ಅಮೆರಿಕದ ನಾಯಿಗಳಲ್ಲಿದಿಢೀರ್‌ ವಿನೂತನಉಸಿರಾಟ ಖಾಯಿಲೆ

| Published : Nov 19 2023, 01:30 AM IST

ಸಾರಾಂಶ

ಅಮೆರಿಕದ ಸಾಕುನಾಯಿಗಳಲ್ಲಿ ವಿನೂತನ ರೀತಿಯಲ್ಲಿ ದಿಢೀರ್‌ ಉಸಿರಾಟ ಸಂಬಂಧಿ ಖಾಯಿಲೆ ಕಾಣಿಸಿಕೊಂಡಿದೆ.

ಚಿಕಿತ್ಸೆ ನೀಡಲಾಗದೇ ವೈದ್ಯರಿಗೂ ತಲ್ಲಣ

ಕೊಲಾರಾಡೋ: ಅಮೆರಿಕದ ಸಾಕುನಾಯಿಗಳಲ್ಲಿ ವಿನೂತನ ರೀತಿಯಲ್ಲಿ ದಿಢೀರ್‌ ಉಸಿರಾಟ ಸಂಬಂಧಿ ಖಾಯಿಲೆ ಕಾಣಿಸಿಕೊಂಡಿದೆ. ಈ ಸಮಸ್ಯೆಗೆ ಸದ್ಯಕ್ಕೆ ಯಾವುದೇ ಪ್ರಮಾಣೀಕೃತ ಚಿಕಿತ್ಸಾ ವಿಧಾನ ಇಲ್ಲದಿರುವುದರಿಂದ ವೈದ್ಯರು ತುಸು ಆತಂಕಕ್ಕೆ ಒಳಗಾಗಿದ್ದಾರೆ. ರೋಗದ ಲಕ್ಷಣಗಳಲ್ಲಿ ನ್ಯುಮೋನಿಯಾ, ಅತಿಯಾದ ಬಳಲಿಕೆ, ಕೆಮ್ಮು, ಸೀನುವಿಕೆ, ಕಣ್ಣುಗಳಲ್ಲಿ ಉರಿ ಮುಂತಾದವುಗಳಿದ್ದು ರೋಗನಿರೋಧಕಗಳಿಗೂ ಸಹ ಅವುಗಳು ಸ್ಪಂದಿಸದಿರುವುದು ಗಂಭೀರವಾಗಿ ಚಿಂತಿಸುವಂತೆ ಮಾಡಿದೆ. ಕಳೆದ ಆಗಸ್ಟ್‌ನಿಂದ ಅಮೆರಿಕದ ವಿವಿಧ ರಾಜ್ಯಗಳಲ್ಲಿ ಇಂತಹ 200 ಪ್ರಕರಣಗಳು ಗಮನಕ್ಕೆ ಬಂದಿದ್ದು, ಇಂತಹ ಲಕ್ಷಣಗಳು ಕಾಣಿಸಿದಲ್ಲಿ ತಕ್ಷಣವೇ ಸಾಕುನಾಯಿಗಳ ಮಾಲೀಕರು ತಮ್ಮ ಪಶುವೈದ್ಯರನ್ನು ಸಂಪರ್ಕಿಸುವಂತೆಯೂ, ಇತರ ನಾಯಿಗಳಿಂದ ಅಂತರ ಕಾಪಾಡಿಕೊಳ್ಳುವುದು ಹಾಗೂ ಕಾಲಕಾಲಕ್ಕೆ ರೋಗನಿರೋಧಕ ಲಸಿಕೆಗಳನ್ನು ಕೊಡಿಸಬೇಕೆಂದು ಹಿರಿಯ ಪಶುವೈದ್ಯಾಧಿಕಾರಿಗಳು ಸಲಹೆ ನೀಡಿದ್ದಾರೆ.