ಫ್ರಾನ್ಸ್‌ ಶಾಲೆಗೆ ಚಾಕುಧಾರಿ ದಾಳಿ, ಓರ್ವ ಶಿಕ್ಷಕಿಯ ಹತ್ಯೆ

| Published : Oct 14 2023, 01:02 AM IST

ಫ್ರಾನ್ಸ್‌ ಶಾಲೆಗೆ ಚಾಕುಧಾರಿ ದಾಳಿ, ಓರ್ವ ಶಿಕ್ಷಕಿಯ ಹತ್ಯೆ
Share this Article
  • FB
  • TW
  • Linkdin
  • Email

ಸಾರಾಂಶ

ಪ್ಯಾರಿಸ್‌: ಶಾಲೆಯೊಂದಕ್ಕೆ ನುಗ್ಗಿ ಏಕಾಏಕಿ ಚಾಕುವಿನಿಂದ ದಾಳಿ ನಡೆಸಿದ ದುಷ್ಕರ್ಮಿಯೊಬ್ಬ ಶಾಲೆಯಲ್ಲಿದ್ದ ಓರ್ವ ಶಿಕ್ಷಕಿಯನ್ನು ಕೊಲೆಗೈದಿರುವ ಆಘಾತಕಾರಿ ಘಟನೆ ಫ್ರಾನ್ಸ್‌ನ ಅರಾಸ್‌ ನಗರದಲ್ಲಿ ಶುಕ್ರವಾರ ನಡೆದಿದೆ.
ಪ್ಯಾರಿಸ್‌: ಶಾಲೆಯೊಂದಕ್ಕೆ ನುಗ್ಗಿ ಏಕಾಏಕಿ ಚಾಕುವಿನಿಂದ ದಾಳಿ ನಡೆಸಿದ ದುಷ್ಕರ್ಮಿಯೊಬ್ಬ ಶಾಲೆಯಲ್ಲಿದ್ದ ಓರ್ವ ಶಿಕ್ಷಕಿಯನ್ನು ಕೊಲೆಗೈದಿರುವ ಆಘಾತಕಾರಿ ಘಟನೆ ಫ್ರಾನ್ಸ್‌ನ ಅರಾಸ್‌ ನಗರದಲ್ಲಿ ಶುಕ್ರವಾರ ನಡೆದಿದೆ. ಘಟನೆಯಲ್ಲಿ ಇನ್ನಿಬ್ಬರು ಗಾಯಗೊಂಡಿದ್ದು ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ದಾಳಿ ನಡೆಸಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದು ಇದೊಂದು ಸಂಭಾವ್ಯ ಭಯೋತ್ಪಾದಕ ಕೃತ್ಯ ಎನ್ನಲಾಗಿದೆ. ಇನ್ನು ದಾಳಿಕೋರ ಇದೇ ಶಾಲೆಯ ಹಳೆಯ ವಿದ್ಯಾರ್ಥಿ ಎನ್ನಲಾಗಿದೆ. ಇನ್ನೊಂದೆಡೆ ಇಸ್ರೇಲ್‌ ಮತ್ತು ಪ್ಯಾಲೆಸ್ತೀನ್‌ಗಳ ನಡುವೆ ಭಾರೀ ಯುದ್ಧ ನಡೆಯುತ್ತಿದ್ದು ಹಲವೆಡೆ ಯಹೂದಿಗಳ ವಿರುದ್ಧ ಪ್ರತಿಭಟನೆ ನಡೆಯುತ್ತಿದ್ದು ಇಸ್ರೇಲ್‌ ಅಮೆರಿಕ ಬಳಿಕ ಫ್ರಾನ್ಸ್‌ ಅತಿ ಹೆಚ್ಚು ಯಹೂದಿಗಳಿರುವ ರಾಷ್ಟ್ರವಾಗಿದೆ. ಈ ಹಿನ್ನೆಲೆ ಈ ಕೃತ್ಯವು ಇದೇ ಯುದ್ಧದ ಪ್ರೇರಿತ ದಾಳಿ ಎನ್ನಲಾಗುತ್ತಿದೆಯಾದರೂ ಖಚಿತ ಮಾಹಿತಿ ಇಲ್ಲ.