ವಿಶ್ವದ ಸಿರಿವಂತ ಉದ್ಯಮಿ ಎಲಾನ್ ಮಸ್ಕ್ ಅವರ ಖಾಸಗಿ ಬಾಹ್ಯಾಕಾಶ ಸಂಸ್ಥೆ ‘ಸ್ಪೇಸ್ಎಕ್ಸ್’, ಮತ್ತೊಂದು ಸಾಧನೆ ಮಾಡಿದೆ. ಸ್ಪೇಸ್ ಎಕ್ಸ್ ಶುಕ್ರವಾರ ಹಾರಿಬಿಟ್ಟಿದ್ದ ‘ಸ್ಟಾರ್ಶಿಪ್’ ರಾಕೆಟ್, ಭೂಮಿಯನ್ನು 22 ತಾಸು ಸುತ್ತುವರೆದು ಅದೇ ಲಾಂಚ್ಪ್ಯಾಡ್ನಲ್ಲಿ ಶನಿವಾರ ಇಳಿದಿದೆ.
ಕೇಪ್ ಕನವೆರಲ್: ವಿಶ್ವದ ಸಿರಿವಂತ ಉದ್ಯಮಿ ಎಲಾನ್ ಮಸ್ಕ್ ಅವರ ಖಾಸಗಿ ಬಾಹ್ಯಾಕಾಶ ಸಂಸ್ಥೆ ‘ಸ್ಪೇಸ್ಎಕ್ಸ್’, ಮತ್ತೊಂದು ಸಾಧನೆ ಮಾಡಿದೆ. ಸ್ಪೇಸ್ ಎಕ್ಸ್ ಶುಕ್ರವಾರ ಹಾರಿಬಿಟ್ಟಿದ್ದ ‘ಸ್ಟಾರ್ಶಿಪ್’ ರಾಕೆಟ್, ಭೂಮಿಯನ್ನು 22 ತಾಸು ಸುತ್ತುವರೆದು ಅದೇ ಲಾಂಚ್ಪ್ಯಾಡ್ನಲ್ಲಿ ಶನಿವಾರ ಇಳಿದಿದೆ. ಈ ಮೂಲಕ ಭೂಮಿಯನ್ನು ಸುತ್ತುವರೆದು ಅದೇ ಲಾಂಚ್ಪ್ಯಾಡ್ನಲ್ಲಿ ಇಳಿದ ಮೊದಲ ರಾಕೆಟ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಮರುಬಳಕೆ ಮಾಡಬಹುದಾದ ರಾಕೆಟ್ಗಳನ್ನು ನಿರ್ಮಿಸುವ ಕಂಪನಿಯ ಅನ್ವೇಷಣೆಯಲ್ಲಿ ಈ ಯಶಸ್ವಿ ಕಾರ್ಯಾಚರಣೆಯು ಒಂದು ಪ್ರಮುಖ ಹೆಜ್ಜೆಯಾಗಿದೆ.
ಸಾಧನೆ ಹೇಗಾಯ್ತು?:
ಶುಕ್ರವಾರ ಕ್ಸಾಸ್ನ ಸ್ಟಾರ್ಬೇಸ್ನಿಂದ ಉಡಾವಣೆಗೊಂಡ ಸ್ಟಾರ್ಶಿಪ್ ನೌಕೆಯು ಸುಮಾರು 22.5 ಗಂಟೆಗಳ ಕಾಲ ಬಾಹ್ಯಾಕಾಶದಲ್ಲಿತ್ತು. ಭೂಮಿಯ ಸುತ್ತ 14 ಸುತ್ತುಗಳನ್ನು ಪೂರ್ಣಗೊಳಿಸಿದ ನಂತರ, ಶನಿವಾರ ಮರಳಿ ಬಂದು ಉಡಾವಣಾ ಗೋಪುರದ ಯಾಂತ್ರಿಕ ತೋಳುಗಳ (ಚಾಪ್ಸ್ಟಿಕ್ಸ್) ನಡುವೆ ಸುರಕ್ಷಿತವಾಗಿ ಸೆರೆಯಾಯಿತು.
ಜಗತ್ತಿನ ಬಾಹ್ಯಾಕಾಶ ಇತಿಹಾಸದಲ್ಲಿ ಭೂಮಿಯನ್ನು ಸುತ್ತಿ ಬಂದ ರಾಕೆಟ್ನ್ನು ಈ ರೀತಿ ಮರುಬಳಕೆಗಾಗಿ ಸುರಕ್ಷಿತವಾಗಿ ಹಿಡಿದಿರುವುದು ಇದೇ ಮೊದಲು.
ಈ ನಡುವೆ, ಸ್ಟಾರ್ಶಿಪ್ ನೌಕೆಯು ಭೂಮಿಯ ಕಕ್ಷೆಯಲ್ಲಿ 22 ಗಂಟೆಗಳ ಕಾಲ ಇದ್ದು 14 ತಾಸು ಸುತ್ತಿದ ಸಂದರ್ಭದಲ್ಲಿ 26 ಹೊಸ ತಲೆಮಾರಿನ ಸ್ಟಾರ್ಲಿಂಕ್-ವಿ3 ಉಪಗ್ರಹಗಳನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿತು.
ಲಾಭ ಏನು?:
ಸಾಮಾನ್ಯವಾಗಿ ಉಪಗ್ರಹಗಳನ್ನು ಹೊತ್ತು ಸಾಗುವ ರಾಕೆಟ್ ಅನ್ನು (ವಾಹಕ/ನೌಕೆ) ಸಮುದ್ರದಲ್ಲಿ ಪತನ ಮಾಡಿಸಲಾಗುತ್ತದೆ. ಆದರೆ ಈಗ ಉಡಾವಣಾ ಸ್ಥಳದಲ್ಲೇ ಸುರಕ್ಷಿತವಾಗಿ, ಇಳಿಸಿ ‘ಚಾಪ್ಸ್ಟಿಕ್ಸ್’ನಲ್ಲಿ ಬಂಧಿಸಲಾಗುತ್ತದೆ. ಇದನ್ನು ಮತ್ತೊಂದು ಉಡಾವಣೆಗೆ ಬಳಕೆ ಮಾಡಬಹುದಾಗಿದೆ. ಹೀಗಾಗಿ ಈ ತಂತ್ರಜ್ಞಾನವು ಭವಿಷ್ಯದ ಬಾಹ್ಯಾಕಾಶ ಯಾನಗಳ ವೆಚ್ಚವನ್ನು ಗಣನೀಯವಾಗಿ ತಗ್ಗಿಸಲಿದೆ.
