ಸಾರಾಂಶ
ಜಿ-20 ರಾಷ್ಟ್ರಗಳ ಒಕ್ಕೂಟದಲ್ಲಿ ಭಾರತದ ಅಧ್ಯಕ್ಷತೆಯ ಅವಧಿ ಗುರುವಾರಕ್ಕೆ ಮುಕ್ತಾಯವಾಗಲಿದೆ. ಡಿ.1ರಂದು ಅಧಿಕಾರ ಹಸ್ತಾಂತರವಾಗಲಿದೆ. ಮುಂದಿನ 1 ವರ್ಷದ ಅವಧಿಗೆ ಬ್ರೆಜಿಲ್ ಜಿ 20 ರಾಷ್ಟ್ರಗಳ ಒಕ್ಕೂಟದ ಅಧ್ಯಕ್ಷತೆ ವಹಿಸಿಕೊಳ್ಳಲಿದೆ
ನವದೆಹಲಿ: ಜಿ-20 ರಾಷ್ಟ್ರಗಳ ಒಕ್ಕೂಟದಲ್ಲಿ ಭಾರತದ ಅಧ್ಯಕ್ಷತೆಯ ಅವಧಿ ಗುರುವಾರಕ್ಕೆ ಮುಕ್ತಾಯವಾಗಲಿದೆ. ಡಿ.1ರಂದು ಅಧಿಕಾರ ಹಸ್ತಾಂತರವಾಗಲಿದೆ. ಮುಂದಿನ 1 ವರ್ಷದ ಅವಧಿಗೆ ಬ್ರೆಜಿಲ್ ಜಿ 20 ರಾಷ್ಟ್ರಗಳ ಒಕ್ಕೂಟದ ಅಧ್ಯಕ್ಷತೆ ವಹಿಸಿಕೊಳ್ಳಲಿದೆ. ಕಳೆದ ವರ್ಷ ಡಿ.1ರಂದು ಅಧ್ಯಕ್ಷತೆ ವಹಿಸಿಕೊಂಡಿದ್ದ ಭಾರತ ವರ್ಷಪೂರ್ತಿ ದೇಶಾದ್ಯಂತ ವಿವಿಧ ಸಭೆಗಳನ್ನು ನಡೆಸಿತ್ತು. ವಸುಧೈವ ಕುಟುಂಬಕಂ ಎಂಬ ಧ್ಯೇಯವಾಕ್ಯದೊಂದಿಗೆ ಈ ಬಾರಿಯ ಜಿ20 ಶೃಂಗಸಭೆಯನ್ನು ಸೆ.9, 10ರಂದು ದೆಹಲಿಯಲ್ಲಿ ಆಯೋಜಿಸಲಾಗಿತ್ತು. ಈ ವೇಳೆ ಆಫ್ರಿಕನ್ ಒಕ್ಕೂಟವನ್ನು ಅಧಿಕೃತವಾಗಿ ಜಿ20 ಒಕ್ಕೂಟಕ್ಕೆ ಸೇರ್ಪಡೆ ಮಾಡಿಕೊಳ್ಳಲಾಯಿತು. ಮುಂದಿನ ಒಂದು ವರ್ಷಗಳ ಕಾಲ ಭಾರತ ಜಿ 20 ಸಭೆಗಳನ್ನು ಆಯೋಜಿಸುವ ಮೂರು ರಾಷ್ಟ್ರಗಳ ಪಟ್ಟಿಯಲ್ಲಿ ಇರಲಿದ್ದು, ಬ್ರೆಜಿಲ್ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲೂ ಸಹ ಪ್ರಮುಖ ಪಾತ್ರ ವಹಿಸಲಿದೆ.