ಇಸ್ರೇಲ್‌-ಗಾಜಾ ಯುದ್ಧಕ್ಕೆ 4 ದಿನ ಬ್ರೇಕ್‌

| Published : Nov 23 2023, 01:45 AM IST

ಸಾರಾಂಶ

ಕಳೆದ ಅ.7ರಂದು ಇಸ್ರೇಲ್‌ ಮೇಲೆ ಹಮಾಸ್‌ ಉಗ್ರರ ದಾಳಿ ಬಳಿಕ ಆರಂಭಗೊಂಡು, ನಂತರದ ಎರಡೂವರೆ ತಿಂಗಳಲ್ಲಿ 15000ಕ್ಕೂ ಹೆಚ್ಚು ಜನರನ್ನು ಬಲಿ ಪಡೆದ ಯುದ್ಧಕ್ಕೆ, ಗುರುವಾರದಿದ ಜಾರಿಗೆ ಬರುವಂತೆ ಕೊನೆಗೂ 4 ದಿನಗಳ ತಾತ್ಕಾಲಿಕ ಕದನ ವಿರಾಮ ಘೋಷಿಸಲು ನಿರ್ಧರಿಸಲಾಗಿದೆ.

ಇಂದಿನಿಂದ ಒತ್ತೆಯಾಳು ವಿನಿಮಯ

ಅಮೆರಿಕ-ಕತಾರ್‌ ಸಂಧಾನ ಯಶಸ್ವಿವಿರಾಮದ ಬಳಿಕ ಮತ್ತೆ ಯುದ್ಧ ಶುರುಜೆರುಸಲೆಂ: ಕಳೆದ ಅ.7ರಂದು ಇಸ್ರೇಲ್‌ ಮೇಲೆ ಹಮಾಸ್‌ ಉಗ್ರರ ದಾಳಿ ಬಳಿಕ ಆರಂಭಗೊಂಡು, ನಂತರದ ಎರಡೂವರೆ ತಿಂಗಳಲ್ಲಿ 15000ಕ್ಕೂ ಹೆಚ್ಚು ಜನರನ್ನು ಬಲಿ ಪಡೆದ ಯುದ್ಧಕ್ಕೆ, ಗುರುವಾರದಿದ ಜಾರಿಗೆ ಬರುವಂತೆ ಕೊನೆಗೂ 4 ದಿನಗಳ ತಾತ್ಕಾಲಿಕ ಕದನ ವಿರಾಮ ಘೋಷಿಸಲು ನಿರ್ಧರಿಸಲಾಗಿದೆ.

ಈ 4 ದಿನದಲ್ಲಿ ಹಮಾಸ್‌ ಉಗ್ರರು 50 ಇಸ್ರೇಲಿ ಒತ್ತೆಯಾಳುಗಳ ಬಿಡುಗಡೆಗೆ ಒಪ್ಪಿದ್ದು, ಇದಕ್ಕೆ ಪ್ರತಿಯಾಗಿ ಇಸ್ರೇಲ್‌ ಸರ್ಕಾರ, 150 ಪ್ಯಾಲೆಸ್ತೀನಿ ಬಂಧಿತರ ಬಿಡುಗಡೆಗೆ ಒಪ್ಪಿಕೊಂಡಿದೆ. ಹೀಗಾಗಿ ಕದನ ವಿರಾಮ ಸಾರಲಾಗಿದೆ.

ಗುರುವಾರ ಬೆಳಗ್ಗೆ 10 ಗಂಟೆಯಿಂದ ಕದನ ವಿರಾಮ ಜಾರಿಗೆ ಬರಲಿದೆ. 10 ಗಂಟೆಯಿಂದ ಬಂಧಿತರ ವಿನಿಮಯ ನಡೆಯಲಿದೆ.

