ಬ್ರಿಟನ್‌ ಪ್ರಧಾನಿ ರಾಜೀನಾಮೆಗೆ ವಿಶ್ವದ ನಂ.1 ಶ್ರೀಮಂತ ಎಲಾನ್‌ ಮಸ್ಕ್‌ ಒತ್ತಾಯ

| Published : Jan 07 2025, 12:32 AM IST / Updated: Jan 07 2025, 04:06 AM IST

ಸಾರಾಂಶ

ವಿಶ್ವದ ನಂ.1 ಶ್ರೀಮಂತ ಹಾಗೂ ಅಮೆರಿಕ ಭಾವಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಆಪ್ತ ಎಲಾನ್‌ ಮಸ್ಕ್ ಅವರು ಬ್ರಿಟನ್‌ ಪ್ರಧಾನ ಮಂತ್ರಿ ಸರ್ ಕೀರ್ ಸ್ಟಾರ್ಮರ್ ಅವರ ರಾಜೀನಾಮೆಗೆ ಒತ್ತಾಯಿಸಿದ್ದಾರೆ ಹಾಗೂ ‘ಸ್ಟಾರ್ಮರ್‌ ಇಡೀ ದೇಶಕ್ಕೇ ಮುಜುಗರ’ ಎಂದು ಟೀಕಿಸಿದ್ದಾರೆ.

ವಾಷಿಂಗ್ಟನ್‌: ಲಂಡನ್‌ : ವಿಶ್ವದ ನಂ.1 ಶ್ರೀಮಂತ ಹಾಗೂ ಅಮೆರಿಕ ಭಾವಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಆಪ್ತ ಎಲಾನ್‌ ಮಸ್ಕ್ ಅವರು ಬ್ರಿಟನ್‌ ಪ್ರಧಾನ ಮಂತ್ರಿ ಸರ್ ಕೀರ್ ಸ್ಟಾರ್ಮರ್ ಅವರ ರಾಜೀನಾಮೆಗೆ ಒತ್ತಾಯಿಸಿದ್ದಾರೆ ಹಾಗೂ ‘ಸ್ಟಾರ್ಮರ್‌ ಇಡೀ ದೇಶಕ್ಕೇ ಮುಜುಗರ’ ಎಂದು ಟೀಕಿಸಿದ್ದಾರೆ.

ಇತ್ತೀಚೆಗೆ ಬ್ರಿಟನ್‌ನಲ್ಲಿ ಪಾಕ್‌ ಮೂಲದ ದುಷ್ಕರ್ಮಿಗಳು ಇರುವ ‘ಪಾಕಿಸ್ತಾನಿ ಗ್ರೂಮಿಂಗ್ ಗ್ಯಾಂಗ್‌ಗಳು’ (ರೇಪ್‌ ಗ್ಯಾಂಗ್‌) ಅಟ್ಟಹಾಸ ಮೆರೆಯುತ್ತಿದ್ದು ಯುವತಿಯರು, ಮಕ್ಕಳ ಮೇಲೆ ಅತ್ಯಾಚಾರ ಎಸಗುತ್ತಿವೆ. ಇವನ್ನು ತಡೆಯಲು ಸ್ಟಾರ್ಮರ್‌ ವಿಫಲರಾಗಿದ್ದಾರೆ ಎಂಬ ಆರೋಪ ಕೇಳಿಬಂದಿದ್ದವು.

ಇದಕ್ಕೆ ಮಸ್ಕ್‌ ಪ್ರತಿಕ್ರಿಯಿಸಿದ್ದು, ‘ಅತ್ಯಾಚಾರ ಗ್ಯಾಂಗ್‌ಗಳ ಹೆಡೆಮುರಿ ಕಟ್ಟಲಯ ಸ್ಟಾರ್ಮರ್ ವಿಫಲರಾಗಿದ್ದಾರೆ. ಅವರೊಬ್ಬ ರಾಷ್ಟ್ರೀಯ ಮುಜುಗರ. ರಾಜೀನಾಮೆ ನೀಡಬೇಕು’ ಎಂದಿದ್ದಾರೆ.

ಆದರೆ ಸ್ಟಾರ್ಮರ್‌ ಪ್ರತಿಕ್ರಿಯಿಸಿ, ‘ಮಸ್ಕ್‌ ತಪ್ಪು ಮಾಹಿತಿ ಆಧರಿಸಿ ಆರೋಪಿಸಿದ್ದಾರೆ. ಅವರು ಬ್ರಿಟನ್‌ ಆಂತರಿಕ ರಾಜಕೀಯದಲ್ಲಿ ಮೂಗು ತೂರಿಸಬಾರದು’ ಎಂದು ತಿರುಗೇಟು ನೀಡಿದ್ದಾರೆ.