ಲಕ್ಷ್ಮಣ ರೇಖೆ ದಾಟಬಾರದು ಭಾರತಕ್ಕೆ ಅಮೆರಿಕ ಎಚ್ಚರಿಕೆ

| Published : Apr 01 2024, 12:52 AM IST / Updated: Apr 01 2024, 04:12 AM IST

ಸಾರಾಂಶ

ಅಮೆರಿಕದಲ್ಲಿರುವ ಖಲಿಸ್ತಾನಿ ಉಗ್ರ ಗುರುಪತ್ವಂತ್‌ ಸಿಂಗ್‌ ಪನ್ನೂನ್‌ ಹತ್ಯೆಗೆ ಭಾರತ ಯತ್ನಿಸಿತ್ತು ಎಂಬ ಆರೋಪಗಳ ಬೆನ್ನಲ್ಲೇ, ಮತ್ತೊಂದು ದೇಶದ ಪ್ರಜೆ ವಿಷಯದಲ್ಲಿ ಯಾರೂ ಕೂಡಾ ಲಕ್ಷ್ಮಣ ರೇಖೆ ದಾಟಬಾರದು ಎಂದು ಅಮೆರಿಕ ಭಾರತಕ್ಕೆ ಪರೋಕ್ಷ ಎಚ್ಚರಿಕೆ ನೀಡಿದೆ.

ನವದೆಹಲಿ: ಅಮೆರಿಕದಲ್ಲಿರುವ ಖಲಿಸ್ತಾನಿ ಉಗ್ರ ಗುರುಪತ್ವಂತ್‌ ಸಿಂಗ್‌ ಪನ್ನೂನ್‌ ಹತ್ಯೆಗೆ ಭಾರತ ಯತ್ನಿಸಿತ್ತು ಎಂಬ ಆರೋಪಗಳ ಬೆನ್ನಲ್ಲೇ, ಮತ್ತೊಂದು ದೇಶದ ಪ್ರಜೆ ವಿಷಯದಲ್ಲಿ ಯಾರೂ ಕೂಡಾ ಲಕ್ಷ್ಮಣ ರೇಖೆ ದಾಟಬಾರದು ಎಂದು ಅಮೆರಿಕ ಭಾರತಕ್ಕೆ ಪರೋಕ್ಷ ಎಚ್ಚರಿಕೆ ನೀಡಿದೆ. 

ಸುದ್ದಿಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿರುವ ಭಾರತದಲ್ಲಿನ ಅಮೆರಿಕ ರಾಯಭಾರಿ ಎರಿಕ್‌ ಗಾರ್ಸೆಟಿ, ‘ವಿದೇಶಿ ಪ್ರಜೆಯೊಬ್ಬನ ಹತ್ಯೆಗೆ ಯಾವುದೇ ಸರ್ಕಾರ, ಯಾವುದೇ ಸರ್ಕಾರದ ಉದ್ಯೋಗಿ ಯತ್ನಿಸಬಾರದು. ಈ ವಿಷಯದಲ್ಲಿ ಯಾರೂ ಲಕ್ಷ್ಮಣರೇಖೆ ದಾಟಬಾರದು. ಏಕೆಂದರೆ ಅದು ಒಂದು ದೇಶದ ಸಾರ್ವಭೌಮತೆಯ ಪ್ರಶ್ನೆ ಎಂದರು. 

ಜೊತೆಗೆ ಪನ್ನೂನ್‌ ಹತ್ಯೆ ವಿಫಲ ಯತ್ನಕ್ಕೆ ಸಂಬಂಧಿಸಿದಂತೆ ಭಾರತ ಮತ್ತು ಅಮೆರಿಕ ಜಂಟಿಯಾಗಿ ತನಿಖೆ ನಡೆಸುತ್ತಿವೆ ಎಂದು ಹೇಳಿದರು.