ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ 3 ವರ್ಷಗಳ ಕನಿಷ್ಠಕ್ಕೆ: ಪೆಟ್ರೋಲ್‌, ಡೀಸೆಲ್‌ ದರ ಇಳಿಕೆ?

| Published : Sep 13 2024, 01:35 AM IST / Updated: Sep 13 2024, 04:09 AM IST

petrol diesel
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ 3 ವರ್ಷಗಳ ಕನಿಷ್ಠಕ್ಕೆ: ಪೆಟ್ರೋಲ್‌, ಡೀಸೆಲ್‌ ದರ ಇಳಿಕೆ?
Share this Article
  • FB
  • TW
  • Linkdin
  • Email

ಸಾರಾಂಶ

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ 3 ವರ್ಷಗಳ ಕನಿಷ್ಠಕ್ಕೆ ಇಳಿದಿದ್ದು, ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್‌, ಡೀಸೆಲ್‌ ದರ ಇಳಿಕೆಯ ಆಸೆ ಗರಿಗೆದರುವಂತೆ ಮಾಡಿದೆ. ಇದಕ್ಕೆ ಪೂರಕವಾಗಿದೆ, ಇದೇ ದರ ಮುಂದವರೆದರೆ ತೈಲ ಕಂಪನಿಗಳು ದರ ಇಳಿಸಬಹುದು ಎಂದು ಕೇಂದ್ರ ಸರ್ಕಾರ ಹೇಳಿದೆ.

ನವದೆಹಲಿ: ರಷ್ಯಾ- ಉಕ್ರೇನ್‌ ನಡುವಿನ ಸಂಘರ್ಷವನ್ನು ಕೊನೆಗಾಣಿಸಲು ಪ್ರಯತ್ನಗಳು ನಡೆಯುತ್ತಿರುವ ಹೊತ್ತಿನಲ್ಲೇ ಭಾರತದ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ರಷ್ಯಾದ ಸೆಂಟ್ ಪೀಟರ್ಸ್‌ಬರ್ಗ್‌ನಲ್ಲಿ ನಡೆಯುತ್ತಿರುವ ಬ್ರಿಕ್ಸ್‌ ದೇಶಗಳ ಭದ್ರತಾ ಸಲಹೆಗಾರರ ಸಮಾವೇಶದ ಸಂದರ್ಭದಲ್ಲಿ ಈ ಮಾತುಕತೆ ನಡೆದಿದೆ. ಇತ್ತೀಚೆಗೆ ಉಕ್ರೇನ್‌ ಪ್ರವಾಸ ಕೈಗೊಂಡಿದ್ದ ಮೋದಿ, ಮಾತುಕತೆಯ ಮೂಲಕ ಸಂಘರ್ಷವನ್ನು ಕೊನೆಗಾಣಿಸಬೇಕು ಎಂದಿದ್ದರು. ಅದರ ಬೆನ್ನಲಲ್ಲೇ ಭಾರತ, ಚೀನಾ, ಬ್ರೆಜಿಲ್‌ ದೇಶಗಳ ಮಧ್ಯಸ್ಥಿಕೆಯಲ್ಲಿ ಸಂಘರ್ಷವನ್ನು ನಿಲ್ಲಿಸಬಹುದು ಎಂದು ಪುಟಿನ್‌ ಹೇಳಿದ್ದರು. ಇದರ ಬೆನ್ನಲ್ಲೇ ದೋವಲ್‌ ರಷ್ಯಾಗೆ ಭೇಟಿ ನೀಡಿದ್ದಾರೆ. ಪುಟಿನ್‌ ಜೊತೆಗಿನ ಮಾತುಕತೆ ವೇಳೆ ಸಂಧಾನ ಸೂತ್ರಗಳನ್ನು ದೋವಲ್‌ ಮುಂದಿಟ್ಟಿರಬಹುದು ಎಂದು ವಿಶ್ಲೇಷಿಸಲಾಗಿದೆ.

==

ಕಚ್ಚಾತೈಲ ದರ 3 ವರ್ಷದ ಕನಿಷ್ಠ: ಪೆಟ್ರೋಲ್‌, ಡೀಸೆಲ್‌ ದರ ಇಳಿಕೆ?

ನವದೆಹಲಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ 3 ವರ್ಷಗಳ ಕನಿಷ್ಠಕ್ಕೆ ಇಳಿದಿದ್ದು, ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್‌, ಡೀಸೆಲ್‌ ದರ ಇಳಿಕೆಯ ಆಸೆ ಗರಿಗೆದರುವಂತೆ ಮಾಡಿದೆ. ಇದಕ್ಕೆ ಪೂರಕವಾಗಿದೆ, ಇದೇ ದರ ಮುಂದವರೆದರೆ ತೈಲ ಕಂಪನಿಗಳು ದರ ಇಳಿಸಬಹುದು ಎಂದು ಕೇಂದ್ರ ಸರ್ಕಾರ ಹೇಳಿದೆ.

ಕಳೆದ ಮಂಗಳವಾರ ಕಚ್ಚಾತೈಲದ ಬೆಲೆ ಬ್ಯಾರಲ್‌ಗೆ 70 ಡಾಲರ್‌ಗೆ ಇಳಿದಿತ್ತು. ಇದು 2020ರ ನಂತರ ಅತಿಕನಿಷ್ಠ ಬೆಲೆ. ಹೀಗಾಗಿ ತೈಲ ಕಂಪನಿಗಳು ಕಳೆದ 3 ವರ್ಷಗಳಲ್ಲೇ ಕನಿಷ್ಠ ದರ ಲಾಭವನ್ನು ಚೆನ್ನಾಗಿ ಮಾಡಿಕೊಳ್ಳುತ್ತಿವೆ. ಹೀಗಾಗಿ ಇನ್ನಷ್ಟು ದಿನ ಇದೇ ದರ ಮುಂದುವರೆದರೆ, 2 ವರ್ಷಗಳಿಂದ ಹೆಚ್ಚು-ಕಡಿಮೆ ಆಗದೇ ಅಲ್ಲೇ ಇರುವ ತೈಲ ದರ ಇಳಿಕೆಯಾಗುವ ಸಾಧ್ಯತೆ ಇದೆ.ಜಾಗತಿಕವಾಗಿ ಇಂಧನದ ಬೆಲೆ ಇಳಿಕೆಯಾದರೆ ರಾಜ್ಯ ಸರ್ಕಾರಗಳ ಒಡೆತನದ ಇಂಧನ ಕಂಪನಿಗಳು ಕೂಡ ಬೆಲೆ ಇಳಿಸಬಹುದು ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಪಂಕಜ್‌ ಜೈನ್‌ ಹೇಳಿದ್ದಾರೆ.