ಯೂಜಿಲೆಂಡ್ ವಿರುದ್ಧ ತವರಿನ ಸರಣಿ ಗೆದ್ದಿರುವ ಶ್ರೀಲಂಕಾ(ಶೇ.55.56) ಸದ್ಯ 3ನೇ ಸ್ಥಾನದಲ್ಲಿದ್ದರೆ, ಭಾರತ ವಿರುದ್ಧ ಸರಣಿ ಗೆಲುವಿನ ಬಳಿಕ ನ್ಯೂಜಿಲೆಂಡ್(ಶೇ.50.00) 4ನೇ ಸ್ಥಾನಕ್ಕೇರಿದೆ.
ದಕ್ಷಿಣ ಆಫ್ರಿಕಾ (ಶೇ.47.62) ರೇಸ್‌ನಲ್ಲಿರುವ ಮತ್ತೊಂದು ತಂಡ. ಉಳಿದಂತೆ ಇಂಗ್ಲೆಂಡ್ (ಶೇ.40.79), ಪಾಕಿಸ್ತಾನ (ಶೇ.33.33), ಬಾಂಗ್ಲಾದೇಶ (ಶೇ.30.56) ಹಾಗೂ ವೆಸ್ಟ್‌ಇಂಡೀಸ್ (ಶೇ.18.5) ಇನ್ನುಳಿದ ಎಲ್ಲಾ ಪಂದ್ಯಗಳಲ್ಲಿ ಗೆದ್ದರೂ ಫೈನಲ್‌ಗೇರಲು ಸಾಧ್ಯವಿಲ್ಲ.ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಾದಿ ತಂಡ ಅಂಕ(ಶೇಕಡಾ) ಗೆಲ್ಲಬೇಕಿರುವ ಪಂದ್ಯಉಳಿದಿರುವ ಪಂದ್ಯ
ಭಾರತ62.824/6(ಕಿವೀಸ್ ವಿರುದ್ಧ 1, ಆಸ್ಟ್ರೇಲಿಯಾ ವಿರುದ್ಧ 5)ಆಸ್ಟ್ರೇಲಿಯಾ62.504/7(ಭಾರತ ವಿರುದ್ಧ 5, ಲಂಕಾ ವಿರುದ್ಧ 2)ಶ್ರೀಲಂಕಾ55.563/4(ದ.ಆಫ್ರಿಕಾ ವಿರುದ್ಧ 2, ಆಸೀಸ್ ವಿರುದ್ಧ 2)ನ್ಯೂಜಿಲೆಂಡ್50.554/4(ಭಾರತ ವಿರುದ್ಧ 1, ಇಂಗ್ಲೆಂಡ್ ವಿರುದ್ಧ 3)ದ.ಆಫ್ರಿಕಾ47.624/5(ಬಾಂಗ್ಲಾ 1, ಲಂಕಾ 2, ಪಾಕ್ ವಿರುದ್ಧ 2)ಇಂಗ್ಲೆಂಡ್40.79ರೇಸಲ್ಲಿಲ್ಲ(ಕಿವೀಸ್ ವಿರುದ್ಧ 3 ಪಂದ್ಯ)ಪಾಕಿಸ್ತಾನ33.33ರೇಸಲ್ಲಿಲ್ಲ(ಆಫ್ರಿಕಾ ವಿರುದ್ಧ 2, ವಿಂಡೀಸ್ ವಿರುದ್ಧ 2)ಬಾಂಗ್ಲಾದೇಶ30.56ರೇಸಲ್ಲಿಲ್ಲ(ಆಫ್ರಿಕಾ ವಿರುದ್ಧ 1, ವಿಂಡೀಸ್ ವಿರುದ್ಧ 2)ವೆಸ್ಟ್‌ಇಂಡೀಸ್18.52ರೇಸಲ್ಲಿಲ್ಲ(ಬಾಂಗ್ಲಾ ವಿರುದ್ಧ 2, ಪಾಕ್ ವಿರುದ್ಧ 2)
ಇಂಗ್ಲೆಂಡ್, ಪಾಕಿಸ್ತಾನ ರೇಸ್‌ನಲ್ಲಿ ಯಾಕಿಲ್ಲ?
ಇಂಗ್ಲೆಂಡ್, ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ವಿಂಡೀಸ್ ಸದ್ಯ ಫೈನಲ್ ರೇಸ್‌ನಿಂದಲೇ ಹೊರಬಿದ್ದಿವೆ. ಇಂಗ್ಲೆಂಡ್‌ಗೆ ಕಿವೀಸ್ ವಿರುದ್ಧ ಮೂರು ಪಂದ್ಯ ಬಾಕಿಯಿದ್ದು, ಮೂರರಲ್ಲಿ ಗೆದ್ದರೂ ತಂಡದ ಗೆಲುವಿನ ಪ್ರತಿಶತ ಶೇ.48.86ಕ್ಕಿಂತ ಹೆಚ್ಚಾಗುವುದಿಲ್ಲ. ಇದು ಫೈನಲ್‌ಗೇರಲು ಸಾಕಾಗಲ್ಲ. ಪಾಕಿಸ್ತಾನ ಉಳಿದ 4 ಪಂದ್ಯಗಳಲ್ಲಿ ಗೆದ್ದರೂ ತಂಡದ ಅಂಕ ಕೇವಲ ಶೇ.52.38 ಆಗುತ್ತದೆ. ಯಾವುದೇ ತಂಡದ ಗೆಲುವಿನ ಪ್ರತಿಶತ ಶೇ.60ಕ್ಕಿಂತ ಹೆಚ್ಚಿದ್ದರಷ್ಟೇ ಫೈನಲ್‌ಗೇರಲಿದೆ.