ಚೀನಾದಲ್ಲಿ ಕೊರೋನಾ ವೈರಸ್‌ ಮಾರಿಯ ಹೆಚ್‌ಎಂಪಿವಿ ಸೋಂಕು : ಹಾಂಕಾಂಗ್, ಜಪಾನ್‌ಗೂ ವೈರಸ್‌ ಲಗ್ಗೆ

| Published : Jan 04 2025, 01:31 AM IST / Updated: Jan 04 2025, 04:07 AM IST

ಸಾರಾಂಶ

ಚೀನಾದಲ್ಲಿ ಕೊರೋನಾ ವೈರಸ್‌ ಮಾರಿಯ ಹೆಚ್‌ಎಂಪಿವಿ (ಹ್ಯೂಮನ್‌ ಮೆಟಾನ್ಯುಮೋ ವೈರಸ್‌) ಸೋಂಕು ಹರಡಿ ಭಾರೀ ಆತಂಕ ಹುಟ್ಟುಹಾಕಿರುವಾಗಲೇ, ಅತ್ತ ಜಪಾನ್‌ ಮತ್ತು ಸಿಂಗಾಪುರ ದೇಶಗಳಲ್ಲೂ ಇದೇ ಸೋಂಕಿನ ವೈರಸ್‌ ಭಾರೀ ಪ್ರಮಾಣದಲ್ಲಿ ವ್ಯಾಪಿಸಿರುವ ಸುದ್ದಿ ಹೊರಬಿದ್ದಿದೆ.

ಟೋಕಿಯೋ/ಹಾಂಕಾಂಗ್‌/ಬೀಜಿಂಗ್: ಚೀನಾದಲ್ಲಿ ಕೊರೋನಾ ವೈರಸ್‌ ಮಾರಿಯ ಹೆಚ್‌ಎಂಪಿವಿ (ಹ್ಯೂಮನ್‌ ಮೆಟಾನ್ಯುಮೋ ವೈರಸ್‌) ಸೋಂಕು ಹರಡಿ ಭಾರೀ ಆತಂಕ ಹುಟ್ಟುಹಾಕಿರುವಾಗಲೇ, ಅತ್ತ ಜಪಾನ್‌ ಮತ್ತು ಸಿಂಗಾಪುರ ದೇಶಗಳಲ್ಲೂ ಇದೇ ಸೋಂಕಿನ ವೈರಸ್‌ ಭಾರೀ ಪ್ರಮಾಣದಲ್ಲಿ ವ್ಯಾಪಿಸಿರುವ ಸುದ್ದಿ ಹೊರಬಿದ್ದಿದೆ.

ಜಪಾನ್‌ ಬ್ರಾಡ್‌ಕಾಸ್ಟಿಂಗ್‌ ಕಾರ್ಪೊರೇಷನ್‌ ಮಾಧ್ಯಮ ವರದಿ ಪ್ರಕಾರ, ಡಿ.15ರ ವರೆಗೆ ಒಂದೇ ವಾರದಲ್ಲಿ 94,259 ಜನರು ಸೋಂಕಿಗೆ ತುತ್ತಾಗಿದ್ದಾರೆ. ಇದರೊಂದಿಗೆ ಪ್ರಸ್ತುತ ಜಪಾನ್‌ನಲ್ಲಿರುವ ಸೋಂಕಿಗೆ ತುತ್ತಾದವರ ಸಂಖ್ಯೆ 718,000ಕ್ಕೆತಲುಪಿದೆ. ಸದ್ಯ ದೇಶದಲ್ಲಿ ಚಳಿಗಾಲ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮುಂಬರುವ ದಿನಗಳಲ್ಲಿ ಸೋಂಕು ಇನ್ನಷ್ಟು ವ್ಯಾಪಕವಾಗುವ ಆತಂಕವೂ ಎದುರಾಗಿದೆ.

ಇನ್ನೊಂದೆಡೆ ಚೀನಾದ ನೆರೆಯ ದೇಶವಾದ ಹಾಂಕಾಂಗ್‌ನಲ್ಲೂ ಸೋಂಕು ವ್ಯಾಪಿಸಿದೆ. ಚೀನಾ ಹಾಗೂ ಜಪಾನ್‌ನಷ್ಟು ಅಲ್ಲದಿದ್ದರೂ, 1000ಕ್ಕೂ ಹೆಚ್ಚು ಹೆಚ್‌ಎಂಪಿವಿ ಪ್ರಕರಣಗಳ ದಾಖಲಾಗಿವೆ.

ಈ ಹಿಂದೆ ಕೋವಿಡ್‌ ವೈರಸ್‌ ಚಳಿಗಾಲದ ವೇಳೆ ಚೀನಾದಲ್ಲಿ ವ್ಯಾಪಕವಾದಾಗ ಅತ್ತ ಜಪಾನ್‌ ಮತ್ತು ಹಾಂಕಾಂಗ್‌ನಲ್ಲೂ ಹೆಮ್ಮಾರಿಯಂತೆ ಹರಡಿ ಸಾವಿರಾರು ಜನರನ್ನು ಬಲಿಪಡೆದಿತ್ತು.