ಹಿಂಡನ್‌ಬರ್ಗ್‌ ವರದಿ ವಿವಾದ: ಅದಾನಿ ಕಂಪನಿಗೆ ಅಮೆರಿಕ ಕ್ಲೀನ್‌ಚಿಟ್‌

| Published : Dec 06 2023, 01:15 AM IST

ಹಿಂಡನ್‌ಬರ್ಗ್‌ ವರದಿ ವಿವಾದ: ಅದಾನಿ ಕಂಪನಿಗೆ ಅಮೆರಿಕ ಕ್ಲೀನ್‌ಚಿಟ್‌
Share this Article
  • FB
  • TW
  • Linkdin
  • Email

ಸಾರಾಂಶ

ಗೌತಮ್‌ ಅದಾನಿ ಒಡೆತನದ ಅದಾನಿ ಸಮೂಹದ ವಿರುದ್ಧ ಅಮೆರಿಕದ ಹಿಂಡನ್‌ಬರ್ಗ್‌ ಸಂಸ್ಥೆ ಮಾಡಿದ್ದ ಭ್ರಷ್ಟಾಚಾರದ ಆರೋಪಕ್ಕೆ ಅಮೆರಿಕ ಕ್ಲೀನ್‌ಚಿಟ್‌ ನೀಡಿದೆ.

ಆರೋಪ ಪರಿಶೀಲನೆ ಬಳಿಕವೇ ಲಂಕಾ ಬಂದರು ಯೋಜನೆಗೆ ಹೂಡಿಕೆ

ವಾಷಿಂಗ್ಟನ್‌: ಗೌತಮ್‌ ಅದಾನಿ ಒಡೆತನದ ಅದಾನಿ ಸಮೂಹದ ವಿರುದ್ಧ ಅಮೆರಿಕದ ಹಿಂಡನ್‌ಬರ್ಗ್‌ ಸಂಸ್ಥೆ ಮಾಡಿದ್ದ ಭ್ರಷ್ಟಾಚಾರದ ಆರೋಪಕ್ಕೆ ಅಮೆರಿಕ ಕ್ಲೀನ್‌ಚಿಟ್‌ ನೀಡಿದೆ. ಅದರ ಬೆನ್ನಲ್ಲೇ ಅದಾನಿ ಸಮೂಹದ ಷೇರುಗಳ ಬೆಲೆ ಭಾರೀ ಏರಿಕೆ ಕಂಡಿದೆ. ಅದಾನಿ ಸಮೂಹದ ವಿರುದ್ಧ ಹಿಂಡನಬರ್ಗ್‌ ರಿಸರ್ಚ್‌ ಮಾಡಿದ್ದ ಆರೋಪಗಳು ಶ್ರೀಲಂಕಾದಲ್ಲಿನ ಬಂದರು ಯೋಜನೆ ಹೂಡಿಕೆ ವಿಷಯಕ್ಕೆ ಸಂಬಂಧಿಸಿದಂತೆ ಅಪ್ರಸ್ತುತ ಎಂದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ನಾವು ಅದನ್ನು ಪರಿಶೀಲಿಸಿಯೇ ಹೂಡಿಕೆ ಮಾಡಿದ್ದೇವೆ ಎಂದು ಅಮೆರಿಕದ ಅಧಿಕಾರಿಯೊಬ್ಬರು ಹೇಳಿದ್ದಾರೆ.