ತಾಲಿಬಾನ್‌ ರಾಯಭಾರಿಗೆ ಚೀನಾ ಮಾನ್ಯತೆ: ವಿಶ್ವದಲ್ಲೇ ಮೊದಲು

| Published : Dec 06 2023, 01:15 AM IST

ಸಾರಾಂಶ

ಇತ್ತೀಚೆಗೆ ನಡೆದ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ 15 ಜನ ವೈದ್ಯರು ಗೆಲುವು ಸಾಧಿಸಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಸದ್ಯ ರಾಜ್ಯದ ವಿಧಾನಸಭೆಯಲ್ಲಿ ಶೇ.12ರಷ್ಟು ಜನ ವೈದ್ಯರೇ ಆಗಿದ್ದು, ಪ್ರತಿ 10 ಶಾಸಕರಲ್ಲಿ ಒಬ್ಬರು ವೈದ್ಯರಾಗಿದ್ದಾರೆ.

ಅಫ್ಘಾನಿಸ್ತಾನದ ರಾಯಭಾರಿಯನ್ನು ಚೀನಾಗೆ ಸ್ವಾಗತಿಸಲು ಒಪ್ಪಿಗೆ

ಬೀಜಿಂಗ್‌: ತಾಲಿಬಾನ್‌ ಆಡಳಿತವಿರುವ ಅಪ್ಘಾನಿಸ್ತಾನದ ರಾಯಭಾರಿಗೆ ಚೀನಾ ಮಾನ್ಯತೆ ನೀಡಿದೆ. ಇದರೊಂದಿಗೆ ತಾಲಿಬಾನ್‌ ಜತೆ ರಾಜತಾಂತ್ರಿಕ ಸಂಬಂಧಕ್ಕೆ ಮಾನ್ಯತೆ ನೀಡಿದ ಮೊದಲ ವಿಶ್ವದ ರಾಷ್ಟ್ರ ಎನಿಸಿಕೊಂಡಿದೆ.ಈ ಕುರಿತು ಮಾತನಾಡಿದ ಚೀನಿ ವಿದೇಶಾಂಗ ಸಚಿವಾಲಯದ ವಕ್ತಾರ ವ್ಯಾಂಗ್‌ ವೆನ್‌ಬಿನ್‌, ‘ಅಫ್ಘಾನಿಸ್ತಾನವನ್ನು ಅಂತಾರಾಷ್ಟ್ರೀಯ ಸಮುದಾಯದಿಂದ ಹೊರಗಿಡಬಾರದು ಎಂಬ ಉದ್ದೇಶದಿಂದ ರಾಯಭಾರಿಯಾಗಿ ಬಿಲಾಲ್‌ ಕರಿಮಿಯವರ ನೇಮಕಕ್ಕೆ ಅನುಮೋದಿಸಿದ್ದೇವೆ. ಆದರೆ ಪ್ರಪಂಚದ ಆಶೋತ್ತರಗಳಿಗೆ ತಕ್ಕಂತೆ ತಾಲಿಬಾನ್‌ ಆಡಳಿತ ತನ್ನ ಕಾರ್ಯವೈಖರಿಯನ್ನು ಬದಲಿಸಿಕೊಳ್ಳಲಿ ಎಂದು ಬಯಸುತ್ತೇವೆ’ ಎಂದಿದ್ದಾರೆ.ತಾಲಿಬಾನ್‌ ವಶಪಡಿಸಿಕೊಂಡ ನಂತರ ಕೇವಲ ಪಾಕಿಸ್ತಾನ, ರಷ್ಯಾ ಮತ್ತು ಚೀನಾ ಮಾತ್ರ ತಮ್ಮ ರಾಯಭಾರ ಕಚೇರಿಯನ್ನು ಅಫ್ಘಾನಿಸ್ತಾನದಲ್ಲಿ ಮುಂದುವರಿಸಿದ್ದವು.