ನಾನು 3 ಮಹಿಳೆಯರೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದೆ. ಲೈಂಗಿಕ ಶೋಷಣೆ ಹಗರಣದ ಆರೋಪಿ ಜೆಫ್ರಿ ಎಪ್‌ಸ್ಟೀನ್‌ ಇದೇ ವಿಚಾರ ಮುಂದಿಟ್ಟುಕೊಂಡು ನನ್ನನ್ನು ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದ’ ಎಂದು ಮೈಕ್ರೋಸಾಫ್ಟ್‌ ಸಂಸ್ಥಾಪಕ ಬಿಲ್‌ ಗೇಟ್ಸ್‌ ಹೇಳಿದ್ದಾರೆ

ವಾಷಿಂಗ್ಟನ್‌: ‘ನಾನು 3 ಮಹಿಳೆಯರೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದೆ. ಲೈಂಗಿಕ ಶೋಷಣೆ ಹಗರಣದ ಆರೋಪಿ ಜೆಫ್ರಿ ಎಪ್‌ಸ್ಟೀನ್‌ ಇದೇ ವಿಚಾರ ಮುಂದಿಟ್ಟುಕೊಂಡು ನನ್ನನ್ನು ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದ’ ಎಂದು ಮೈಕ್ರೋಸಾಫ್ಟ್‌ ಸಂಸ್ಥಾಪಕ ಬಿಲ್‌ ಗೇಟ್ಸ್‌ ಹೇಳಿದ್ದಾರೆ.

ಅಮೆರಿಕದ ಇತಿಹಾಸದ ಅತಿದೊಡ್ಡ ಲೈಂಗಿಕ ಹಗರಣದ ಪ್ರಮುಖ ರೂವಾರಿ ಎಪ್‌ಸ್ಟೈನ್‌ನ ಜಾಲ ಮತ್ತು ಒಡನಾಡಿಗಳ ಕುರಿತು ತನಿಖೆ ನಡೆಸುತ್ತಿರುವ ಅಮೆರಿಕದ ಕಾಂಗ್ರೆಸ್‌ ಪ್ರತಿನಿಧಿಗಳ ಸಭೆಯ ಮೇಲ್ವಿಚಾರಣಾ ಸಮಿತಿ ಮುಂದೆ ಈ ಹೇಳಿಕೆ ನೀಡಿದ್ದಾರೆ.

ಸ್ವಯಂಪ್ರೇರಿತರಾಗಿ ಹಾಜರಾದ ಗೇಟ್ಸ್‌

ಜೂ.10ರಂದು ಸಮಿತಿ ಮುಂದೆ ಸ್ವಯಂಪ್ರೇರಿತರಾಗಿ ಹಾಜರಾದ ಗೇಟ್ಸ್‌, ‘ರಷ್ಯಾದ ಕಾರ್ಡ್ಸ್‌ ಆಟಗಾರ್ತಿ ಮಿಲಾ ಆ್ಯಂಟೊನೋವಾ ಹಾಗೂ ಅಣು ಭೌತವಿಜ್ಞಾನಿ ಕರಿಮಾ ನಿಗ್ಮತುಲಿನಾ ಜತೆಗೆ ನನಗೆ ವಿವಾಹೇತರ ಸಂಬಂಧ ಇತ್ತು. ಅದು ಎಪ್‌ಸ್ಟೀನ್‌ಗೆ ಗೊತ್ತಿತ್ತು. ಬಳಿಕ ವೈದ್ಯಕೀಯ ಉದ್ಯಮಿ ಅಲೈಸ್‌ ಜಾಕೋಬ್ಸ್‌ ನೆಸೆಲ್ರೋಡ್‌ ಜತೆಗೂ ನಾನು ಸಂಬಂಧ ಹೊಂದಿದ್ದೆ. ಕುಟುಂಬಕ್ಕೆ ನಾನು ಮಾಡಿದ ದ್ರೋಹವನ್ನು ಎಪ್‌ಸ್ಟೀನ್‌ ನನ್ನ ವಿರುದ್ಧ ಬಳಸಲು ಮುಂದಾಗಿದ್ದ. ಅದರ ಮೇಲೆ ಆತ ಇನ್ನಷ್ಟು ಕಥೆಗಳನ್ನು ಬೇರೆ ಪೋಣಿಸಿದ್ದ. ಈ ಮೂಲಕ ಆತನ ಜತೆಗೆ ಮತ್ತೆ ಸಂಪರ್ಕದಲ್ಲಿರುವಂತೆ ಒತ್ತಡ ಹೇರಿದ್ದ’ ಎಂದರು.

ಸಂಬಂಧಗಳಿಗೂ ಎಪ್‌ಸ್ಟೀನ್‌ ಜತೆಗಿನ ಮಾತುಕತೆಗೂ ಸಂಬಂಧ ಇಲ್ಲ

‘ಈ ಸಂಬಂಧಗಳಿಗೂ ಎಪ್‌ಸ್ಟೀನ್‌ ಜತೆಗಿನ ಮಾತುಕತೆಗೂ ಯಾವುದೇ ಸಂಬಂಧ ಇಲ್ಲ. ಆತನ ಯಾವುದೇ ಅಪರಾಧಗಳಲ್ಲಿ ನನ್ನ ಪಾತ್ರ ಇಲ್ಲ’ ಎಂದು ಸ್ಪಷ್ಟಪಡಿಸಿದ ಗೇಟ್ಸ್‌, ಆತನ ಜತೆಗೆ ಸಂಪರ್ಕ ಉಳಿಸಿಕೊಂಡಿದ್ದು ನಾನು ಮಾಡಿದ ತಪ್ಪು ಎಂದು ಹೇಳಿಕೊಂಡರು.

ಆತ ಶಿಕ್ಷೆಗೆ ಗುರಿಯಾಗಿದ್ದಾನೆ ಎಂಬುದರ ಬಗ್ಗೆ ಮಾಹಿತಿ ಇತ್ತು. ನಾನು ಆತನನ್ನು ಸೀಮಿತ ಅವಧಿಯ ಭೇಟಿಗಷ್ಟೇ ಅವಕಾಶ ನೀಡಿದ್ದೆ, ಆತನ ಜತೆಗಿನ ಭೇಟಿ ಬಹುತೇಕ ದಾನದ ವಿಚಾರಕ್ಕೆ ಎಂದು ಅವರು ಹೇಳಿದರು.