ಆದರೆ ಕದನ ವಿರಾಮದ ಬಳಿಕ ಯುದ್ಧ ಮುಂದುವರೆಯಲಿದೆ, ನಮ್ಮ ಗುರಿ ಈಡೇರುವವರೆಗೂ ನಾವು ಹಿಂದೆ ಸರಿಯುವುದಿಲ್ಲ ಎಂದು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಗುಡುಗಿದ್ದಾರೆ.ಸಂಧಾನ ಯಶಸ್ವಿ:ಕದನ ವಿರಾಮಕ್ಕೆ ಇಸ್ರೇಲ್‌ ಒಪ್ಪಿಸುವಲ್ಲಿ ಅಮೆರಿಕ, ಕತಾರ್‌ ಮತ್ತು ಈಜಿಪ್ಟ್‌ ನಡೆಸಿದ ಸಂಧಾನ ಮಾತುಕತೆ ಫಲಪ್ರದವಾಗಿದೆ. ಸಂಧಾನದ ಅನ್ವಯ 4 ದಿನಗಳ ಕಾಲ ಕದನ ವಿರಾಮ ಘೋಷಿಸಲು ಇಸ್ರೇಲ್‌ ಸಚಿವ ಸಂಪುಟ ಸಮ್ಮತಿಸಿದೆ. ಆದರೆ ಸಂಪುಟದ ನಿರ್ಧಾರವನ್ನು ಜನತೆ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಲು ಅನುವಾಗುವಂತೆ ಒಂದು ದಿನದ ಕಾಲಾವಕಾಶ ನೀಡಲಾಗುವುದು.

ಒತ್ತೆಯಾಳುಗಳು, ಬಂಧಿತರ ಬಿಡುಗಡೆ ಮತ್ತು ಸಂತ್ರಸ್ತರಿಗೆ ಅಗತ್ಯ ನೆರವು ಪೂರೈಸುವ ನಿಟ್ಟಿನಲ್ಲಿ 4 ದಿನಗಳ ಕಾಲ ಕದನ ವಿರಾಮ ಜಾರಿ ಮಾಡಲು ಉಭಯ ದೇಶಗಳು ಒಪ್ಪಿಕೊಂಡಿವೆ.ಒಪ್ಪಂದದಲ್ಲಿ ಏನಿದೆ?:ಉಭಯ ದೇಶಗಳ ನಡುವೆ ಆದ ಒಪ್ಪಂದ ಅನ್ವಯ ಹಮಾಸ್‌ ಉಗ್ರರು ತಾವು ಒತ್ತೆ ಇಟ್ಟು 240ಕ್ಕೂ ಹೆಚ್ಚು ಒತ್ತೆಯಾಳುಗಳ ಪೈಕಿ ಮೊದಲ ಹಂತದಲ್ಲಿ ಮಕ್ಕಳು, ಮಹಿಳೆಯರು ಸೇರಿದಂತೆ 50 ಜನರನ್ನು ಬಿಡುಗಡೆ ಮಾಡಲಿದ್ದಾರೆ. ಅದಕ್ಕೆ ಪ್ರತಿಯಾಗಿ ತಾನು ಬಂಧಿಸಿದ 150 ಪ್ಯಾಲೆಸ್ತೀನ್‌ ಪ್ರಜೆಗಳನ್ನು ಇಸ್ರೇಲ್‌ ಬಿಡುಗಡೆ ಮಾಡಲಿದೆ.ಇದಾದ ನಂತರ ಉಗ್ರರು ಬಿಡುಗಡೆ ಮಾಡುವ ಪ್ರತಿ 10 ಒತ್ತೆಯಾಳುಗಳಿಗೆ ಒಂದು ದಿನದಂತೆ ಕದನ ವಿರಾಮ ವಿಸ್ತರಣೆ ಮಾಡಲು ಇಸ್ರೇಲ್‌ ಸಮ್ಮತಿಸಿದೆ. ಆದರೆ ಈ ಹಂತದಲ್ಲಿ ತಾನು ಬಿಡುಗಡೆ ಮಾಡುವ ಪ್ಯಾಲೆಸ್ತೀನಿಗಳ ಕುರಿತು ಇಸ್ರೇಲ್‌ ಯಾವುದೇ ಮಾಹಿತಿ ನೀಡಿಲ್ಲ.