ಸಾರಾಂಶ
ಅ.7ರಂದು ಆರಂಭವಾದ ಯುದ್ಧದಲ್ಲಿ ಇಲ್ಲಿಯವರೆಗೆ ಇಸ್ರೇಲಿ ಪಡೆಗಳು 15200ಕ್ಕೂ ಹೆಚ್ಚು ಪ್ಯಾಲೆಸ್ತೀನಿಯನ್ನು ಹತ್ಯೆ ಮಾಡಿವೆ ಎಂದು ಹಮಾಸ್ ನೇತೃತ್ವದ ಗಾಜಾ಼ ಆರೋಗ್ಯ ಸಚಿವಾಲಯ ತಿಳಿಸಿದೆ.
ಗಾಜಾ಼: ಅ.7ರಂದು ಆರಂಭವಾದ ಯುದ್ಧದಲ್ಲಿ ಇಲ್ಲಿಯವರೆಗೆ ಇಸ್ರೇಲಿ ಪಡೆಗಳು 15200ಕ್ಕೂ ಹೆಚ್ಚು ಪ್ಯಾಲೆಸ್ತೀನಿಯನ್ನು ಹತ್ಯೆ ಮಾಡಿವೆ ಎಂದು ಹಮಾಸ್ ನೇತೃತ್ವದ ಗಾಜಾ಼ ಆರೋಗ್ಯ ಸಚಿವಾಲಯ ತಿಳಿಸಿದೆ. ಜೊತೆಗೆ ಸಾವನ್ನಪ್ಪಿದವರಲ್ಲಿ ಶೇ.70ರಷ್ಟು ಮಹಿಳೆಯರು ಮತ್ತು ಮಕ್ಕಳೇ ಆಗಿದ್ದಾರೆ. 40 ಸಾವಿರಕ್ಕೂ ಹೆಚ್ಚು ಜನ ಗಾಯಗೊಮಡಿದ್ದಾರೆ’ ಎಂದು ತಿಳಿಸಿದೆ ಈ ನಡುವೆ ಖಾನ್ ಯೂನಿಸ್ ನಗರಕ್ಕೆ ವಲಸೆ ಬಂದಿರುವ ನಿವಾಸಿ ಇಮಾದ್ ಹಜಾ಼ರ್ ಅವರು, ‘ಇಸ್ರೇಲ್ ಆದೇಶದ ಮೇರೆಗೆ ಉತ್ತರ ಗಾಜಾ಼ದಿಂದ ಇಲ್ಲಿಗೆ ವಲಸೆ ಬಂದೆವು. ಈಗ ಇಲ್ಲಿಂದಲೂ ಜಾಗ ಖಾಲಿ ಮಾಡಲು ಹೇಳುತ್ತಿದ್ದಾರೆ. ಆದರೆ ಇಲ್ಲಿಂದ ಹೋಗಲು ನಮಗೆ ಬೇರೆ ಸ್ಥಳವಿಲ್ಲ’ ಎಂದು ಅಳಲು ತೋಡಿಕೊಳ್ಳುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ.