ಬ್ರಿಟನ್‌ ರಾಜಕುವರಿ ಕೇಟ್‌ಗೆ ಕ್ಯಾನ್ಸರ್‌

| Published : Mar 23 2024, 01:04 AM IST / Updated: Mar 23 2024, 12:36 PM IST

ಸಾರಾಂಶ

ಬ್ರಿಟನ್‌ ರಾಜಕುಮಾರಿ ಕೇಟ್‌ ತನಗೆ ಕ್ಯಾನ್ಸರ್‌ ಇರುವುದಾಗಿ ಸ್ವತಃ ಘೋಷಿಸಿಕೊಂಡಿದ್ದಾರೆ.

ಲಂಡನ್‌: ಬ್ರಿಟನ್‌ ರಾಜಕುವರಿ ಕೇಟ್‌, ತನಗೆ ಕ್ಯಾನ್ಸರ್‌ ಇದೆ. ಹೀಗಾಗಿ ಕೀಮೋಥೆರಪಿ ಮಾಡಿಸಿಕೊಳ್ಳುತ್ತಿದ್ದೇನೆ ಎಂದು ಶುಕ್ರವಾರ ರಾತ್ರಿ ಹೇಳಿದ್ದಾರೆ.

ಜನವರಿಯಲ್ಲಿ ನಡೆದ ಹೊಟ್ಟೆ ಸರ್ಜರಿ ಬಳಿಕ ಅವರು ಹೆಚ್ಚು ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ ಹಾಗೂ ದಾಂಪತ್ಯದ ಬಗ್ಗೆಯೂ ಊಹಾಪೋಹ ಎದ್ದಿದ್ದವು.

ಈ ನಡುವೆ ವಿಡಿಯೋ ಹೇಳಿಕೆ ನೀಡಿರುವ ಕೇಟ್‌, ತನಗೆ ಕ್ಯಾನ್ಸರ್‌ ಇದ್ದು, ಕೀಮೋಥೆರಪಿ ಮಾಡಿಸಿಕೊಳ್ಳುತ್ತಿದ್ದೇನೆ ಎಂದಿದ್ದಾರೆ.