ಪ್ರಿಯಕನ ವರಿಸಲು ಪಾಕ್‌ಗೆತೆರಳಿದ್ದ ಅಂಜು ಮಕ್ಕಳನೋಡಲು ಭಾರತಕ್ಕೆ

| Published : Nov 30 2023, 01:15 AM IST

ಸಾರಾಂಶ

ತನ್ನ ಫೇಸ್ಬುಕ್‌ ಗೆಳೆಯ ನಸ್ರುಲ್ಲಾ (29)ನನ್ನು ವಿವಾಹವಾಗಲು ಪಾಕಿಸ್ತಾನಕ್ಕೆ ತೆರಳಿದ್ದ ರಾಜಸ್ಥಾನ ಮೂಲದ ಅಂಜು ಅಲಿಯಾಸ್‌ ಫಾತಿಮಾ (34), ತನ್ನ ಇಬ್ಬರು ಮಕ್ಕಳನ್ನು ನೋಡುವ ಸಲುವಾಗಿ ಭಾರತಕ್ಕೆ ಮರಳಿದ್ದಾಳೆ.

ಅಟ್ಟಾರಿ: ತನ್ನ ಫೇಸ್ಬುಕ್‌ ಗೆಳೆಯ ನಸ್ರುಲ್ಲಾ (29)ನನ್ನು ವಿವಾಹವಾಗಲು ಪಾಕಿಸ್ತಾನಕ್ಕೆ ತೆರಳಿದ್ದ ರಾಜಸ್ಥಾನ ಮೂಲದ ಅಂಜು ಅಲಿಯಾಸ್‌ ಫಾತಿಮಾ (34), ತನ್ನ ಇಬ್ಬರು ಮಕ್ಕಳನ್ನು ನೋಡುವ ಸಲುವಾಗಿ ಭಾರತಕ್ಕೆ ಮರಳಿದ್ದಾಳೆ. ಸ್ನೇಹಿತನ ಭೇಟಿ ಹೆಸರಲ್ಲಿ ಪಾಕ್‌ಗೆ ತೆರಳಿದ್ದ ಅಂಜು, ಬಳಿಕ ಇಸ್ಲಾಂ ಧರ್ಮಕ್ಕೆ ಮತಾಂತರವಾಗಿ ನುಸ್ರುಲ್ಲಾನನ್ನು ವರಿಸಿದ್ದಳು. ಆದರೆ ಇಬ್ಬರು ಮಕ್ಕಳನ್ನು ನೋಡದೇ ಪರಿತಪಿಸುತ್ತಿದ್ದ ಕಾರಣಕ್ಕೆ ಭಾರತಕ್ಕೆ ಬಂದು ಹೋಗಲು ನಿರ್ಧರಿಸಿದ್ದಳು. ಇದಕ್ಕೆ ಆಕೆಯ ಪತಿ ಕೂಡಾ ಸಮ್ಮತಿಸಿದ್ದ. ಅಂಜು ಅಟ್ಟಾರಿ ಗಡಿ ಮೂಲಕ ಬುಧವಾರ ಭಾರತಕ್ಕೆ ಆಗಮಿಸಿದ್ದಾಳೆ. ಮಕ್ಕಳನ್ನು ಭೇಟಿಯಾಗಿ ಕೆಲ ದಿನ ಭಾರತದಲ್ಲಿದ್ದು ಬಳಿಕ ಆಕೆ ಮರಳಲಿದ್ದಾಳೆ ಎಂದು ಪಾಕ್‌ ಮಾಧ್ಯಮಗಳು ವರದಿ ಮಾಡಿವೆ.